‘ಸಿದ್ದರಾಮಯ್ಯ ಆರೋಪಕ್ಕೆ ಉತ್ತರ ಕೊಟ್ಟಿರಲಿಲ್ಲ ಈಗ ನೀವು ಕೇಳ್ತಾ ಇರೋದಕ್ಕೆ ಹೇಳ್ತಾ ಇದ್ದಾನೆ’

ಬೆಂಗಳೂರು: ಕೋವಿಡ್​ 19 ಪರಿಕರಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಅವರು ಅಂಕಿ-ಅಂಶವನ್ನು ನೋಡಲಿ ಎಂದು ಹೇಳಿದರು.

ಇಂದು ಬಾಬು ಜಗಜೀವನ್ ರಾಮ್ ಅವರ ಪುಣ್ಯ ತಿಥಿ ಹಿನ್ನೆಲೆ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಧಿಕಾರಿಗಳ ಎಲ್ಲಾ ದಾಖಲೆ ಕೊಡ್ತಾರೆ. ಯಾವುದೇ ಅಕ್ರಮ ಆಗಿದ್ರೆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದರು.

ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಕುಳಿತುಕೊಳ್ಳಿ. ಅವರು ವಿರೋಧಪಕ್ಷದ ನಾಯಕರಿದ್ದಾರೆ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳು ಕೊಡ್ತಾರೆ, ಪರಿಶೀಲನೆ ಮಾಡ್ತಾರೆ. ಅವರು ಸುಖಾ-ಸುಮ್ಮನೆ ಆರೋಪ ಮಾಡೋದು ಬೇಡ ದಾಖಲೆ ಸಹಿತ ಮಾಡಲಿ. ಇದು ವರೆಗೂ ಸಿದ್ದರಾಮಯ್ಯ ಆರೋಪಕ್ಕೆ ಉತ್ತರ ಕೊಟ್ಟಿರಲಿಲ್ಲ, ಈಗ ನೀವು ಕೇಳ್ತಾ ಇರೋದಕ್ಕೆ ಹೇಳ್ತಾ ಇದ್ದೇನೆ ಎಂದು ಅವರು ಸ್ಪಷ್ಟನೆ ನೀಡಿದರು.

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ ಜನರು ತಮ್ಮತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ, 450ಕ್ಕೂ ಹೆಚ್ಚು ಆ್ಯಂಬುಲೆನ್ಸ್​​ ವ್ಯವಸ್ಥೆ ಮಾಡಿದ್ದೇವೆ. ನಮ್ಮ ಬದುಕು ಬಹಳ ಮುಖ್ಯವಾಗಿದ್ದು, ಯಾವುದಕ್ಕೂ ಜನತೆ ಗಾಬರಿಯಾಗುವುದು ಬೇಡ ಎಂದು ಅವರು ಜನರಿಗೆ ತಿಳಿಸಿದ್ದಾರೆ.

ಸದ್ಯ ಈ ಪಿಡುಗಿನ ಜೊತೆ ನಾವು ಬದುಕಬೇಕಿದೆ. ನರೇಂದ್ರ ಮೋದಿಯವರು ಕೂಡ ಅದನ್ನೇ ಹೇಳಿದ್ದಾರೆ. ಆ್ಯಂಬುಲೆನ್ಸ್ ಸೇರಿದಂತೆ 10,000ಕ್ಕೂ ಹೆಚ್ಚು ಬೆಡ್​ಗಳುವುಳ್ಳ ಕೋವಿಡ್ ಕೇರ್ ಮಾಡಿದ್ದೇವೆ. ಆ್ಯಂಬುಲೆನ್ಸ್​​ಸಂಖ್ಯೆ ಬೇಕಾದರೆ ಇನ್ನೂ ಹೆಚ್ಚು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *