‘ಆರು ವರ್ಷಗಳಲ್ಲಿ ಮೋದಿ ಸರ್ಕಾರ 18 ಲಕ್ಷ ಕೋಟಿ ಕೊಳ್ಳೆ ಹೊಡೆದಿದೆ’ – ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ, ರಾಜ್ಯದಲ್ಲೂ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.

ನಗರದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಮನಮೋಹನ್​ ಸಿಂಗ್ ಅವಧಿಯಲ್ಲಿ​ ತೈಲ ದರ ಏರಿಕೆಯಾಗಿದ್ದಾಗ ಬಿಜೆಪಿ ಬಿಜೆಪಿ ನಾಯಕರು ತೀರ್ವ ಆಕ್ರೋಶ ಹೊರಹಾಕುತ್ತಿದ್ದರು. ಜನವಿರೋಧಿ ಸರ್ಕಾರ ಅಂತ ಕರೆಯುತ್ತಿದ್ದರು. ಕಚ್ಚಾ ತೈಲ ಬೆಲೆ ಏರಿದಾಗ ಮಾತ್ರ ಬೆಲೆ ಏರಿಕೆಯಾಗುತ್ತಿತ್ತು.

ಹಾಗಾಗಿ ಅದನ್ನು ನೋಡಿಕೊಂಡು ದರ ಏರಿಕೆ ಮಾಡುತ್ತಿದ್ದರು. ಕೆಳಮಧ್ಯಮ ವರ್ಗದವರಿಗೆ ಅನ್ಯಾಯ ಮಾಡುತ್ತಿರಲಿಲ್ಲ. ಕೇಂದ್ರ ಸರ್ಕಾರದ ಸಬ್ಸಿಡಿ ಕೂಡ ಕೊಡುತ್ತಿದ್ದರು. ಮೋದಿ ಬಂದು ಆರು ವರ್ಷಾವಾಯ್ತು ಆದರೆ ಮಾಡ್ತಿರೋದು ಏನು(?) ಇವತ್ತು ಬಿಜೆಪಿಯವರು ಬಾಯಿ ಬಿಡುತ್ತಿಲ್ಲವೇಕೆ(?) ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಸದ್ಯ ಇಂದು ಬ್ಯಾರೆಲ್ ಬೆಲೆ 30/40 ಡಾಲರ್​ಗೆ ಇಳಿದಿದೆ. ಪೆಟ್ರೋಲ್ ಬೆಲೆಯನ್ನು ಇಳಿಸಬೇಕು ಆದರೆ ದಿನೇ ದಿನೇ ಹೆಚ್ಚು ಮಾಡ್ತಾನೇ ಇದ್ದಾರೆ. ಇವತ್ತು 80 ರೂ.ಗೆ ಬೆಲೆ ಏರಿಕೆಯಾಗಿದೆ. 135 ಡಾಲರ್ ಇದ್ರೂ ಮನಮೋಹನ್ ಸಿಂಗ್​ ಹೆಚ್ಚು ಮಾಡಿರಲಿಲ್ಲ, ಅಂದು ಲೀಟರ್ ಬೆಲೆ 70 ರೂ. ದಾಟಿರಲಿಲ್ಲ, ಒಂದು ಲೀಟರ್ ಡಿಸೇಕ್​ಗೆ 29 ರೂ.ಸೆಸ್ ಹಾಕಿದ್ದಾರೆ. ಪೆಟ್ರೋಲ್​ಗೆ 25 ರೂ. ಸೆಸ್ ಹಾಕಿದ್ದಾರೆ. ಬಡವರು, ಸಾಮಾನ್ಯರ ರಕ್ತವನ್ನು ಹೀರುತ್ತಿದ್ದಾರೆ. ಬೊಕ್ಕಸವನ್ನು ತುಂಬಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆರು ವರ್ಷದಲ್ಲಿ 18 ಲಕ್ಷ ಕೋಟಿ ಕೊಳ್ಳೆ ಹೊಡೆದಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.

Recommended For You

About the Author: user

Leave a Reply

Your email address will not be published. Required fields are marked *