ಕೋವಿಡ್​-19 : ವಿಶ್ವದಾದ್ಯಂತ 1.64 ಕೋಟಿ ಮಂದಿದೆ ಸೋಂಕು, 6.5 ಲಕ್ಷ ಮಂದಿ ಸಾವು

ಅಮೆರಿಕಾ, ವಾಷಿಂಗ್ಟನ್: ವಿಶ್ವದಾದ್ಯಂತ 1,64,05,194 ಮಂದಿಗೆ ಕೋವಿಡ್​ 19 ಸೋಂಕು ದೃಢಪಟ್ಟಿದ್ದು, 6,51,674 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯತನಕ 1,00,37,636 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಲ್ಡ್​​​ ವರ್ಡೊಮೀಟರ್‌ ವೆಬ್‌ಸೈಟ್ https://www.worldometers.info/coronavirus/‌ ಮಾಹಿತಿ ನೀಡಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕಾ ಅಗ್ರಸ್ಥಾನದಲ್ಲಿದ್ದು ಆ ದೇಶವೊಂದರಲ್ಲೇ 43,71,500 ಸೋಂಕಿತರಿದ್ದು, ಈ ವರೆಗೆ 1,49,845 ಮಂದಿ ಸಾವನ್ನಾಪ್ಪಿದ್ದಾರೆ.

ಅಮೆರಿಕದ ಬಳಿಕ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದೆ. ಈ ದೇಶದಲ್ಲಿ 24,19,901 ಪ್ರಕರಣಗಳು ಬೆಳಕಿಗೆ ಬಂದಿವೆ. 16, 34,274 ಸೋಂಕಿತರು ಗುಣಮುಖರಾಗಿದ್ದು, 87,052 ಮಂದಿ ಬಲಿಯಾಗಿದ್ದಾರೆ.

ಭಾರತದಲ್ಲಿ 14,36,019, ರಷ್ಯಾದಲ್ಲಿ 8,12,485, ದಕ್ಷಿಣ ಆಫ್ರಿಕಾದಲ್ಲಿ 4,45,433, ಪೆರುವಿನಲ್ಲಿ 3,79,884, ಸ್ಪೇನ್‌ನಲ್ಲಿ 3,19,501, ಚಿಲಿಯಲ್ಲಿ 3,45,790, ಇಂಗ್ಲೆಂಡ್‌ನಲ್ಲಿ 2,99,426, ಕೋವಿಡ್​​ 19 ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 45,752, ಮೆಕ್ಸಿಕೊದಲ್ಲಿ 43,374, ಇಟಲಿಯಲ್ಲಿ 35,107, ಪ್ರಾನ್ಸ್‌ನಲ್ಲಿ 30,192, ಸ್ಪೇನ್‌ನಲ್ಲಿ 28,432, ಪೆರುವಿನಲ್ಲಿ 18,030, ರಷ್ಯಾದಲ್ಲಿ 13,269, ಚಿಲಿಯಲ್ಲಿ 9,112, ದಕ್ಷಿಣ ಆಫ್ರಿಕಾದಲ್ಲಿ 6,769 ಮತ್ತು ಪಾಕಿಸ್ತಾನದಲ್ಲಿ 5,822 ಜನರು ಸಾವಿಗೀಡಾಗಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *