ತೈಲ ಬೆಲೆ ಏರಿಕೆ ಕೇಂದ್ರ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಕೆ

ಬೆಂಗಳೂರು: ರಾಹುಲ್ ಗಾಂಧಿ ಎಲ್ಲಾ ಪಿಸಿಸಿ ಅಧ್ಯಕ್ಷರ ಜೊತೆ ನಿನ್ನೆ ಅವರು ನಮ್ಮೆಲ್ಲರ ಜೊತೆ ಕಾನ್ಫರೆನ್ಸ್ ಮಾಡಿದರು. ಹೀಗಾಗಿ ಅವರ ಸೂಚನೆಯಂತೆ ಹುತಾತ್ಮಯೋಧರಿಗೆ ನಾಳೆ ಗಾಂಧಿ ಪ್ರತಿಮೆ ಬಳಿ ಕಾರ್ಯಕ್ರಮ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರ ಹೇಳಿದರು.

ನಗರದ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷರು ಸೇರಿದಂತೆ ಮೂವರು ಕಾರ್ಯಾಧ್ಯಕ್ಷರ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದರು. ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಮಾಡುತ್ತೇವೆ. ಸೋಶಿಯಲ್ ಮಿಡಿಯಾ ಮೂಲಕ ಎಲ್ಲವನ್ನೂ ಪ್ರದರ್ಶಿಸುತ್ತೇವೆ. ಮೃತ ಯೋಧರ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.

ಇನ್ನು ಜೂನ್​ 29ರಂದು ಹಿರಿಯ ನಾಯಕರ ಸಭೆ ಕರೆದಿದ್ದೇವೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಲಾಗಿದ್ದು, ಹೋರಾಟದ ರೂಪು-ರೇಷೆ ಸಿದ್ಧಪಡಿಸುತ್ತೇವೆ ಎಂದು ಅವರು ತಿಳಿಸಿದರು.

ಲಾಕ್​ಡೌನ್ ಆದ್ಮೇಲೆ ಎಕ್ಸೈಸ್ ಡ್ಯೂಟಿ ಹೆಚ್ಚಾಗಿದೆ. ದೇಶದ ನಾಗರೀಕರನ್ನು ಕೇಂದ್ರ ಸುಲಿಗೆ ಮಾಡುತ್ತಿದೆ. ಡಿಸೇಲ್ ಮೇಲೆ ಶೇ.26.48 ಪೆಟ್ರೋಲ್ ಶೇ.21 ತೆರಿಗೆ ಹಾಕಿದ್ದಾರೆ. 32.88 ರೂ. ಪರ್​ ಬ್ಯಾಲರ್ ಬೆಲೆಯಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಳಗಿಳಿದಿದೆ. ಲೀಟರ್​ಗೆ 20 ರೂ. ಮಾಡಬೇಕಿತ್ತು. ಆದರೆ, 80 ರೂ.ವರೆಗೆ ಏರಿಕೆಯಾಗುತ್ತಿದೆ. ಹೀಗಾಗಿ ಜೂನ್ 29ರಂದು ಧರಣಿ ಮಾಡುತ್ತೇವೆ. ಜಿಲ್ಲಾ ಕೇಂದ್ರಗಳಲ್ಲೂ ಕೇಂದ್ರದ ವಿರುದ್ಧ ಹೋರಾಟ ಮಾಡುತ್ತೇವೆ. ಜುಲೈ4, 5ರಂದು ತಾಲೂಕು ಮಟ್ಟದಲ್ಲಿ ಧರಣಿ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಚಿಕಿತ್ಸೆಗೆ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಅವರು, ನಾನು ಮೆಡಿಕಲ್ ಎಜುಕೇಶನ್ ಸಚಿವನಾಗಿದ್ದ. ನಾವು ಆರೋಗ್ಯ ಕರ್ನಾಟಕ ಯೋಜನೆ ತಂದಿದ್ದೆವು. ಬಡ ಕುಟುಂಬಗಳಿಗೆ 5 ಲಕ್ಷ ಉಚಿತ ಚಿಕಿತ್ಸೆ ತಂದಿದ್ದೆವು. ಆದರೆ, ಪಿಎಂ, ಸಿಎಂ ಕೇರ್​ಗೆ ಹಣ ಹರಿದುಬಂದಿದೆ. ಇದನ್ನು ಬಳಸಿಕೊಂಡು ಜನರಿಗೆ ಉಚಿತ ಚಿಕಿತ್ಸೆ ನೀಡಿ ಅದನ್ನು ಬಿಟ್ಟು ಬಡವರಿಂದ ಹಣ ವಸೂಲಿ ಯಾಕೆ ಮಾಡುತ್ತಿರಾ. ಕೊವಿಡ್ ಸೋಂಕನ್ನು ಎಲ್ಲರಿಗೂ ಹಂಚಿದ್ದೀರ ಎಂದು ಅವರು ಸರ್ಕಾರದ ವಿರುದ್ಧ ಆರೋಪ ಮಾಡಿದರು.

Recommended For You

About the Author: user

Leave a Reply

Your email address will not be published. Required fields are marked *