‘ಅವತ್ತು ನೀನು ದೊಡ್ಡ ಮನುಷ್ಯ ದಾನ, ವೀರ, ಶೂರ, ಕರ್ಣ’

ಚಿತ್ರದುರ್ಗ: ಕೋವಿಡ್ 19 ಚಿಕಿತ್ಸೆಗಾಗಿ 10 ಸಾವಿರ ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ, ಪತ್ರಕರ್ತರು ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್​​ಗಳಾಗಿ, ಜೀವದ ಹಂಗು ತೊರೆದು ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಪತ್ರಕರ್ತರಿಗೆ ಕೊರೊನಾ ಸೋಂಕು ತಗುಲಿದೆ ಅದಕ್ಕೋಸ್ಕರ ಪತ್ರಕರ್ತರ ಬೇಡಿಕೆಯಂತೆ ಆದಷ್ಟು ಬೇಗ ಇನ್ಶೂರೆನ್ಸ್ ಮಾಡಿಸಲು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ.

ಶನಿವಾರ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಗಳಿಗೂ ಕೊರೊನಾ ಹರಡುಲು ಶುರುವಾಗಿದೆ. ಹೀಗಾಗಿ ನನ್ನ ನಡೆ ಹಳ್ಳಿಗಳ ಕಡೆ ಎಂಬಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದರು.

ಕೋವಿಡ್ ಉಪಕರಣ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಸಿದ್ದರಾಮಯ್ಯ ಅವರಿಗೆ ಯಾವುದೇ ದಾಖಲೆ ಇದ್ದರು ಬಿಡುಗಡೆ ಮಾಡುವ ಸ್ವತಂತ್ರ ಇದೆ. ಅದರ ಬದಲು ಭ್ರಷ್ಟಾಚಾರ, ಅವ್ಯವಹಾರ ಆಗಿದೆ ಎಂದು ಯಾಕೆ ಮಾತನಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ, ಸಿದ್ದರಾಮಯ್ಯ 2 ಸಾವಿರ ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಹೇಳುತ್ತಿದ್ದಾರೆ. ಕೋವಿಡ್ ಸಲಕರಣೆ ಖರೀದಿ ಮಾಡಲು ಖರ್ಚಾಗಿರುವುದು 500 ರಿಂದ 600 ಕೋಟಿ ರೂಪಾಯಿ, 2 ಸಾವಿರ ಕೋಟಿ ಎಲ್ಲಿಂದ ಭ್ರಷ್ಟಾಚಾರ ಆಗಿದೆ ಎಂದು ಗೊತ್ತಾಗುತ್ತಿಲ್ಲ, ಉಪ್ಪು ತಿಂದಮೇಲೆ ನೀರು ಕುಡಿಯಬೇಕು, ದಾಖಲೆಗಳಿದ್ದರೆ ಬಿಡುಗಡೆ ಮಾಡಿ, ಸರ್ಕಾರದ ಹಣ ದುರುಪಯೋಗ ಮಾಡಿ ಯಾರು ಬದುಕಲು ಸಾಧ್ಯವಿಲ್ಲ, ಸಿದ್ದರಾಮಯ್ಯ ಯಾಕೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ(?) ಎಂದರು.

ಹಿಂದೆ ಸವಾಲು ಹಾಕಿ ಬಳ್ಳಾರಿ ಬ್ರದರ್ಸ್ ಜೈಲಿಗೆ ಹೋಗಿದ್ದನ್ನು ನೆನಪಿಸಿಕೊಳ್ಳಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಎಕ್ಸ್​ಪೈರಿ ಡೇಟ್​ಗಳನ್ನು ನೆನಪಿಸಿಕೊಳ್ಳುವುದರಿಂದ ಇವತ್ತಿನ ತಪ್ಪುಗಳನ್ನ ಸರಿ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ, ನಿನ್ನ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿ, ಯಾರು ಜೈಲಿಗೆ ಹೋಗಬೇಕೋ ಅವರು ಜೈಲಿಗೆ ಹೋಗುತ್ತಾರೆ. ಅವತ್ತು ನೀನು ಬಹಳ ದೊಡ್ಡ ಮನುಷ್ಯ ದಾನ, ವೀರ, ಶೂರ, ಕರ್ಣ. ಬಳ್ಳಾರಿ ಬ್ರದರ್ಸ್ ಗಳನ್ನು ಜೈಲಿಗೆ ಕಳುಹಿಸಿದೆ. ಇವತ್ತು ಶಕ್ತಿ ಇದ್ರೆ ಎಲ್ಲರನ್ನೂ ಜೈಲಿಗೆ ಕಳುಹಿಸು ಯಾರು ಬೇಡ ಅಂತಾರೆ ಎಂದು ಸಚಿವ ಶ್ರೀರಾಮುಲು ಅವರು ಸಿದ್ದರಾಮಯ್ಯಗೆ ಸವಾಲ್​ ಹಾಕಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *