ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್​ 19,459 ಹೊಸ ಕೇಸ್​​ ಪತ್ತೆ, 380 ಮಂದಿ ಸಾವು

ನವದೆಹಲಿ: ಪ್ರತಿನಿನಿತ್ಯ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದ್ಯಾಂತ ಕಳೆದ 24 ಗಂಟೆಗಳಲ್ಲಿ 19,459 ಹೊಸ ಕೋವಿಡ್‌-19 ಪ್ರಕರಣಗಳು ದೃಢಪಟ್ಟಿದ್ದು, 380 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಭಾರತದಲ್ಲಿ ಇಲ್ಲಿವರೆಗೆ ಒಟ್ಟು 5,48,318 ಕೋವಿಡ್​19 ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆಯು 16,475ಕ್ಕೆ ಏರಿಕೆಯಾಗಿದ್ದು, ಸದ್ಯ 2,10,120 ಪ್ರಕರಣಗಳು ಸಕ್ರಿಯವಾಗಿದ್ದು, 3,21,723 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಕೋವಿಡ್‌-19ನಿಂದ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 1,64,626 ಪ್ರಕರಣಗಳು ಬೆಳಕಿಗೆ ಬಂದಿದ್ದು, 70,622 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಈವರೆಗೆ 86,575 ಮಂದಿ ಗುಣಮುಖರಾಗಿದ್ದು, 7,429 ಜನರು ಮೃತರಾಗಿದ್ದಾರೆ.

ಗುಜರಾತ್‌ನಲ್ಲಿ ಒಟ್ಟಾರೆ 31,320 ಜನರಿಗೆ ಸೋಂಕು ತಗುಲಿದೆ. 6,712 ಸಕ್ರಿಯ ಪ್ರಕರಣಗಳಿದ್ದು, 22,800 ಮಂದಿ ಚೇತರಿಸಿಕೊಂಡಿದ್ದಾರೆ. ಇದುವರೆಗೂ 1,808 ಜನರು ಮೃತಪಟ್ಟಿದ್ದಾರೆ.

ದೇಶದ ರಾಜಧಾನಿ ಒಟ್ಟಾರೆ 83,077 ಮಂದಿಗೆ ಸೋಂಕು ತಗುಲಿರುವುದು ಖಚಿವಾಗಿದೆ. 27,847 ಸಕ್ರಿಯ ಪ್ರಕರಣಗಳಿದ್ದು, 52,607 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 2,623 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ ಒಟ್ಟಾರೆ 82,275 ಮಂದಿಗೆ ಸೋಂಕು ತಗುಲಿದ್ದು, 35,659 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 45,537 ಗುಣಮುಖರಾಗಿದ್ದು, 1,079 ಮಂದಿ ಮೃತಪಟ್ಟಿದ್ದಾರೆ. ಇನ್ನುಳಿದಂತೆ ಮಧ್ಯಪ್ರದೇಶದಲ್ಲಿ 557, ಪಶ್ಚಿಮ ಬಂಗಾಳದಲ್ಲಿ 639, ಉತ್ತರ ಪ್ರದೇಶದಲ್ಲಿ 660 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *