‘ಠಾಕ್ರೆ’ ಸಿನಿಮಾದಿಂದ ಹೊರಬಂದ ಡೈನಾಮಿಕ್​ ಪ್ರಿನ್ಸ್ ಪ್ರಜ್ವಲ್

ಸಿನಿಮಾ ಅನ್ನೋದೇ ಅದೃಷ್ಟದಾಟ. ಯಾರೋ ಮಾಡ್ಬೇಕಿದ್ದ ಪಾತ್ರ ಮತ್ತ್ಯಾರೋ ಮಾಡೋದು. ಸೆಟ್ಟೇರಿದ ಸಿನಿಮಾ ಅರ್ಧಕ್ಕೆ ನಿಂತು ಹೋಗೋದು ಎಲ್ಲಾ ಮಾಮೂಲು. ನಿರ್ದೇಶಕ ಗುರುದೇಶ್ ಪಾಂಡೆ ಮೂರು ವರ್ಷಗಳ ಹಿಂದೆ ಠಾಕ್ರೆ ಅನ್ನೋ ಸಿನಿಮಾ ಶುರು ಮಾಡಿದರು. ಈಗ ಆ ಸಿನಿಮಾಗೆ ಮರುಜೀವ ಸಿಕ್ತಿದೆ. ಆದರೆ, ಠಾಕ್ರೆ ಟೀಂನಿಂದ ಕಹಿ ಸುದ್ದಿ ಹೊರ ಬಿದ್ದಿದೆ.

ಠಾಕ್ರೆ. ಟೈಟಲ್​ನಿಂದ್ಲೇ ಗಮನ ಸೆಳೆದಿದ್ದ ಸಿನಿಮಾ. ಡೈನಾಮಿಕ್ ಪ್ರಿನ್ಸ್​ ಪ್ರಜ್ವಲ್​ ದೇವ ರಾಜ್​ ಮತ್ತು ಕ್ರೇಜಿಸ್ಟಾರ್​ ರವಿಚಂದ್ರನ್​ ಕಾಂಬಿನೇಷನ್​ನಲ್ಲಿ ಈ ಸಿನಿಮಾ ಪ್ಲಾನ್​ ಮಾಡಿದ್ರು, ನಿರ್ದೇಶಕ ಗುರುದೇಶ್​ ಪಾಂಡೆ. ಪಾತ್ರಕ್ಕಾಗಿ ಪ್ರಜ್ಜು ಜಿಮ್​ನಲ್ಲಿ ಬೆವರಿಳಿಸಿ ದೇಹವನ್ನ ಹುರಿಗೊಳಿಸಿದ್ರು. ಮುಹೂರ್ತ ನೆರವೇರಿಸಿದ್ರು, ಶೂಟಿಂಗ್​ ಯಾಕೋ ಪ್ರಾರಂಭವಾಗಲೇಯಿಲ್ಲ.

ಮೂರು ವರ್ಷಗಳ ನಂತ್ರ ಗುರುದೇಶ್​ಪಾಂಡೆ ಠಾಕ್ರೆ ಚಿತ್ರವನ್ನ ಕೈಗೆತ್ತಿಕೊಳ್ಳುವ ಮನಸ್ಸು ಮಾಡಿದ್ದಾರೆ. ಆದರೆ, ಈ ಸಿನಿಮಾದಿಂದ ಹೀರೋ ಪ್ರಜ್ವಲ್​ ದೇವರಾಜ್​ ಹೊರ ಬಂದಿದ್ದಾರೆ. ಇತ್ತೀಚೆಗೆ ಗುರುದೇಶ್​ ಪಾಂಡೆ ನಿರ್ಮಾಣ ಮಾಡಿದ ಜಂಟಲ್​ಮನ್​ ಸಿನಿಮಾದಲ್ಲಿ ಪ್ರಜ್ವಲ್ ನಟಿಸಿ ಸೈ ಅನ್ನಿಸಿಕೊಂಡಿದ್ರು. ಸಿನಿಮಾ ಭರ್ಜರಿ ರೆಸ್ಪಾನ್ಸ್​​ ಗಿಟ್ಟಿಸಿಕೊಂಡಿತ್ತು. ಆದ್ರೀಗ ಇಬ್ಬರು ಮಾತುಕತೆ ನಡೆಸಿ, ಹೀರೋ ಬದಲಾವಣೆಗೆ ಒಪ್ಪಿದ್ದಾರೆ.

ಪ್ರಜ್ವಲ್​ ದೇವರಾಜ್​ ಠಾಕ್ರೆ ಸಿನಿಮಾದಲ್ಲಿ ನಟಿಸ್ದೇ ಇದ್ರು, ರವಿಚಂದ್ರನ್​ ನಟಿಸೋದು ಪಕ್ಕಾ ಆಗಿದೆ. ಪ್ರಜ್ವಲ್​ ಜಾಗಕ್ಕೆ ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ ನಿರ್ದೇಶಕರು. ಪ್ರಜ್ವಲ್​ ದೇವರಾಜ್​ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋದ್ರಿಂದ ಠಾಕ್ರೆ ಸಿನಿಮಾದಿಂದ ಹೊರ ನಡೆದಿದ್ದಾರೆ ಅಂತ ನಿರ್ದೇಶಕರು ಹೇಳಿದ್ದಾರೆ. ಹಿಂದೆ ನಿಗದಿಯಾದಂತೆ ಶ್ರೀಧರ್​ ಸಂಭ್ರಮ್​ ಮ್ಯೂಸಿಕ್, ಎಂ. ಎನ್​ ಕುಮಾರ್​ ಬಂಡವಾಳ ಚಿತ್ರಕ್ಕಿರಲಿದೆ ಅನ್ನಲಾಗ್ತಿದೆ.

ಷೇಕ್ಸ್​ಪಿಯರ್​ ರಚಿಸಿದ ಮ್ಯಾಕ್​ಬೆತ್​ ಕೃತಿಯನ್ನ ಆಧರಿಸಿ ಠಾಕ್ರೆ ಚಿತ್ರಕ್ಕೆ ಕಥೆ ಎಣೆಯಲಾಗಿದೆ. ಹೊಸ ರೂಪದಲ್ಲಿ ಹೊಸ ಹೀರೋ ಜೊತೆಗೆ ಕನಸಿನ ಸಿನಿಮಾ ಮಾಡೋದಕ್ಕೆ ಗುರುದೇಶ್​ಪಾಂಡೆ ನಿರ್ಧರಿಸಿದ್ದಾರೆ. ಕೊರೊನಾ ಹಾವಳಿ ಮುಗಿದ ನಂತರ ಠಾಕ್ರೆ ಚಿತ್ರಕ್ಕೆ ಚಾಲನೆ ಸಿಗಲಿದೆ.

Recommended For You

About the Author: user

Leave a Reply

Your email address will not be published. Required fields are marked *