‘ಸಿಎಂ ಒಬ್ಬರು ಕೆಲಸ ಮಾಡುತ್ತಿದ್ದಾರೆ ಸಚಿವ ಸಂಪುಟದ ಇನ್ಯಾರೂ ಕೆಲಸ ಮಾಡುತ್ತಿಲ್ಲ’

ಶಿವಮೊಗ್ಗ: ರೈತರ ಹಣ ಕಿತ್ತುಕೊಂಡು ಆಶಾ ಕಾರ್ಯಕರ್ತೆಯರಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಗುರುವಾರ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಹಕಾರಿ ಸಂಘದಿಂದ ಆಶಾ ಕಾರ್ಯಕರ್ತೆಯರಿಗೆ ಹಣ ದಾನವಾಗಿ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ ಎಂದು ಅವರು ಆರೋಪ ಮಾಡಿದ್ದು, ಸಹಕಾರ ಸಂಘದಲ್ಲಿರುವುದು ರೈತರ ಶೇರು ಹಣ, ಸರ್ಕಾರ ರೈತರ ಹಣಕ್ಕೆ ಕೈಹಾಕಿರುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಹಣ ನೀಡಬೇಕು. ಸರ್ಕಾರದ ಈ ನಡೆಯ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸುತ್ತೇವೆ. ಇಂತಹ ಆಡಳಿತ ನಡೆಸಲು ಬಿಜೆಪಿ 1,700 ಕೋಟಿ ರೂಪಾಯಿ ನೀಡಿ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಬೇಕಿತ್ತೇ. ರಾಜ್ಯದಲ್ಲಿ ಸರ್ಕಾರ ಇದೆ ಎಂದು ಅನಿಸುವುದೇ ಇಲ್ಲ ಎಂದರು.

ಸದ್ಯ ಸಿಎಂ ಯಡಿಯೂರಪ್ಪ ಒಬ್ಬರು ಕೆಲಸ ಮಾಡುತ್ತಿದ್ದಾರೆ. ಸಚಿವ ಸಂಪುಟದ ಇನ್ಯಾರೂ ಕೆಲಸ ಮಾಡುತ್ತಿಲ್ಲ, ಇಂತಹ ಸರ್ಕಾರ ನಡೆಸುವುದರ ಬದಲು ರಾಜೀನಾಮೆ ನೀಡಿ ಮನೆಗೆ ಹೋಗುವುದು ಉತ್ತಮ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.

ಲಾಕ್​ಡೌನ್ ಅವಧಿಯಲ್ಲಿ ಜನರನ್ನು ಸೇರಿಸಿಕೊಂಡು ಶಂಕು ಸ್ಥಾಪನೆ ಕಾರ್ಯಕ್ರಮ ನಡೆಸುವುದು ಎಷ್ಟರ ಮಟ್ಟಿಗೆ ಸರಿ. ಕೇವಲ ಕಾಂಗ್ರೆಸ್ ನವರಿಗೆ ಮಾತ್ರ ಕೊರೊನಾ ಬರುತ್ತದೆಯೇ(?) ಬಿಜೆಪಿಯವರಿಗೆ ಕೊರೊನಾ ಬರುವುದಿಲ್ಲವೇ(?)ಭಾನುವಾರ ಲಾಕ್​ಡೌನ್ ಮಾಡಲಾಗಿತ್ತು. ಅಂದು ಬಿಜೆಪಿ ಸಚಿವರು ಹಾಗೂ ಶಾಸಕರು ಶಂಕುಸ್ಥಾಪನೆ ಕಾರ್ಯಕ್ರಮ ನಡೆಸಿದ್ದಾರೆ. ಹೀಗಾದರೆ ಲಾಕ್​ಡೌನ್ ಮಾಡಿದ್ದು ಯಾರಿಗೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಬಿಎಸ್​ವೈ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *