‘ಮೋದಿ, ಅಮಿತ್​ ಶಾ ಇಬ್ಬರಿಂದಲೇ ದೇಶ ಹಾಳಾಗುತ್ತಿದೆ’ – ಮಲ್ಲಿಕಾರ್ಜುನ್​ ಖರ್ಗೆ ಆಕ್ರೋಶ

ಬೆಂಗಳೂರು: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದೆ, ಇಂತಹ ಏರಿಕೆಯನ್ನು ನಾವು ಊಹಿಸಿರಲಿಲ್ಲ ಎಂದು ಕಾಂಗ್ರೆಸ್​​ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆ ಅವರು ತೈಲ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಕಾಂಗ್ರೆಸ್​ ತೈಲೆ ಬೆಲೆ ಖಂಡಿಸಿ ಪ್ರತಿಭಟನೆ ನಡೆಸಿತು ಈ ವೇಳೆ ಮಾತನಾಡಿದ ಅವರು, ಮೋದಿ ಕಾಲದಲ್ಲಿ ಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ. ಬೆಲೆ ಏರಿಕೆಯಿಂದ ರೈತರು, ಬಡವರಿಗೂ ತೊಂದರೆಯಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಬ್ಯಾರಲ್130 ಡಾಲರ್ ಇತ್ತು. ವಿಶ್ವ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆಯಿತ್ತು. ಆದರೂ ನಾವು 50/60ಕ್ಕೆ ಲೀಟರ್ ನೀಡುತ್ತಿದ್ದೆವು. ಆದರೆ, ಇಂದು 30 ಡಾಲರ್ ಬ್ಯಾರಲ್ ಬೆಲೆಯಿದೆ. ಆದರೂ ಕೇಂದ್ರ ೮೦ ರೂ. ಲೀಟರ್ ಏರಿಸಿದೆ. 20 ರೂ.ಗೆ ಸಿಗಬೇಕಾದ ಪೆಟ್ರೋಲ್ 80 ರೂ. ಮಾಡಿದ್ದಾರೆ. ಕೇಂದ್ರ ಸರ್ಕಾರ ಸಾಮಾನ್ಯರ ಪರ ಇದ್ಯಾ(?) ಮೋದಿ 15 ಲಕ್ಷ ಕೋಟಿ ಬೊಕ್ಕಸಕ್ಕೆ ಹಾಕಿಕೊಂಡಿದ್ದಾರೆ ಎಂದು ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಮೋದಿ, ಶಾ ಇಬ್ಬರಿಂದಲೇ ದೇಶ ಹಾಳಾಗುತ್ತಿದೆ. ಅವರಿಬ್ಬರಿಗೆ ಅದ್ಯಾರು ಸಲಹೆ ಕೊಡ್ತಾರೋ ಗೊತ್ತಿಲ್ಲ. ಅವರು ಮಾಡೋ ಎಲ್ಲವೂ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ನಾವು ಕೇವಲ ಸಾಂಕೇತಿಕ ಪ್ರತಿಭಟನೆ ಮಾಡಿದ್ದೇವೆ. ರಕ್ಷಣಾ ಬಜೆಟ್ ಕೂಡ ಅವರು ಏರಿಸಲೇ ಇಲ್ಲ. ಕೇವಲ ಶೇ.1 ಅಥವಾ 2 ಅಷ್ಟೇ ಏರಿಸೋದು. ಬಜೆಟ್​ನಲ್ಲಿ ರಕ್ಷಣೆಗೆ ಮಾನ್ಯತೆ ನೀಡಿಲ್ಲ. ಇನ್ನು ಇವರು ಯಾವುದನ್ನು ಒಳ್ಳೆಯದು ಮಾಡ್ತಾರೆ ಎಂದು ಮಲ್ಲಿಕಾರ್ಜುನ್​ ಖರ್ಗೆ ಅವರು ಕೇಂದ್ರದ ಬಿಜೆಪಿ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *