‘ಮಿಡತೆ ತಿನ್ನುವುದರಿಂದ ಕೊರೊನಾ ಸೋಂಕಿನಿಂದ ಗುಣಮುಖ’ -ಪಾಕಿಸ್ತಾನ ಸಂಸದ ರಿಯಾಜ್ ಫತ್ಯಾನಾ

ಪಾಕಿಸ್ತಾನ: ಕೋವಿಡ್​-19 ವೈರಸ್​ನಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಕಂಗಾಲಾಗಿವೆ ಈ ಸಂದರ್ಭದಲ್ಲಿ ಮಿಡತೆ ದಾಳಿ ಮತ್ತು ಕೊರೊನಾ ಸಮಸ್ಯೆ ಇವೆರೆಡನ್ನು ಒಟ್ಟಾಗಿ ಎದುರಿಸುತ್ತಿರುವ ಪಾಕಿಸ್ತಾನದ ಸಂಸದರಾದ ರಿಯಾಜ್ ರಿಯಾಜ್ ಫತ್ಯಾನಾ ಅವರು ಕೊರೊನಾಗೆ ಹೊಸ ಔಷಧಿ ಬಗ್ಗೆ ಸಲಹೆ ನೀಡಿದ್ದು, ಮಿಡತೆಗಳನ್ನು ತಿನ್ನುವುದರಿಂದ ಕೊರೊನಾ ಸೋಂಕಿನಿಂದ ಗುಣಮುಖರಾಗಲು ಸಾಧ್ಯವಿದೆ.

ಪಾಕಿಸ್ತಾನದ ಸಂಸತ್​ನಲ್ಲಿ ಮಾತನಾಡಿರುವ ಅವರು, ಮಿಡತೆ ತಿಂದ್ರೆ ಸೋಂಕಿಗೆ ತುತ್ತಾಗಿರುವ ರೋಗಿಯ ದೇಹದಲ್ಲಿ ರೋಗ-ನಿರೋಧಕ ಶಕ್ತಿಯನ್ನು ವೃದ್ಧಿಸಲಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ ಮುಖಂಡ ರಿಯಾಜ್ ಫತ್ಯಾನಾ ಅವರು, ಮಿಡತೆಗಳನ್ನು ಸೇವಿಸುವುದರಿಂದ ಕೊರೊನಾ ವೈರಸ್​ ಸೋಂಕು ಗುಣವಾಗಲಿದೆ. ಮಿಡತೆ ಸೇವನೆಯಿಂದ ಕೊರೊನಾ ಪ್ರತಿಕಾಯಗಳು ಸೃಷ್ಟಿಯಾಗುವುದು ನಿಜವೆಂದು ಸಾಬೀತಾದ್ರೆ, ಪಾಕಿಸ್ತಾನದ ಜನರು ಸ್ವತಃ ಮಿಡತೆಗಳ ಸಮಸ್ಯೆ ಎದುರಿಸುತ್ತಿದ್ದು ಸರ್ಕಾರ ಇದಕ್ಕಿಂತ ಹೆಚ್ಚಿನದನ್ನು ಮಾಡಬೇಕಿಲ್ಲ ಎಂದು ಫತ್ಯಾನ ಅವರು ಸಂಸತ್ತಿನಲ್ಲಿ ಹೇಳಿದರು.

ಇದಲ್ಲದೆ ಕಳೆದ 24 ಗಂಟೆಗಳಲ್ಲಿ 4,044 ಹೊಸ ಕೋವಿಡ್ ಪ್ರಕರಣಗಳು ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು ಒಟ್ಟೂ ಪ್ರಕರಣಗಳ ಸಂಖ್ಯೆ 192,000 ದಾಟಿದೆ.

Recommended For You

About the Author: user

Leave a Reply

Your email address will not be published. Required fields are marked *