‘ಬೆಂಗಳೂರಿಗೆ ಹೋಗಲು ಭಯವಾಗುತ್ತೆ ಅಲ್ಲಿ ಆ ವಾತಾವರಣವಿದೆ’ – ಸಚಿವ ಜಗದೀಶ್​ ಶೆಟ್ಟರ್

ಹುಬ್ಬಳ್ಳಿ: ಸದ್ಯಕ್ಕೆ ಲಾಕ್​ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಆದರೆ ಜೂನ್ 7ರ ನಂತರ ಏನಾಗುತ್ತೆ ಅಂತ ಇವಾಗಲೇ ಹೇಳಲು ಸಾಧ್ಯವಿಲ್ಲ ಎಂದು ಬೃಹತ್​ ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಟಾಸ್ಕ್ ಫೋರ್ಸ್ ಸಮಿತಿ ಲಾಕ್​ಡೌನ್ ಬಗ್ಗೆ ನಿರ್ಧಾರ ಮಾಡುತ್ತೆ. ಲಾಕ್​ಡೌನ್ ಮಾಡುತ್ತೇವೆ ಎಂದು ನಾವೆಲ್ಲೂ ಅಧಿಕೃತವಾಗಿ ಹೇಳಿಲ್ಲ, ಯಾವ ಸಚಿವರು ಹೇಳಿಲ್ಲ, ಮುಖ್ಯಮಂತ್ರಿಗಳು ಹೇಳಿಲ್ಲ. ನನ್ನ ಅಭಿಪ್ರಾಯದ ಪ್ರಕಾರ ಲಾಕ್​ಡೌನ್ ಮಾಡುವ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು ಎಲ್ಲಿ ಪಾಸಿಟಿವ್ ಪ್ರಕರಣಗಳು ಬರ್ತಾ ಇದ್ದಾವೆ ಅಲ್ಲಿ ಸೀಲ್​ಡೌನ್​ ಮಾಡಲಾಗುತ್ತೆ. ಜೂನ್ 7ರ ನಂತರ ಪರಿಸ್ಥಿತಿ ನೋಡಿಕೊಂಡು ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಟಾಸ್ಕ್​​ಪೋರ್ಸ್​​ ಕಮೀಟಿಯ ನಿರ್ಣಯದ ಬಳಿಕ ಡಿಸೈಡ್ ಮಾಡ್ತಾರೆ. ಜೂನ್ 7ರ ನಂತರ ಏನಾಗುತ್ತೊ ಗೊತ್ತಿಲ್ಲ, ಅದರ ಬಗ್ಗೆ ಈಗ ಮಾತಾಡಲ್ಲ ಎಂದರು.

ಸದ್ಯ ಬೆಂಗಳೂರಿಗೆ ಹೋಗಲು ಭಯವಾಗುತ್ತೆ. ಅಲ್ಲಿ ಭಯದ ವಾತಾವರಣವಿದೆ. ಪ್ರತಿನಿತ್ಯ ಸಿಲಿಕಾನ್​ ಸಿಟಿಯಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೋವಿಡ್​ -19 ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.

ಚೀನಾದ ಆ್ಯಪ್​ಗಳನ್ನು ಬ್ಯಾನ್ ಮಾಡಿ ಮೋದಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ. ಆ್ಯಪ್​ಬ್ಯಾನ್ ಮಾಡಿ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *