ಚಿಕ್ಕಮಗಳೂರಿನ ಚೆಲುವಿಗೆ ಪರವಶರಾದ ಪವರ್​​ ಸ್ಟಾರ್

ಹಚ್ಚ ಹಸುರಿನ ಪ್ರಕೃತಿ ಸೌಂದರ್ಯಕ್ಕೆ ಎಂತವರು ಮೈಮರೆತು ಬಿಡ್ತಾರೆ. ಇತ್ತೀಚೆಗೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕ್ಯಾಮರಾ ಹಿಡಿದು ಚಿಕ್ಕಮಗಳೂರಲ್ಲಿ ಸುತ್ತಾಡಿ ಬಂದಿದ್ದಾರೆ. ಇನ್ನು ದೂದ್​ ಪೇಡಾ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿ ಫ್ಯಾಮಿಲಿ ಸಮೇತ ಔಟಿಂಗ್​ಗೆಂದು ಕೊಡಗಿಗೆ ಹೋಗಿದ್ದಾರೆ.

ಎಲ್ಲರೊಳಗೊಬ್ಬ ನೇಚರ್​ ಲವರ್​ ಇದ್ದೇ ಇರ್ತಾನೆ. ರಮಣೀಯ ತಾಣಗಳಲ್ಲಿ ಮೈ ಮರೆಯದವರು ಯಾರ್​ ಇರ್ತಾರೆ ಹೇಳಿ. ಪವರ್​ ಸ್ಟಾರ್​ ಪುನೀತ್​ ರಾಜ್​​ಕುಮಾರ್​​​​ ಕೂಡ ಟೈಂ ಸಿಕ್ಕಾಗಲೆಲ್ಲಾ ದೂರದೂರುಗಳಿಗೆ ಪ್ರವಾಸ ಕೈಗೊಳ್ತಾರೆ. ಸುಂದರ ತಾಣಗಳನ್ನ ನೋಡೋದಷ್ಟೆ ಅಲ್ಲ, ಸಾಹಸಮಯ ಕ್ರೀಡೆಗಳನ್ನ ಹಾಡೋದು ಅಂದ್ರೆ, ಅಪ್ಪುಗೆ ಅಚ್ಚುಮೆಚ್ಚು. ಕೆಲ ದಿನಗಳ ಹಿಂದೆ ಪುನೀತ್​, ಸೌತ್​ ಅಮೇರಿಕಾದಲ್ಲಿ ಸುತ್ತಾಡಿ ಬಂದ ವೀಡಿಯೋವನ್ನ ಹಂಚಿಕೊಂಡಿದ್ರು.

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಒಂದು ರೌಂಡ್​ ಹಾಕಿ ಬಂದಿದ್ದಾರೆ. ಹಸಿರು ಹೊದ್ದು ಮಲಗಿರುವ ಪ್ರಕೃತಿ ಸೌಂದರ್ಯವನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಚಿಕ್ಕಮಗಳೂರಿನ ಸುತ್ತಾಮುತ್ತಾ ಏಕಾಂಗಿಯಾಗಿ ಸುತ್ತಾಡಿ ಪ್ರಕೃತಿ ಸೌಂದರ್ಯ ಕಂಡು ಬೆರಗಾಗಿದ್ದಾರೆ. ಅಪ್ಪು ಶೂಟ್​ ಮಾಡಿರೋ ವೀಡಿಯೋವನ್ನ ಭದ್ರಿನಾಥ್​ ವೆಂಕಟೇಶ್,​ ಎಡಿಟ್ ಮಾಡಿದ್ದು, ಚರಣ್​ ರಾಜ್​ ಮ್ಯೂಸಿಕ್​ ಮಾಡಿದ್ದಾರೆ. ರಾಜರತ್ನ ಅಪ್ಪು ಪ್ರವಾಸ ಕಥನ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ಲಾಗಿದೆ.

ಪುನೀತ್​ ರಾಜ್​ಕುಮಾರ್​ ಚಿಕ್ಕಮಗಳೂರಿನಲ್ಲಿ ಸುತ್ತಾಡಿದ ವೀಡಿಯೋ ಶೇರ್​ ಮಾಡಿದ್ರೆ, ದಿಗಂತ್​ ಮತ್ತು ಐಂದ್ರಿತಾ ಕೊಡಗಿನ ಪ್ರವಾಸ ಕಥವನ್ನ ಬಿಚ್ಚಿಟ್ಟಿದ್ಧಾರೆ. ಲಾಕ್​ಡೌನ್​ನಿಂದ ರಿಲೀಫ್​ ಸಿಕ್ಕಮೇಲೇ ಫ್ಯಾಮಿಲಿ ಸಮೇತ ಕೊಡಗಿಗೆ ಔಟಿಂಗ್​ ಹೋಗಿರುವ ದಂಪತಿ ಅದಕ್ಕೆ ಸಂಬಂಧಿಸಿದ ವೀಡಿಯೋ ಮತ್ತು ಫೋಟೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡ್ತಿದ್ದಾರೆ.

ಐಂದ್ರಿತಾರ ಅಪ್ಪ-ಅಮ್ಮ ಹಾಗೂ ತಮ್ಮ ಸಾಕು ನಾಯಿಗಳೊಂದಿಗೆ ಕೊಡಗಿಗೆ ಹೋಗಿ, ಎಂಜಾಯ್ ಮಾಡಿದ್ದಾರೆ. ಕೊರೊನಾ ಮತ್ತು ಲಾಕ್​ಡೌನ್​ನಿಂದ ಸಿನಿಮಾ ಶೂಟಿಂಗ್​, ಪಾರ್ಟಿ ಎಲ್ಲಾ ಬಂದ್​ ಆಗಿದೆ. ಲಾಕ್​ಡೌನ್​ ಸಡಿಲಿಕೆ ನಂತ್ರ ಮನೆಯಿಂದ ಹೊರಬಂದು ಪ್ರಕೃತಿ ಮಡಿಲಲ್ಲಿ ದಿಗಂತ್​- ಐಂದ್ರಿತಾ ರೇ ದಂಪತಿ ರಿಲ್ಯಾಕ್ಸ್​ ಮಾಡ್ತಿದ್ದಾರೆ.

ಸಮಯ ಸಿಕ್ಕಾಗಲೆಲ್ಲಾ ದಿಗಂತ್​ ಮತ್ತು ಐಂದ್ರಿತಾ ಟ್ರಿಪ್​, ಟ್ರಕ್ಕಿಂಗ್​ಗೆ ಹೋಗ್ತಿರ್ತಾರೆ. ದಿಗಂತ್​ ಸ್ನೇಹಿತರ ಜೊತೆ ಸೇರಿ ಜಾಲಿಯಾಲಿ ಸೈಕಲ್​ ಏರಿ ಊರೂರು ಸುತ್ತಾಡ್ತಾರೆ. ಸದ್ಯ ಕೊಡಗಿನಲ್ಲಿ ಫ್ಯಾಮಿಲಿ ಸಮೇತ ಬೀಡು ಬಿಟ್ಟಿದ್ದಾರೆ. ತಮ್ಮ ಎರಡು ನಾಯಿಗಳನ್ನ ಕರೆದುಕೊಂಡು ಹೋಗಿದ್ದಾರೆ. ಹಸಿರು ಹೊದ್ದ ಬೆಟ್ಟಗುಡ್ಡ, ಧುಮ್ಮಿಕ್ಕಿ ಹರಿಯುವ ಜಲಪಾತಗಳನ್ನೆಲ್ಲಾ ನೋಡುತ್ತಾ ಎಂಜಾಯ್​ ಮಾಡ್ತಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *