ಭಾರತ-ಅಮೆರಿಕಾ ನೌಕಪಡೆಗಳ ಜಂಟಿ ಸಮರಾಭ್ಯಾಸ

ನವದೆಹಲಿ: ಲಡಾಖ್ ಗಡಿ ಸಂಘರ್ಷ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವಿನ ಭಿನ್ನಾಭಿಪ್ರಾಯವಿರುವಾಗಲೇ, ಬಂಗಾಳ ಕೊಲ್ಲಿಯ ಅಂಡಮಾನ್ ಮತ್ತು ನಿಕೋಬರ್ ದ್ವೀಪದ ಬಳಿ ಅಮೆರಿಕಾ ಮತ್ತು ಭಾರತದ ನೌಕಪಡೆಗಳು ಜಂಟಿ ಸಮರಾಭ್ಯಾಸದಲ್ಲಿ ತೊಡಗಿಕೊಂಡಿವೆ.

ಯುಎಸ್ಎಸ್ ನಿಮಿಟ್ಜ್​​​​ ನೇತೃತ್ವದ ಅಮೆರಿಕದ ಫ್ಲೋಟಿಲ್ಲಾ ಪರಮಾಣು ಚಾಲಿತ ವಿಮಾನ ವಾಹಕ ನೌಕೆ ಹಾಗೂ ಭಾರತೀಯ ನೌಕಪಡೆಗಳು ಉಭಯ ಪಡೆಗಳ ನಡುವಿನ ವಿಶ್ವಾಸ ಮೂಡಿಸಲು ಪಾಸೆಕ್ಸ್ ಕುಶಲತೆಯ ಪ್ರದರ್ಶಿಸಿವೆ.

ಚೀನಾದ ವಿಸ್ತರಣಾವಾದಿ ಯೋಜನೆಗಳಿಗೆ ಬ್ರೇಕ್​ ಹಾಕುವ ನಿಟ್ಟಿನಲ್ಲಿ ನಿಮ್ಟಿಜ್ ಮತ್ತು ರೋನಾಲ್ಡ್ ರೇಗನ್, ನಾಲ್ಕು ಯುದ್ಧ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.

ಎಎನ್​ಐ ಸುದ್ದಿ ಮೂಲದ ಪ್ರಕಾರ, ನಿಮ್ಜಿಟ್ ಮತ್ತು ಯುಎಸ್ ಎಸ್ ರೋನಾಲ್ಡ್ ರೇಗಾನ್ ದಕ್ಷಿಣ ಚೀನಾ ಸಮುದ್ರದಲ್ಲಿ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದು, ಇಂಡೋ ಫೆಸಿಪಿಕ್ ಮುಕ್ತ ಮತ್ತು ಸ್ವಾತಂತ್ರ್ಯವನ್ನು ಬೆಂಬಲಿಸುತ್ತಿರುವುದನ್ನು ಖಚಿತಪಡಿಸುವುದಾಗಿ ರೊನಾಲ್ಡ್ ರೇಗಾನ್ ಕ್ಯಾರಿಯರ್ ಸ್ಟ್ರೈಕ್ ಲೆಫ್ಟಿನೆಂಟ್ ಕಮಾಂಡರ್ ಸೀನ್ ಭ್ರೋಪಿ ತಿಳಿಸಿರುವುದಾಗಿ ವರದಿ ಮಾಡಿದೆ.

ಗಾಲ್ವಾನ್‌ನಲ್ಲಿನ ಸಂಘರ್ಷದ ಬಳಿಕ ಭಾರತೀಯ ನೌಕಾಪಡೆ ತನ್ನ ಕಣ್ಗಾವಲು ಕಾರ್ಯಗಳನ್ನು ಹೆಚ್ಚಿಸಿತು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಾರ್ಯಾಚರಣೆಯ ನಿಯೋಜನೆಯನ್ನು ಸಹ ಹೆಚ್ಚಿಸಿತು.

ಸಂಪನ್ಮೂಲ ಸಮೃದ್ಧ ಪ್ರದೇಶದಲ್ಲಿ ಮಿಲಿಟರಿ ಪ್ರಭಾವವನ್ನು ವಿಸ್ತರಿಸುವ ಚೀನಾ ಪ್ರಯತ್ನ ಹಿನ್ನೆಲೆಯಲ್ಲಿ ಭಾರತ, ಯುಎಸ್, ಜಪಾನ್, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಸಹಕಾರವನ್ನು ನೀಡುತ್ತಿವೆ.

Recommended For You

About the Author: user

Leave a Reply

Your email address will not be published. Required fields are marked *