ವಿಶ್ವದಾದ್ಯಂತ ಕೋವಿಡ್​ 19 ಆರ್ಭಟ: 1.5 ಕೋಟಿ ಮಂದಿಗೆ ಸೋಂಕು ದೃಢ, 6.3 ಲಕ್ಷ ಮಂದಿ ಸಾವು

ಅಮೆರಿಕಾ, ವಾಷಿಂಗ್ಟನ್: ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ಸಂಶೋಧನ ಕೇಂದ್ರದ ಮಾಹಿತಿ ಪ್ರಕಾರ, ಪ್ರಪಂಚದಾದ್ಯಂತ 1,54,35,114 ಮಂದಿಗೆ ಕೋವಿಡ್​ 19‌ ಸೋಂಕು ದೃಢಪಟ್ಟಿದ್ದು, 6,31,811 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯತನಕ 95,30,000 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸದ್ಯ 54,75,450 ಸಕ್ರಿಯ ಪ್ರಕರಣಗಳು ಇವೆ.

ವಿಶ್ವದಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 40,32,430 ಮಂದಿಗೆ ಕೋವಿಡ್​ 19 ಸೋಂಕು ಪತ್ತೆ, ಇದುವರೆಗೆ 1,44,167 ಮಂದಿ ಸಾವಿಗೀಡಾಗಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಅಮೆರಿಕದಲ್ಲಿ 76,570 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 1,225 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 22,87,475 ಮಂದಿಗೆ ಸೋಂಕು ದೃಢಪಟ್ಟಿದ್ದು, 84,082 ಮಂದಿ ಸಾವನ್ನಪ್ಪಿದ್ದಾರೆ. ಇತ್ತ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 12,38,798 ಮಂದಿ ಸೋಂಕು ತಗುಲಿದ್ದು, 29,861 ಮಂದಿ ಬಲಿಯಾಗಿದ್ದಾರೆ.

ರಷ್ಯಾದಲ್ಲಿ 7,93,720, ದಕ್ಷಿಣ ಆಫ್ರಿಕಾದಲ್ಲಿ 4,08,052, ಪೆರುವಿನಲ್ಲಿ 3,71,096, ಚಿಲಿಯಲ್ಲಿ 3,34,683, ಇಂಗ್ಲೆಂಡ್‌ನಲ್ಲಿ 2,98,721, ಸ್ಪೇನ್‌ನಲ್ಲಿ 2,70,166 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 45,639, ಇಟಲಿಯಲ್ಲಿ 35,092, ಮೆಕ್ಸಿಕೊದಲ್ಲಿ 41,908, ಪ್ರಾನ್ಸ್‌ನಲ್ಲಿ 30,185, ಸ್ಪೇನ್‌ನಲ್ಲಿ 28,429, ಪೆರುವಿನಲ್ಲಿ 17,654, ರಷ್ಯಾದಲ್ಲಿ 12,873, ಮತ್ತು ಪಾಕಿಸ್ತಾನದಲ್ಲಿ 5,709 ಜನರು ಸಾವಿಗೀಡಾಗಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *