‘ಕ್ವಾರಂಟೈನ್​ ಮುಗಿಸಿ ನಾನು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ’ – ಸಚಿವ ಡಾ.ಕೆ ಸುಧಾಕರ್

ಬೆಂಗಳೂರು: ಪತ್ನಿ, ಪುತ್ರಿಗೆ ಕೊರೊನಾ ಪಾಸಿಟಿವ್​ನಿಂದ ನಾನು ಕ್ವಾರಂಟೈನ್​​ನಲ್ಲಿದ್ದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ವಿಧಾನಸೌಧಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಎರಡು ಬಾರಿಯ ಟೆಸ್ಟಿಗ್​ನಲ್ಲಿ ನನ್ನ ರಿಪೋರ್ಟ್ ನೆಗಟೀವ್ ಬಂತು. ಇವಾಗ ಕ್ವಾರಂಟೈನ್​ ಮುಗಿಸಿ ನಾನು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಎಲ್ಲರ ಆಶೀರ್ವಾದ, ಹಾರೈಕೆಯಿಂದ ನಾನು ಮತ್ತೆ ಬಂದಿದ್ದೇನೆ ಎಂದು ಅವರು ಹೇಳಿದರು.

ಇನ್ನು ಇನ್ನೆರಡು ದಿನಗಳಲ್ಲಿ ತನ್ನ ಪತ್ನಿ ಹಾಗೂ ಪುತ್ರಿ ಕೂಡ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ನಮ್ಮ ಕುಟುಂಬ ಸದಸ್ಯರು ಗುಣಮುಖರಾಗಲಿ ಎಂದು ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದರು.

ಈ ಹಿಂದಿನ ಸಭೆಯಲ್ಲಿ ಲ್ಯಾಬ್ ತೆರೆಯುವಂತೆ ಹೇಳಿದ್ದೆ. ಎರಡು ಇದ್ದ ಲ್ಯಾಬ್ ಗಳನ್ನು 80 ಮಾಡಿದ್ದೇವೆ. ಅದರಂತೆ ಇವಾಗ ಬೆಡ್ ಕಲ್ಪಿಸುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಇಂದಿನ ಸಭೆಯಲ್ಲಿ ಬೆಡ್ ಗಳನ್ನು ಒದಗಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಸದ್ಯ ಮನೇಲಿ ಕ್ವಾರಂಟೈನ್​ನಲ್ಲಿದ್ದೆ. ಕ್ವಾರಂಟೈನ್​ನಲ್ಲಿದ್ರೂ ನಿತ್ಯ ಕೋವಿಡ್ ಕೆಲಸದಲ್ಲಿ ಮನೆಯಿಂದಲೇ ಭಾಗವಹಿಸ್ತಿದ್ದೆ. ಭೌತಿಕವಾಗಿ ಇವತ್ತಿಂದ ಹೊರಗೆ ಬಂದಿದ್ದೇನೆ. ನಾನು ಆಕ್ಟಿವ್ ಆಗಿದ್ರಿಂದ ಮನೆಯಲ್ಲಿ ಕಟ್ಟಿ ಹಾಕಿದಂತೆ ಭಾಸ ಆಗುತ್ತಿತ್ತು. ಮತ್ತೆ ಜನರ ಸೇವೆ ಮಾಡುವ ಅವಕಾಶ ಬಂದಿದ್ದು ಸಂತಸ ತಂದಿದೆ. ಎಲ್ಲರ ಹಾರೈಕೆಯಿಂದ ಮತ್ತೆ ಎಲ್ಲರ ಸೇವೆಗೆ ಅವಕಾಶ ಸಿಕ್ಕಿದೆ. ಮತ್ತೆ ಎಂದಿನಂತೆ ಬದ್ದತೆಯಿಂದ ಕೆಲಸ ಮಾಡುತ್ತೇನೆ. ನನ್ನ ಕುಟುಂಬದಲ್ಲಿ ಯಾರಿಗೆಲ್ಲ ಪಾಸಿಟಿವ್ ಬಂದಿತ್ತೋ ಅವರೂ ಗುಣಮುಖರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗ್ತಾರೆ ಎಂದು ಸಚಿವ ಡಾ.ಕೆ ಸುಧಾಕರ್ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *