ಕೋವಿಡ್​ 19: ಭಾರತದ ಮೊದಲ ‘ಕೊವಾಕ್ಸಿನ್’ ಲಸಿಕೆ ಮಾನವ ಪ್ರಯೋಗಕ್ಕೆ ಡಿಸಿಜಿಐ ಅನುಮೋದನೆ

ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ದೇಶದ ಲಸಿಕೆ ‘ಕೊವಾಕ್ಸಿನ್ ‘ನ ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ಕಾರ್ಯಕ್ಕೆ ಹೈದರಾಬಾದ್ ಮೂಲದ ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್​ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಯಿಂದ ಅನುಮೋದನೆ ಸಿಕ್ಕಿದೆ.

ಈ ಲಸಿಕೆಗೆ ಕೊವಾಕ್ಸಿನ್ ಎಂದು ಹೆಸರಿಡಲಾಗಿದ್ದು, ಇದು ನಿಷ್ಕ್ರಿಯ ಲಸಿಕೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಾರ್ಸ್-ಕೋವ್-2ನ ಒತ್ತಡವನ್ನು ಪ್ರತ್ಯೇಕಿಸಿ ವರ್ಗಾವಣೆ ಮಾಡಿದ ಬಳಿಕ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿ ಕಂಪನಿಗೆ ವರ್ಗಾಯಿಸಿದೆ.

ಪೂರ್ವಭಾವಿ ಅಧ್ಯಯನ (ಪ್ರೀ ಕ್ಲಿನಿಕಲ್ ಸ್ಟಡೀಸ್) ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿ ಪ್ರತಿಕ್ರಿಯೆಯ ಫಲಿತಾಂಶಗಳನ್ನು ಕಂಪನಿ ಸಲ್ಲಿಸಿದ ಬಳಿಕ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐನಿಂದ ಅನುಮತಿ ದೊರೆತಿದೆ. ಜುಲೈ ತಿಂಗಳಲ್ಲಿ ರಾಷ್ಟ್ರದಾದ್ಯಂತ ಈ ಲಸಿಕೆಯ ಮಾನವ ಪ್ರಯೋಗಕ್ಕೆ ಆರಂಭವಾಗಲಿದೆ.

ಕೋವಿಡ್​ 19 ಸಾಂಕ್ರಾಮಿಕ ರೋಗವು ಈಗಾಗಲೇ ಭಾರತದಲ್ಲಿ 16,475 ಸೇರಿದಂತೆ ವಿಶ್ವದಾದ್ಯಂತ ಐದು ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಸುಮಾರು 5.5 ಲಕ್ಷ ಸೇರಿದಂತೆ ಜಗತ್ತಿನಾದ್ಯಂತ 1.01 ಕೋಟಿ ಪ್ರಕರಣಗಳು ದೃಢಪಟ್ಟಿದೆ. ಸದ್ಯ ಭಾರತ ವಿಶ್ವದಲ್ಲೇ ಕೋವಿಡ್​ 19 ಹರಡುವಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Recommended For You

About the Author: user

Leave a Reply

Your email address will not be published. Required fields are marked *