ಸುನಿ-ಗಣಿ ಹ್ಯಾಟ್ರಿಕ್​ ಕಾಂಬಿನೇಷನ್​ ಸಿನಿಮಾ ಫಿಕ್ಸ್

ಒಂದು ಜೋಡಿ ಸೂಪರ್​ ಹಿಟ್​ ಸಿನಿಮಾ ಕೊಟ್ರೆ, ಅದೇ ಕಾಂಬಿನೇಷನ್​ನಲ್ಲಿ ಸಿನಿಮಾಗಾಗಿ ಪ್ರೇಕ್ಷಕರ ಕಾಯ್ತಾರೆ. 3 ವರ್ಷಗಳ ಹಿಂದೆ ಚಮಕ್​ ಕೊಟ್ಟಿದ್ದ ಸಿಂಪಲ್​ ಸುನಿ ಮತ್ತು ಗೋಲ್ಡನ್​ ಸ್ಟಾರ್​ ಈಗ ಸಖತ್​ ಸಿನಿಮಾ ಮಾಡ್ತಿದ್ದಾರೆ. ಇದರ ಮಧ್ಯೆ ಹೊಸ ಸಿನಿಮಾ ಘೋಷಿಸಿದ್ದಾರೆ.

ಗೋಲ್ಡನ್​ ಸ್ಟಾರ್​ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್​ ಹಿಟ್​ ಸಿನಿಮಾ ಚಮಕ್​. ಸಿಂಪಲ್​​ ಸುನಿ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದರು. ಮಾತುಗಳಲ್ಲೇ ಮಂತ್ರ ಹಾಕಿ ಮೋಡಿ ಮಾಡೋ ಸುನಿ, ಮುಗುಳು ನಗೆಯ ಹೀರೋ ಗಣೇಶ್​​​​​​​​​​ ಮತ್ತು ಕೊಡಗಿನ ಕುವರಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗೋಗಿದರು.

ಚಮಕ್​ ಸೂಪರ್​ ಸಕ್ಸಸ್​ ನಂತ್ರ ಸುನಿ ಮತ್ತು ಗಣಿ ಸಕ್ಕತ್​ ಅನ್ನೋ ಹೊಸ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸುರಭಿ​ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸಕ್ಕತ್​​ ಚಿತ್ರದ ಮೇಕಿಂಗ್​ ಸ್ಟಿಲ್ಸ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ಲಾಗಿದೆ. ಕೊರೊನಾ ಹಾವಳಿಯಿಂದ ಸಿನಿಮಾ ಶೂಟಿಂಗ್​ ನಿಂತಿದ್ದು, ಇದೀಗ ಮತ್ತೊಂದು ಸಿನಿಮಾವನ್ನ ಸುನಿ ಅನೌನ್ಸ್​ ಮಾಡಿದ್ದಾರೆ.

ಗುರುವಾರ ಗೋಲ್ಡನ್​ ಸ್ಟಾರ್​ ಗಣೇಶ್​ ಹುಟ್ಟುಹಬ್ಬ. ಅದಕ್ಕೂ ಮೊದ್ಲೇ ಗಣಿ ಕಾಂಬಿನೇಷನ್​ನಲ್ಲಿ ‘ದಿ ಸ್ಟೋರಿ ಆಫ್​ ರಾಯಗಢ’ ಅನ್ನೋ ಸಿನಿಮಾವನ್ನ ಸುನಿ ಅನೌನ್ಸ್​ ಮಾಡಿದ್ದಾರೆ. ವಿಭಿನ್ನವಾಗಿ ಪೋಸ್ಟರ್​ ಡಿಸೈನ್​ ಮಾಡಿ ರಿಲೀಸ್​ ಮಾಡಿದ್ದಾರೆ.

ಮೇಲ್ನೋಟಕ್ಕೆ ಇದು ಆ್ಯಕ್ಷನ್​ ಸಿನಿಮಾ ಅನ್ನಿಸಿದ್ರು, ಕಾಮಿಡಿ ಟಚ್​ ಕೊಟ್ಟು ಸಿನಿಮಾವನ್ನ ತೆರೆಗೆ ತರುವ ಪ್ರಯತ್ನ ನಡೀತಿದೆ.. ಚಿತ್ರದಲ್ಲಿ ಮಳೆಹುಡುಗನನ್ನ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡ್ತಿದ್ದಾರೆ ನಿರ್ದೇಶಕರು. ಚಮಕ್​​, ಸಖತ್​ ನಂತರ ಇವರಿಬ್ಬರು ಸೇರಿ ಮಾಡ್ತಿರೋ ‘ದಿ ಸ್ಟೋರಿ ಆಫ್​ ರಾಯಗಢ’ ಸಿನಿಮಾ ಕುತೂಹಲ ಮೂಡಿಸಿದೆ. ಅಂದ ಹಾಗೆ 2022ಕ್ಕೆ ಈ ಸಿನಿಮಾ ಸೆಟ್ಟೇರಲಿದೆಯಂತೆ.

Recommended For You

About the Author: user

Leave a Reply

Your email address will not be published. Required fields are marked *