‘ಇನ್ಮುಂದೆ 8 ಗಂಟೆ ಬದಲು ಸಂಜೆ 6 ಗಂಟೆಯಿಂದಲೇ ಕರ್ಫ್ಯೂ ಜಾರಿ’ – ಸಚಿವ ಎಸ್​.ಟಿ ಸೋಮಶೇಖರ್​

ಮೈಸೂರು: ಇನ್ಮುಂದೆ ಮೈಸೂರಿನಲ್ಲಿ 8 ಗಂಟೆ ಬದಲು ಸಂಜೆ 6ಕ್ಕೆ ಬಂದ್ ಮಾಡಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್ ಅವರು ಬುಧವಾರ ಹೇಳಿದರು.

ನಗರದಲ್ಲಿಂದು ನಡೆದ ಜಿಲ್ಲಾಡಳಿತ ಸಭೆ ಬಳಿಕ ಮಾತನಾಡಿದ ಅವರು, 6 ಗಂಟೆ ನಂತರ ಓಡಾಟವು ಇರೋದಿಲ್ಲ, ವ್ಯಾಪಾರವೂ ಇಲ್ಲ. ಕೋವಿಡ್ ನಿಯಂತ್ರಣ ಮಾಡಲು ಮೈಸೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಎಂದರು.

ಇನ್ನು ಕೋವಿಡ್ ನಿಯಂತ್ರಣ ಹಾಗೂ ಜನರ ಓಡಾಟ ನಿಯಂತ್ರಣ ಮಾಡಲು ಈ ಕ್ರಮ ಕೈಗೊಂಡಿದ್ದೇವೆ. ಹೀಗಾಗಿ 8ರ ಬದಲು 6ಕ್ಕೆ ಕರ್ಫ್ಯೂ ಜಾರಿಯಾಗಲಿದೆ. ಶುಕ್ರವಾರದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದು ಅವರು ತಿಳಿಸಿದರು.

ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ನಾಮನಿರ್ದೇಶನ ಸದಸ್ಯರು ಕ್ರಾಸ್ ವೋಟಿಂಗ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಂಖ್ಯಾಬಲ ಇರೋ ಕಡೆ ಅಧಿಕಾರಕ್ಕೆ ತರೋಕ್ಕೆ ವೋಟಿಂಗ್ ಮಾಡ್ತಾರೆ. ಎಲ್ಲಿ ಸಂಖ್ಯಾಬಲ ಇರೋಲ್ಲ ಅಲ್ಲಿ ಉತ್ತಮ ಆಡಳಿತ ನಡೆಸೋರಿಗೆ ಬೆಂಬಲ ನೀಡಿರಬಹುದು. ಈಗಷ್ಟೇ ಬಂದಿದ್ದೇನೆ ಆ ಬಗ್ಗೆ ತಿಳಿದುಕೊಂಡು ಮಾತಾಡ್ತಿನಿ ಎಂದು ಮೈಸೂರಿನಲ್ಲಿ ಸಚಿವ ಎಸ್​.ಟಿ ಸೋಮಶೇಖರ್ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *