ಕೋವಿಡ್​ 19: ವಿಶ್ವಾದ್ಯಂತ ಕಳೆದ 24 ಗಂಟೆಯಲ್ಲಿ1.89 ಹೊಸ ಕೇಸ್​ ದೃಢ, 8,813 ಮಂದಿ ಸಾವು

ಜಿನಿವಾ: ವಿಶ್ವಾದ್ಯಂತ ಕಳೆದ 24 ಗಂಟೆಗಳಲ್ಲಿ 1.89 ಲಕ್ಷ ಕೋವಿಡ್‍ -19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಇಲ್ಲಿತನಕ ದಾಖಲಾಗಿರುವ ಗರಿಷ್ಠ ಪ್ರಕರಣಗಳಾಗಿವೆ ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಎಚ್ಒ) ಪ್ರಕಟನೆಯಲ್ಲಿ ತಿಳಿಸಿದೆ.

ಇದಕ್ಕೂ ಮೊದಲು 1.83 ಲಕ್ಷ ಪ್ರಕರಣಗಳು ದಾಖಲಾಗಿದ್ದೇ ದಾಖಲೆಯಾಗಿತ್ತು. ಜಗತ್ತಿನಾದ್ಯಂತ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಈ ಅವಧಿಯಲ್ಲಿ ಬ್ರೆಜಿಲ್‍ನಲ್ಲಿ ಗರಿಷ್ಠ 46,860 ಪ್ರಕರಣಗಳು ಮತ್ತು ಅಮೆರಿಕದಲ್ಲಿ44,458 ಪ್ರಕರಣಗಳು ದಾಖಲಾಗಿವೆ.

ರಷ್ಯಾದಲ್ಲಿ 6,791 ಹೊಸ ಪ್ರಕರಣಗಳು, ಭಾರತ 19,906, ದಕ್ಷಿಣ ಆಫ್ರಿಕಾ 6,334, ಪಾಕಿಸ್ತಾನ 4,072, ಬಾಂಗ್ಲಾದೇಶ 3,504 ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ದಾಖಲಾಗಿವೆ.

ಸದ್ಯದ ಮಟ್ಟಿಗೆ ಗರಿಷ್ಠ ಪ್ರಕರಣಗಳ ಸಂಖ್ಯೆಯಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದು, ಒಟ್ಟಾರೆ 24.5 ಲಕ್ಷ ಮಂದಿಗೆ ಸೋಂಕು ತಗುಲಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ತನ್ನ ವರದಿ ಹೇಳಿದೆ.

 

Recommended For You

About the Author: user

Leave a Reply

Your email address will not be published. Required fields are marked *