Top

ಸ್ಯಾಂಡಲ್​ವುಡ್​ 'ಶಿವಾಜಿ ಸುರತ್ಕಲ್' ಮೇಲೆ ಬಾಲಿವುಡ್​ ಕಣ್ಣು

ಸ್ಯಾಂಡಲ್​ವುಡ್​ ಶಿವಾಜಿ ಸುರತ್ಕಲ್ ಮೇಲೆ ಬಾಲಿವುಡ್​ ಕಣ್ಣು
X

ಕನ್ನಡದ ​ ಮಿಸ್ಟರಿ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ಶಿವಾಜಿ ಸುರತ್ಕಲ್. ರಮೇಶ್​ ಅರವಿಂದ್​ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಸಮಯದಲ್ಲೇ, ಕೊರೊನಾ ಹಾವಳಿಯಿಂದ ಲಾಕ್​ಡೌನ್​ ಆಗಿ ಸಿನಿಮಾ ಪ್ರದರ್ಶನ ನಿಂತಿತ್ತು. ಇದೀಗ ಚಿತ್ರದ ರೀಮೇಕ್​ ಮತ್ತು ಡಬ್ಬಿಂಗ್​ ರೈಟ್ಸ್​​ಗೆ ಭಾರಿ ಬೇಡಿಕೆ ಬಂದಿತ್ತು. ಪಾರ್ಟ್​ ಟೂ ಮಾಡೋ ಲೆಕ್ಕಾಚಾರದಲ್ಲಿದ್ದ ತಂಡಕ್ಕೆ ಇದು ಸಂತಸ ತಂದಿದೆ.

ಆಕಾಶ್​ ಶ್ರೀವತ್ಸ ನಿರ್ದೇಶನದ ಶಿವಾಜಿ ಸೂರತ್ಕಲ್​ ಸಿನಿಮಾ ಕನ್ನಡ ಸಿನಿರಸಿಕರ ಮನ ಗೆದ್ದಿತ್ತು. ಫೆಬ್ರವರಿಯಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದ್ದ ಚಿತ್ರಕ್ಕೆ ಕೊರೊನಾ ಕಂಟಕವಾಗಿ ಪರಿಣಮಿಸಿತ್ತು. ಲಾಕ್​ಡೌನ್​ನಿಂದ ಸಿನಿಮಾ ಪ್ರದರ್ಶನಕ್ಕೆ ಸಮಸ್ಯೆಯಾಯ್ತು. ಆದರೆ, ಅಷ್ಟರಲ್ಲಾಗಲೇ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರ ಗಮನ ಸೆಳೆದಿತ್ತು. ಕೊರೊನಾ ಹಾವಳಿ ನಡುವೆಯೂ ಚಿತ್ರ ಪರಭಾಷಿಕರ ಕಣ್ಣಿಗೆ ಬಿದ್ದಿದೆ.

ಶಿವಾಜಿ ಸೂರತ್ಕಲ್​ ಚಿತ್ರದ ರೀಮೇಕ್​ ಮತ್ತು ಡಬ್ಬಿಂಗ್​ ರೈಟ್ಸ್​ಗೆ ಭಾರೀ ಬೇಡಿಕೆ ಬಂದಿದೆ. B4u Movies ಸಂಸ್ಥೆ ಚಿತ್ರವನ್ನ ಬಾಲಿವುಡ್​ಗೆ ರೀಮೇಕ್​ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲ ಉತ್ತರ ಭಾರತದ ಹಲವು ಭಾಷೆಗಳಿಗೆ ಡಬ್​ ಮಾಡಿ ರಿಲೀಸ್​ ನಿರ್ಧರಿಸಿದೆ. ಹಿಂದಿಯಲ್ಲಿ ಯಾರು ಚಿತ್ರವನ್ನ ನಿರ್ದೇಶನ ಮಾಡ್ತಾರೆ, ಯಾರು ಹೀರೋ ಆಗ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಅಂಜನಾದ್ರಿ ಸಿನಿ ಕ್ರಿಯೇಷನ್ಸ್​​ ಬ್ಯಾನರ್​ ಅಡಿಯಲ್ಲಿ ಅನೂಪ್​ ಗೌಡ ಮತ್ತು ರೇಖಾ ಕೆ. ಎನ್​​ ಶಿವಾಜಿ ಸೂರತ್ಕಲ್​​ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ರೆಸಾರ್ಟ್​​ವೊಂದರಲ್ಲಿ ನಡೆಯುವ ಕೊಲೆ, ಅದರ ರಹಸ್ಯವನ್ನ ಭೇದಿಸಲು ಬರುವ ಪೊಲೀಸ್​ ಆಫೀಸರ್​ ಪಾತ್ರದಲ್ಲಿ ರಮೇಶ್​ ಅರವಿಂದ್​ ಕಮಾಲ್​ ಮಾಡಿದರು. ಅವರ ಸ್ಕ್ರೀನ್​ ಪ್ರಸೆನ್ಸ್​, ಬಿಗಿಯಾದ ನಿರೂಪಣೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

ಶಿವಾಜಿ ಸೂರತ್ಕಲ್​ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್​ ನೋಡಿ ಚಿತ್ರತಂಡ ಈ ಪತ್ತೇದಾರಿ ಸಿನಿಮಾವನ್ನ ಮುಂದುವರೆಸಲು ಮನಸ್ಸು ಮಾಡಿದೆ. ಲಾಕ್​ಡೌನ್​​ ಸಮಯದಲ್ಲೇ ಪಾರ್ಟ್​ ಟೂಗಾಗಿ ಭರ್ಜರಿ ತಯಾರಿ ನಡೀತಿದೆ. ವೀಡಿಯೋ ಕಾಲ್​ ಮೂಲಕ ನಿರ್ದೇಶಕ ಆಕಾಶ್​ ಶ್ರೀವತ್ಸ ಮತ್ತು ಅರಮೇಶ್​ ಅರವಿಂದ್​​ ಕಥೆ ಬಗ್ಗೆ ಚರ್ಚೆ ನಡೆಸ್ತಿದ್ದಾರೆ. ಕೊರೊನಾ ಸಮಸ್ಯೆ ಬಗೆಹರಿದ ಬಳಿಕ ಶಿವಾಜಿ ಸೂರತ್ಕಲ್​​-2 ಸಿನಿಮಾ ಸೆಟ್ಟೇರಲಿದೆ. ಮುಂದಿನ ದಿನಗಳಲ್ಲಿ ಚಿತ್ರದ ರೀಮೇಕ್​ ಮತ್ತು ಡಬ್ಬಿಂಗ್​ ಬಗ್ಗೆಯೂ ಮಾಹಿತಿ ಸಿಗಲಿದೆ.

Next Story

RELATED STORIES