ಗಾನ ಕೋಗಿಲೆ ಎಸ್​. ಜಾನಕಿ ಬಗ್ಗೆ ಸುಳ್ಳು ಸುದ್ದಿ ಎಸ್​.ಬಿ. ಬಾಲಸುಬ್ರಮಣ್ಯಂ ಬೇಸರ

ಭಾರತೀಯ ಚಿತ್ರರಂಗದ ಗಾನ ಸರಸ್ವತಿ ಎಸ್​ ಜಾನಕಿ. ಕೆಳದ ಒಂದು ದಿನದಿಂದ ಎಸ್​ ಜಾನಕಿ ನೋ ಮೋರ್ ಅಂತ ಸೊಶಿಯಲ್​ ಮೀಡಿಯಾದಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡ್ತಿದೆ. ಈ ಸುಳ್ಳು ಸುದ್ದಿಯಿಂದ ಹಿರಿಯ ಗಾಯಕ ಎಸ್​ಪಿಬಿ, ಬೇಸರಗೊಂಡಿದ್ದು, ಈ ಬಗ್ಗೆ ಸ್ವತಃ ತಾವೇ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ.

ಎಸ್​ ಜಾನಕಿ ಭಾರತೀಯ ಚಿತ್ರರಂಗದ ಗಾನ ಕೋಗಿಲೆ. ಒಂದಲ್ಲಾ ಎರಡಲ್ಲಾ 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರೋ ಶ್ರೇಷ್ಠ ಗಾಯಕಿ. ಗಾಯನ ಕ್ಷೇತ್ರದಲ್ಲಿ 4 ರಾಷ್ಟ್ರ ಪ್ರಶ್ತಿಗಳನ್ನು ಮುಡಿಗೇರಿಸಿಕೊಂಡಿರೋ ಜಾನಕಿಯಮ್ಮನಿಗೆ ಈಗ 82 ವರ್ಷ.

ಎಲ್ಲರಿಗೂ ಗೊತ್ತಿರೋ ಹಾಗೇ ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ರು. ಇದೀಗ ಕೊಂಚ ಚೇತರಿಸಿಕೊಳ್ತಿದ್ದು, ಆರೋಗ್ಯವಾಗಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ಜಾನಕಿಯಮ್ಮ ಇನ್ನಿಲ್ಲ ಎಂಬ ಸುದ್ದಿಯನ್ನ ಹರಿಬಿಡ್ತಿದ್ದಾರೆ. ಈ ರೀತಿ ಇವರ ಬಗ್ಗೆ ವದಂತಿ ಹಬ್ತಾ ಇರೋದು ಇದೇ ಮೊದಲೇನಲ್ಲ. 2016 ಮತ್ತು 17ರಲ್ಲಿಯೂ ಈ ರೀತಿಯ ಸುದ್ದಿ ಇಡೀ ಗಾಯನ ಕ್ಷೇತ್ರವನ್ನ ಮತ್ತು ಜಾನಕಿಯಮ್ಮನ ಅಭಿಮಾನಿಗಳನ್ನ ತಲ್ಲಣಗೊಳಿಸಿತ್ತು.

ಇದೀಗ ಇಂತದ್ದೊಂದು ಸುದ್ದಿ ಮತ್ತೆ ಹರಿದಾಡ್ತಿದೆ. ಈ ಸುಳ್ಳು ವದಂತಿಯ ವಿಚಾರವಾಗಿ ಒಂದು ಕಡೆ ಕೆಂಡಮಂಡಲವಾಗಿರೋ ಹಿರಿಯ ಗಾಯಕ ಎಸ್​.ಪಿ ಬಾಲಸುಬ್ರಮಣ್ಯಂ ಮತ್ತೊಂದು ಕಡೆ ಬೇಸರದಿಂದ ಈ ಬಗ್ಗೆ ಮಾತನಾಡಿದ್ದಾರೆ. ಎಸ್​ಪಿಬಿ ಮಾತುಗಳಲ್ಲಿ ಬೇಸರದ ಜೊತೆ ಭಾವುಕತೆ ತುಂಬಿದೆ.

ನನಗೆ ಬೆಳಿಗ್ಗೆಯಿಂದಲೂ ಸುಮಾರು 20 ಫೋನ್​ ಕರೆಗಳು ಬರ್ತಿವೆ.ಜಾನಕಿಯಮ್ಮ ಇನ್ನಿಲ್ಲ ಎಂಬ ವಿಚಾರವಾಗಿ ಕೇಳ್ತಿದ್ದಾರೆ. ನಾನೇ ಅವರ ಬಳಿ ಮಾತನಾಡಿದ್ದಾರೆ. ಅವರ ಬಹಳ ಚೆನ್ನಾಗಿದ್ದಾರೆ. ದಯವಿಟ್ಟು ಸೋಶಿಯಲ್​ ಮೀಡಿಯಾವನ್ನ ಈ ರೀತಿ ನೆಗೆಟಿವ್​ ಆಗಿ ಬಳಸಿಕೊಳ್ಳಬೇಡಿ. ಲಾಂಗ್​ ಲೀವ್ ಜಾನಕಿಅಮ್ಮ ಅಂತ ವದಂತಿ ಬಗ್ಗೆ ಕ್ಲಾರಿಫಿಕೇಶನ್​ ಕೊಟ್ಟಿದ್ದು, ಈ ರೀತಿ ಸುದ್ದಿ ಹಬ್ಬಿಸಬೇಡಿ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಜಾನಕಿಯಮ್ಮನವರ ಸಾವಿನ ವದಂತಿಗೆ ತೆರೆ ಎಳೆದಿದ್ದಾರೆ ಎಸ್​ಪಿಬಿ. ಈ ಹಿಂದೆ 2017ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ತಮ್ಮ ಕೊನೆಯ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋ ಮೂಲಕ ಗಾಯನ ಲೋಕಕ್ಕೆ ಗುಡ್​ ಬೈ ಹೇಳಿದ್ರು. ವಯಸ್ಸಾಗಿರೋ ಕಾರಣ, ಇನ್ನುಮುಂದೆ ಹಾಡು, ಮಾಧ್ಯಮ ಸಂದರ್ಶನ ಎಲ್ಲಿಯೂ ಕಾಣಿಸಿಕೊಳ್ಳೋಲ್ಲ ಅಂತ ಹೇಳಿದ್ರು ಜಾನಕಿಯಮ್ಮ.

ಆದರೆ, ಆಗಾಗ್ಗೆ ಜಾನಕಿಯಮ್ಮನ ಬಗ್ಗೆ ಈ ರೀತಿ ವದಂತಿಗಳು ಗಾಯನ ಕ್ಷೇತ್ರ ಮತ್ತು ಅಭಿಮಾನಿಗಳಲ್ಲಿ ಬೇಸರ ತಂದೊಡ್ಡಿದೆ. ಈ ರೀತಿ ಸುಳ್ಳು ಸುದ್ದಿಗಳನ್ನ ಹಬ್ಬಿಸುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

Recommended For You

About the Author: user

Leave a Reply

Your email address will not be published. Required fields are marked *