ಕೋವಿಡ್​ 19: ಭಾರತದಲ್ಲಿ ನಿನ್ನೆ ಒಂದೇ ದಿನ 27,114 ಹೊಸ ಕೇಸ್​ ಪತ್ತೆ, 519 ಮಂದಿ ಸಾವು

ಬೆಂಗಳೂರು: ಭಾರತದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 27,114 ಮಂದಿ ಕೋವಿಡ್​ 19 ಸೋಂಕು ತಗುಲಿರುವುದು ಪತ್ತೆಯಾಗಿದ್ದು, 519 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,20,916 ಗೆ ಏರಿಕೆಯಾಗಿದೆ. ಇದರಲ್ಲಿ 5,15,385 ಮಂದಿ ಚೇತರಿಕೆಯಾಗಿದ್ದು, ಇನ್ನೂ 2,83,407 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆ 22,123ಕ್ಕೆ ತಲುಪಿದೆ.
ನಿನ್ನೆ(ಶುಕ್ರವಾರ) ಒಂದೇ ದಿನ 2,82,511 ಜನರ ಮಾದರಿ ಪರೀಕ್ಷೆ ಒಳಪಡಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,13,07,002 ಜನರನ್ನು ಪರೀಕ್ಷಿಸಲಾಗಿದೆ.

ಮಹಾರಾಷ್ಟ್ರದಲ್ಲಿ ನಿನ್ನೆ 7,862 ಹೊಸ ಪ್ರಕರಣಗಳು ವರದಿಯಾಗಿವೆ. ಇಲ್ಲಿ ಇದುವರೆಗೆ ಒಟ್ಟು 2,38,461 ಮಂದಿಗೆ ಸೋಂಕು ತಗುಲಿದ್ದು, 1,32,625 ಚೇತರಿಕೆಯಾಗಿದ್ದಾರೆ. 95,943 ಪ್ರಕರಣಗಳು ಸಕ್ರಿಯವಾಗಿವೆ. 9,893 ಜನರು ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 3,680 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟಾರೆ 1,30,261 ಮಂದಿಗೆ ಸೋಂಕು ತಗುಲಿದಂತಾಗಿದೆ. ಇನ್ನೂ 46,108 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೆ 82,324 ಮಂದಿ ಗುಣಮುಖರಾಗಿದ್ದು, 1,829 ಜನರು ಮೃತಪಟ್ಟಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಟ್ಟು 1 09,140 ಮಂದಿಗೆ ಸೋಂಕು ತಗುಲಿದೆ. 3,300 ಸಾವಿನ ಪ್ರಕರಣಗಳು ವರದಿಯಾಗಿದೆ. ಉಳಿದಂತೆ 84,694 ಸೋಂಕಿತರು ಗುಣಮುಖರಾಗಿದ್ದು, ಇನ್ನೂ 21,146 ಪ್ರಕರಣಗಳು ಸಕ್ರಿಯವಾಗಿವೆ. ಗುಜರಾತ್‌ನಲ್ಲಿ ಒಟ್ಟಾರೆ 40,069 ಜನರಿಗೆ ಸೋಂಕು ತಗುಲಿದೆ. 9,900 ಸಕ್ರಿಯ ಪ್ರಕರಣಗಳಿದ್ದು, 28,147 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 2,022 ಮಂದಿ ಮೃತಪಟ್ಟಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *