‘ಕಾಂಗ್ರೆಸ್​​ನವರು ಎಂಟಿಆರ್​ ಫುಡ್​ ಅವರ ಜೀವನದಲ್ಲಿ ಹೋರಾಟ ಮಾಡಿಯೇ ಗೊತ್ತಿಲ್ಲ’

ದಾವಣಗೆರೆ: ಎಸ್​ಎಸ್​ಎಲ್​ಸಿ ಪರೀಕ್ಷೆ ಸರ್ಕಾರದ ಪ್ರತಿಷ್ಠೆ ಸಂಕೇತವಲ್ಲ, ವಿದ್ಯಾರ್ಥಿಗಳ ಪ್ರತಿಭೆಗೆ ಪರೀಕ್ಷೆ ಕೈಗನ್ನಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಸೋಮವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸಭೆಯಲ್ಲಿ ನಮ್ಮ ಕಾರ್ಯದ ಬಗ್ಗೆ ಶ್ಲಾಘಿಸಿತ್ತಾರೆ. ಮಾಧ್ಯಮದ ಎದುರು ವಿರೋಧಿಸುತ್ತಾರೆ. ವಿರೋಧ ಮಾಡಬೇಕೆಂದು ವಿರೋಧಿಸುವುದು ತಪ್ಪು. ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲು ಆಗ್ರಹಿಸುತ್ತಿದ್ದಾರೆ ಅದೇನು ಹುಡುಗಾಟನಾ(?) ಎಂದು ಪ್ರಶ್ನೆ ಮಾಡಿದರು.

ಇನ್ನು ಸಿಬಿಎಸ್​ಇ ಪರೀಕ್ಷೆ ರದ್ದು ಪಡಿಸಿದಕ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿಡಲು ನಿರಾಕರಿಸಿದ ಅವರು, ಅದು ಕೇಂದ್ರ ಸರ್ಕಾರದ ತೀರ್ಮಾನ. ಕೇಂದ್ರ ಎಲ್ಲವನ್ನೂ ಚಿಂತನೆ ಮಾಡಿ ನಿರ್ಧರಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಯಶಸ್ವಿಯಾಗಿ ನಡೆಯುತ್ತಿವೆ ಎಂದರು.

ಇದೇ ವೇಳೆ ತೈಲ ದರ ಏರಿಕೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಸಾವಿರಾರು ಜನ ಸೇರಿಸಿ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿದ್ದು ತಪ್ಪು. ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದರೆ, ಕೊರೊನಾ ಸಂದರ್ಭದಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದು ಸರಿಯಲ್ಲ ಎಂದು ಅವರು ಹೇಳಿದರು.

ಸದ್ಯ ಕಾಂಗ್ರೆಸ್​ನವರು ಎಂಟಿಆರ್ ರೆಡಿಮೇಡ್ ಫುಡ್ ಇದ್ದಂತೆ ಅವರ ಜೀವನದಲ್ಲಿ ಹೋರಾಟ ಮಾಡಿಯೇ ಗೊತ್ತಿಲ್ಲ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಲ್ಲಿ ಆಧಿಕಾರಕ್ಕೆ ಬಂದಿದ್ರು. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್​ನವರಿಗೆ ಮಾನ-ಮರ್ಯಾದೆ ಇಲ್ಲ, ಅನುಮತಿ ಪಡೆಯದೇ ಸಾವಿರಾರು ಜನ ಸೇರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಕಾಂಗ್ರೆಸ್​ನವರಿಗೆ ಪ್ರತಿಪಕ್ಷದ ಸ್ಥಾನ ಖಾಯಂ ಆಗಲಿದೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *