ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳಿಗೆ ಸಿಹಿಸುದ್ದಿ

ಕನ್ನಡದ ಸೂಪರ್​ ಹಿಟ್​ ಕುರುಕ್ಷೇತ್ರ ಸಿನಿಮಾ ಬಗ್ಗೆ ಬಾಲಿವುಡ್​ನಿಂದ ಹೊಸ ಸುದ್ದಿ ಬಂದಿದೆ. ಅರೇ ಕುರುಕ್ಷೇತ್ರ ಸಿನಿಮಾ ನಾಲ್ಕು ಭಾಷೆಗಳಲ್ಲಿ ರಿಲೀಸ್​​​ ತಿಂಗಳುಗಳೇ ಕಳೀತು. ಈಗ ಆ ಸಿನಿಮಾ ಬಗ್ಗೆ ಬಾಲಿವುಡ್​ನಿಂದ ಏನು ನ್ಯೂಸ್​ ಅಂದ್ರಾ(?) ಬನ್ನಿ ಹೇಳ್ತೀವಿ.

ಕುರುಕ್ಷೇತ್ರ. ಕಳೆದ ವರ್ಷ ರಿಲೀಸ್​ ಆಗಿ ಸಕ್ಸಸ್​ ಕಂಡ ಪೌರಾಣಿಕ ಸಿನಿಮಾ. ಬಹುಕೋಟಿ ವೆಚ್ಚದ ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಡಿ ಮತ್ತು 3ಡಿ ಫಾರ್ಮೆಟ್​​​ನಲ್ಲಿ ರಿಲೀಸ್​​ ಆಗಿತ್ತು. ಮುನಿರತ್ನ ನಿರ್ಮಾಣದ ಈ ಚಿತ್ರಕ್ಕೆ ನಾಗಣ್ಣ ಆ್ಯಕ್ಷನ್​ ಕಟ್​ ಹೇಳಿದರು. ದುರ್ಯೋಧನನಾಗಿ ಚಾಲೆಂಜಿಂಗ್​ ದರ್ಶನ್​ ಅಬ್ಬರಿಸಿದ್ರೆ, ಕರ್ಣನಾಗಿ ಅರ್ಜುನ್​ ಸರ್ಜಾ, ಭೀಷ್ಮಚಾರ್ಯರಾಗಿ ಅಂಬರೀಶ್, ಶ್ರೀಕೃಷ್ಣನಾಗಿ ರವಿಚಂದ್ರನ್, ದ್ರೌಪದಿಯಾಗಿ ಸ್ನೇಹ ಹೀಗೆ ದೊಡ್ಡ ತಾರಾಗಣ ಸಿನಿಮಾದಲ್ಲಿತ್ತು. ಇದೀಗ ಕನ್ನಡದ ಕುರುಕ್ಷೇತ್ರ ಸಿನಿಮಾ ಹಿಂದಿಯಲ್ಲಿ ಬರಲಿದೆ.

ಕುರುಕ್ಷೇತ್ರ ಸಿನಿಮಾವನ್ನ ಏಕಕಾಲಕ್ಕೆ ಐದು ಭಾಷೆಗಳಲ್ಲಿ ತೆರೆಗೆ ತರುವ ಪ್ರಯತ್ನಗಳು ನಡೆದಿತ್ತು. ಕಾರಣಾಂತರಗಳಿಂದ ಕನ್ನಡ ನಂತ್ರ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಂಡಿತ್ತು. ಕನ್ನಡದಲ್ಲಿ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಟಾಲಿವುಡ್​, ಕಾಲಿವುಡ್​, ಮಾಲಿವುಡ್​​​​ನಲ್ಲೂ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ, ಹಿಂದಿಯಲ್ಲಿ ರಿಲೀಸ್​ ಆಗಿರಲಿಲ್ಲ.

ಕುರುಕ್ಷೇತ್ರದಂತಹ ಕನ್ನಡದ ಅದ್ಧೂರಿ ಪೌರಾಣಿಕ ಸಿನಿಮಾವನ್ನ ಬಾಲಿವುಡ್​ನಲ್ಲೂ ರಿಲೀಸ್​ ಮಾಡ್ಬೇಕು ಅನ್ನೋದು ದರ್ಶನ್​ ಅಭಿಮಾನಿಗಳ ಆಸೆಯಾಗಿತ್ತು. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಕಾರಣಾಂತರಗಳಿಂದ ಬಾಲಿವುಡ್​ ಬಿಗ್​​​​ ಸ್ಕ್ರೀನ್​ಗಳಲ್ಲಿ ದುರ್ಯೋಧನ ದರ್ಶನ್​ ದರ್ಬಾರ್​ ನಡೆಯಲಿಲ್ಲ. ಇದೀಗ ಕಿರುತೆರೆಯಲ್ಲಿ ಕುರುಕ್ಷೇತ್ರ ಹಿಂದಿ ಚಿತ್ರವನ್ನ ಪ್ರಸಾರ ಮಾಡುವ ಸುಳಿವು ಸಿಕ್ಕಿದೆ.

ಕುರುಕ್ಷೇತ್ರ ಚಿತ್ರದ ಹಾಡುಗಳು ಹಿಟ್​ ಆಗಿತ್ತು. ಕನ್ನಡದಲ್ಲಿ ವಿ. ನಾಗೇಂದ್ರ ಪ್ರಸಾದ್​ ಸಾಹಿತ್ಯ, ಜೆ. ಕೆ ಭಾರವಿ ಸಂಭಾಷಣೆ ಬರೆದಿದರು. ವಿ. ಹರಿಕೃಷ್ಣ ಸಂಗೀತ ಮತ್ತು ಜಯನ್​ ವಿನ್ಸೆಂಟ್​​​ ಛಾಯಾಗ್ರಹಣ ಚಿತ್ರದ ಮತ್ತೊಂದು ಹೈಲೆಟ್​​.

ಕುರುಕ್ಷೇತ್ರ ಚಿತ್ರದ ಥ್ರಿಡಿ ವರ್ಷನ್​​ಗೆ ರಾಜ್ಯದಲ್ಲಿ ಸಖತ್​ ರೆಸ್ಪಾನ್ಸ್​ ಸಿಕ್ಕಿತ್ತು. ಭರ್ಜರಿ ಕಲೆಕ್ಷನ್ ಕೂಡ ಮಾಡಿತ್ತು. ತಡವಾದರೂ ಹಿಂದಿ ವರ್ಷನ್​ ಬರ್ತಿರೋದು ದರ್ಶನ್​ ಅಭಿಮಾನಿಗಳಿಗೆ ಸಂತಸ ತಂದಿದೆ. ಯಾವ ವಾಹಿನಿಯಲ್ಲಿ ಕುರುಕ್ಷೇತ್ರ ಹಿಂದಿ ಸಿನಿಮಾ ಪ್ರಸಾರವಾಗುತ್ತೆ ಅನ್ನೋದ್ರ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಿಗುವ ಸೂಚನೆ ಸಿಕ್ತಿದೆ.

Recommended For You

About the Author: user

Leave a Reply

Your email address will not be published. Required fields are marked *