ತುಮಕೂರಿನ ಯಾವುದೇ ಕೇಂದ್ರದಲ್ಲಿ ಪರೀಕ್ಷಾ ಮೇಲ್ವಿಚಾರಕರಿಗೆ ಪಾಸಿಟೀವ್ ಬಂದಿಲ್ಲ

ಬೆಂಗಳೂರು: ಇವತ್ತು ಅತಿ ಹೆಚ್ಚು ವಿದ್ಯಾರ್ಥಿಗಳ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ಶನಿವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮೊದಲ ದಿನದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸುತ್ತಿದ್ದೇವೆ. ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯಬೇಕು. ಎಲ್ಲಾ ಕೇಂದ್ರಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಇನ್ನು ಕಲಬುರ್ಗಿಯಲ್ಲಿ ಕಾಪಿ ಹೊಡೆಯಲು ಯತ್ನಿಸಿದ್ರು. ಅವರ ವಿರುದ್ದ ಅಪರ ಆಯುಕ್ತರು ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ. ಮಂಡ್ಯದಲ್ಲೂ ಇಂತಹ ಘಟನೆ ಗಮನಕ್ಕೆ ಬಂದಿದೆ. ಅದನ್ನು ಪರಿಶೀಲನೆ ಮಾಡ್ತೀವಿ ಎಂದು ಹೇಳಿದರು.

ಸದ್ಯ ತುಮಕೂರಿನ ಯಾವುದೇ ಕೇಂದ್ರದಲ್ಲಿ ಪರೀಕ್ಷಾ ಮೇಲ್ವಿಚಾರಕರಿಗೆ ಪಾಸಿಟೀವ್ ಬಂದಿಲ್ಲ. ಒಂದು ಕೇಂದ್ರದ ಡಿ ಗ್ರೂಪ್ ನೌಕರನಿಗೆ ಬಂದಿದೆ. ಆದರೆ, ಆತ ಮಧ್ಯಾಹ್ನನ ನಂತರ ಬಂದು ಅರ್ಧ ಗಂಟೆ ಮಾತ್ರ ಇದ್ದು ಹೋಗಿದ್ದಾನೆ. ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಪರೀಕ್ಷಾ ಕೇಂದ್ರ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಆತನನ್ನ ಆಸ್ಪತ್ರೆ ವಶಕ್ಕೆ ನೀಡಲಾಗಿದೆ. ಆತ ಯಾಕೆ ಅಲ್ಲಿಗೆ ಬಂದಿದ್ದ ಅಂತ ಚೆಕ್ ಮಾಡ್ತೀವಿ. ಯಾವುದೇ ಪರೀಕ್ಷಾ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಏನು ತೊಂದರೆ ಆಗಿಲ್ಲ. ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *