‘ಲಾಕ್​ಡೌನ್ ಜನರ ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದು’ – ಡಿಸಿಎಂ ಅಶ್ವಥ್​ ನಾರಾಯಣ್​

ಬೆಂಗಳೂರು: ಸದ್ಯಕ್ಕೆ ಬೆಂಗಳೂರಿನಲ್ಲಿ ಲಾಕ್​ಡೌನ್ ಜಾರಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವಥ್​ ನಾರಾಯಣ್ ಅವರು ಶನಿವಾರ ಹೇಳಿದರು.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೊರೊನಾ ವಿಚಾರವಾಗಿ ಲಾಕ್​ಡೌನ್ ಅನ್ನೋದು ಒಂದು ಆಯ್ಕೆ ಅಷ್ಟೇ. ಲಾಕ್​ಡೌನ್ ಕೊರೊನಾಗೆ ಸಲ್ಯೂಷನ್ ಅಲ್ಲ, ಲಾಕ್​ಡೌನ್​ನಿಂದ ಕೊರೊನಾ ಸೋಂಕನ್ನು ಮುಂದಕ್ಕೆ ಹಾಕಬಹುದಷ್ಟೇ.  ಶನಿವಾರದ ಲಾಕ್​ಡೌನ್ ಬಗ್ಗೆ ಸಹ ಯಾವುದೇ ಅವಶ್ಯಕತೆ ಕಂಡಿಲ್ಲ, ಅವಶ್ಯಕತೆ ಬಿದ್ರೆ ಮುಖ್ಯಮಂತ್ರಿಗಳು ಆ ಬಗ್ಗೆ ನಿರ್ಧಾರಿಸುತ್ತಾರೆ ಎಂದು ಅವರು ಹೇಳಿದರು.

ಶನಿವಾರ ಕೂಡ ಲಾಕ್​ಡೌನ್ ಮಾಡಬೇಕೋ ಬೇಡವೋ ಎಂದು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ. ಲಾಕ್​ಡೌನ್ ಜನರ ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದು. ಆದರೆ, ಲಾಕ್​ಡೌನ್​ನಿಂದ ವೈರಸ್ ಹರಡುವುದನ್ನು ಮುಂದೂಡಬಹುದೇ ಹೊರತು ತಡೆಯಲು ಸಾಧ್ಯವಿಲ್ಲ, ಲಾಕ್​ಡೌನ್ ಬಗ್ಗೆ ಇಲ್ಲಿಯತನಕ ನಮಗೆ ಒಲವು ಇಲ್ಲ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ. ಎಲ್ಲವೂ ಸಿಎಂ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.

ಸದ್ಯ ಪಿಪಿಇ ಕಿಟ್​ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಕೋವಿಡ್ 19 ಶುರುವಾದ ಹೊಸದರಲ್ಲಿ ಪಿಪಿಇ ಕಿಟ್ ಬೆಲೆ ಹೆಚ್ಚಿತ್ತು. ಇದೀಗ ಪಿಪಿಇ ಕಿಟ್ ಪೂರೈಕೆ ಹೆಚ್ಚಾಗುತ್ತಿದ್ದು ಪಿಪಿಇ ಕಿಟ್ ದರ ಸಹ ಕಡಿಮೆಯಾಗಿದೆ. ಪಿಪಿಇ ಕಿಟ್ ನಲ್ಲಿ ಯಾವುದೇ ಸುಳ್ಳು ದಾಖಲೆ ನೀಡಲು ಆಗೋದಿಲ್ಲ, ನಾವು ಸಾರ್ವಜನಿಕರ ಹಣವನ್ನು ಈ ಸಂಕಷ್ಟದ ಸಮಯದಲ್ಲಿ ಹಾಳು ಮಾಡುವುದಿಲ್ಲ, ಜನರ ತೆರಿಗೆಯ ರೂಪಾಯಿ ರೂಪಾಯಿ‌ ಹಣಕ್ಕೂ ಲೆಕ್ಕವಿದೆ. ವಿರೋಧ ಪಕ್ಷಗಳು ಸುಮ್ನೆ ಆರೋಪ ಮಾಡೋದನ್ನು ನಿಲ್ಲಿಸಿ, ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಯಾವುದೇ ಹಗರಣ ಆಗಿಲ್ಲ, ಇಂತಹ ಸಮಯದಲ್ಲಿ ಸಾರ್ವಜನಿಕರೊಂದಿಗೆ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ಅಶ್ವಥ್​ ನಾರಾಯಣ್ ಅವರು ಸ್ಪಷ್ಟನೆ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *