‘ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ತುಂಬಾ ಫಾಸ್ಟು’ – ಸಚಿವ ಆರ್​. ಅಶೋಕ್​

ಬೆಂಗಳೂರು: ಪ್ರತಿದಿನ ನಾವು ದೂರವಾಣಿ ಮೂಲಕ ವಲಯವಾರು ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ಕೊಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಶನಿವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮ ಸಿಎಂ ಯಡಿಯೂರಪ್ಪ ತುಂಬಾ ಫಾಸ್ಟು. ನಾವು ಮಾಹಿತಿ ಕೊಟ್ಟಿಲ್ಲ ಅಂದರೆ ಅವರೇ ಕೇಳ್ತಾರೆ, ಏನಾಯ್ತಪ್ಪ ಅಂತಾ. ನಾವು ನಿತ್ಯ ಮೀಟಿಂಗ್ ಬಗ್ಗೆ ಸಿಎಂಗೆ ತಿಳಿಸುತ್ತೇವೆ. ಸಿಎಂ ಸದ್ಯ ಕ್ವಾರಂಟೈನ್​ನಲ್ಲಿದ್ದಾರೆ. ಅವರಿಗೆ ನಾವು ಪ್ರತಿನಿತ್ಯ ಮಾಹಿತಿ ಒದಗಿಸುತ್ತೇವೆ ಎಂದು ಅವರು ತಿಳಿಸಿದರು.

ಲೆಕ್ಕ ಕೊಡಿ ಎಂದು ಸಿದ್ದರಾಮಯ್ಯ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಒಬ್ಬರೇ ಅಲ್ಲ ರಾಜ್ಯದಲ್ಲಿ ಯಾರೇ ಲೆಕ್ಕ ಕೇಳಿದ್ರು ನಾವು ಕೊಡ್ತೀವಿ. ನಮ್ ಸರ್ಕಾರದ ಎಲ್ಲ ಲೆಕ್ಕ ಕೊಡ್ತೀವಿ. ಅವರ ಸರ್ಕಾರದಲ್ಲಿ ಅವರು ಏನಾದ್ರೂ ಲೆಕ್ಕ ಕೊಟ್ಟಿಲ್ಲದಿದ್ರೆ, ಅದೇ ಗುಂಗಲ್ಲಿ ನಮಗೂ ಕೇಳ್ತಿದ್ದಾರೆ. ನಾವಂತೂ ಪೈಸೆ-ಪೈಸೆ ಲೆಕ್ಕ ಕೊಡ್ತೀವಿ. ಸಿಎಂ ಗೆ ನಮ್ಮ ವಲಯದ ರಿಪೋರ್ಟ್ ನಿತ್ಯ ಫೋನಿನ ಮೂಲಕ ಕೊಡುತ್ತಿದ್ದೇನೆ ಎಂದರು.

ಕೊರೊನಾ ನಿಯಂತ್ರಣ ವಾರ್ಡ್ ಮಟ್ಟದಿಂದ ಮಾಡುತ್ತಿದ್ದೇವೆ. ಬೆಡ್​ಗಳ ಕೊರತೆ ನೀಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲ ಲೋಪ-ದೋಷಗಳನ್ನು ನಮ್ಮ ಟೀಂ ಬಗೆಹರಿಸಲಿದೆ. ಶಾಸಕರು, ಪಾಲಿಕೆ ಸದಸ್ಯರಿಗೆ ಹೆಚ್ಚಿನ ಹೊಣೆ ನೀಡಲಾಗಿದ್ದು, ವಾರ್ಡ್​ನಲ್ಲಿ ತಲಾ ಹತ್ತು ಸ್ವಯಂ ಸೇವಕರ ನೇಮಕ ಮಾಡಲಾಗಿದೆ. ವಾರ್ಡ್​ಗಳಲ್ಲಿ ಸೋಂಕು ಪತ್ತೆ ಆದ ಕೂಡಲೇ ಸ್ವಯಂ ಸೇವಕರು ಸೋಂಕಿತರ ಮನೆ, ಬೀದಿಯನ್ನು ಕಂಟೈನ್​ಮೆಂಟ್ ಮಾಡ್ತಾರೆ. ಸೋಂಕಿತರ ಮನೆಗಳಿಗೆ ದಿನಸಿ, ಇತರೆ ವಸ್ತುಗಳನ್ನು ಪೂರೈಸುತ್ತಾರೆ ಎಂದಿದ್ದಾರೆ.

ಸದ್ಯ ಆಸ್ಪತ್ರೆಗಳಲ್ಲಿ ಬೆಡ್​ಗಳ ಸಂಖ್ಯೆ ಹೆಚ್ಚು ಮಾಡೋದಕ್ಕೆ ನಿರ್ಧಾರ ಮಾಡಲಾಗಿದ್ದು, ಪ್ರತೀ ವಿಧಾನಸಭೆ ಕ್ಷೇತ್ರದಲ್ಲಿ ಬೆಡ್ ಗಳ ಲಭ್ಯತೆ ಬಗ್ಗೆ ಶಾಸಕರಿಗೆ ಮಾಹಿತಿ ಸಿಗುವುದಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ಮಂಗಳವಾರ ದಕ್ಷಿಣ ವಲಯದ ಶಾಸಕರು ಮತ್ತು ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆದಿದ್ದೇನೆ ಎಂದು ಆರ್​. ಅಶೋಕ್ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *