ಪವರ್​ ಸ್ಟಾರ್ ಸಿನಿಮಾ ಮಾಡೋದಾಗಿ ಆರ್​ಜಿವಿ ಘೋಷಣೆ

ವಿವಾದಾತ್ಮಕ ಸಿನಿಮಾಗಳಿಂದ ಸದಾ ಸುದ್ದಿಯಲ್ಲಿರೋ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ. ಲಾಕ್​ಡೌನ್​ ಟೈಮಲ್ಲೂ ಸಿನಿಮಾಗಳನ್ನ ಮಾಡ್ತಾ ಆನ್​ಲೈನ್​ನಲ್ಲಿ ಬಿಡುಗಡೆ ಮಾಡ್ತಾ ಬರ್ತಿದ್ದಾರೆ. ಇದೀಗ ಪವರ್​ ಸ್ಟಾರ್ ಪವನ್​ ಕಲ್ಯಾಣ್​ ಬಗ್ಗೆ ಸಿನಿಮಾ ಮಾಡ್ತೀನಿ ಅಂತ ಹೇಳಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಆರ್​​ಜಿವಿ.

ಕಾಂಟ್ರೋವರ್ಸಿಗಳಿಗೆ ಕೇರ್​ ಆಫ್ ಅಡ್ರೆಸ್ ರಾಮ್​ ಗೋಪಾಲ್ ವರ್ಮಾ. ವಿವಾದಾತ್ಮಕ ಹೇಳಿಕೆಗಳು ಮತ್ತು ವಿವಾದಾತ್ಮಕ ಸಿನಿಮಾಗಳಿಂದ ಸದಾ ಸುದ್ದಿಯಲ್ಲಿರೋ ನಿರ್ದೇಶಕ ಆರ್​ಜಿವಿ. ಒಂದ್ಕಾಲದಲ್ಲಿ ಅದ್ಭುತ ಸಿನಿಮಾಗಳಿಂದ ಸಂಚಲನ ಸೃಷ್ಟಿಸಿದ ವರ್ಮಾ, ಈಗ ಬರೀ ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ಆರ್​ಜಿವಿ ಸಿನಿಮಾಗಳು ಬಾಕ್ಸಾಫೀಸ್​ ಶೇಕ್​ ಮಾಡದೇ ಇದ್ರು, ವಿವಾದಗಳಿಂದ ಸುದ್ದಿಯಲ್ಲಿರ್ತಾವೆ.

ಲಾಕ್​ಡೌನ್​ ನಡುವೆಯೂ ವರ್ಮಾ ಕ್ಲೈಮ್ಯಾಕ್ಸ್​​ ಮತ್ತು ಎನ್​ಎನ್​ಎನ್​​​ ಅನ್ನೋ ಸಿನಿಮಾಗಳನ್ನ ಮಾಡಿ ಆನ್​ಲೈನ್​ನಲ್ಲಿ ರಿಲೀಸ್ ಮಾಡಿದ್ದಾರೆ. ಕೊರೊನಾ ವೈರಸ್ ಬಗ್ಗೆ ಕೂಡ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ​ ಪವನ್​ ಕಲ್ಯಾಣ್​ ಬಗ್ಗೆ ಪವರ್​ ಸ್ಟಾರ್​ ಅನ್ನೋ ಟೈಟಲ್​ನಲ್ಲಿ ಸಿನಿಮಾ ಮಾಡೋದಾಗಿ ಟ್ವೀಟ್​ ಮಾಡಿದ್ದಾರೆ. ಇದು ಪವನ್​ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಮೊದಲಿನಿಂದಲೂ ಮೆಗಾ ಫ್ಯಾಮಿಲಿ ಮತ್ತು ರಾಮ್​ಗೋಪಾಲ್​ ವರ್ಮಾಗೆ ಅಷ್ಟಕ್ಕಷ್ಟೆ. ಬೇಕು ಅಂತ್ಲೇ ಚಿರಂಜೀವಿ, ನಾಗಬಾಬು, ಪವನ್​ ಕಲ್ಯಾಣ್​ ಸಹೋದರರ ಬಗ್ಗೆ ಕಾಮೆಂಟ್​ ಮಾಡಿ ವಿವಾದಗಳನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ. ಇದೀಗ ಪವನ್​ ಬಗ್ಗೆ ಸಿನಿಮಾ ಮಾಡೊದಾಗಿ ಹೇಳಿ ಮತ್ತೆ ರಂಪಾಟ ಶುರು ಮಾಡಿದ್ದಾರೆ. ನಮ್ಮ ಸಿನಿಮಾ ಹೀರೊ ಇವನೇ ಅಂತ ಪವನ್​ ರೀತಿ ಕಾಣುವ ವ್ಯಕ್ತಿಯೊಬ್ಬನ ವೀಡಿಯೋ ಶೇರ್​ ಮಾಡಿದ್ದಾರೆ.

ವರ್ಮಾ ಆನ್​ಲೈನ್​ನಲ್ಲೇ ಸಿನಿಮಾಗಳನ್ನ ರಿಲೀಸ್ ಮಾಡ್ತಿದ್ದಾರೆ. ಪವರ್​ ಸ್ಟಾರ್​ ಸಿನಿಮಾವನ್ನೂ ಇದೇ ರೀತಿ ರಿಲೀಸ್​ ಮಾಡೋಕ್ಕೆ ಪ್ಲಾನ್​ ಮಾಡ್ತಿದ್ದಾರೆ. ಆನ್​ಲೈನ್​ನಲ್ಲಿ ವೀಕ್ಷಕರನ್ನ ಸೆಳೆಯಲು ಜನಸೇನಾ ಪಕ್ಷದ ಅಧ್ಯಕ್ಷ, ನಟ ಪವನ್​ ಕಲ್ಯಾಣ್​ ಹೆಸರನ್ನ ಬಳಸಿಕೊಳ್ತಿದ್ದಾರೆ ಅನ್ನೋದು ಅಭಿಮಾನಿಗಳ ವಾದ. ಈ ಸಿನಿಮಾ ಬಗ್ಗೆ ಆರ್​ಜಿವಿ ಬಗ್ಗೆ ಪವರ್​ ಸ್ಟಾರ್​ ಫ್ಯಾನ್ಸ್​​ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *