‘ನಡು ಬೀದಿಯಲ್ಲಿ ವಿಶ್ವನಾಥ್​ ಅವರನ್ನು ಕೈ ಬಿಡಬೇಡಿ’ – ಆರ್​ ಶಂಕರ್​ ಸಿಎಂಗೆ ಮನವಿ

ಬೆಂಗಳೂರು: ಹೆಚ್​ ವಿಶ್ವನಾಥ್​ ಅವರಿಗೆ ವಿಧಾನ ಪರಿಷತ್​ ಚುನಾವಣೆಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಸಚಿವ ಆರ್​. ಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದು, ನಾಮಕರಣ ಮಾಡುವ ವೇಳೆ ಅಣ್ಣನಿಗೆ ಕೊಡ್ತಾರೆ. ಈ ಬಗ್ಗೆ ನಾವು ಸಿಎಂ ಅವರಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಶ್ವನಾಥ್​ ಅಧಿಕಾರವಿಲ್ಲದೆ ಬಂದವರಲ್ಲ, ಅವರು ಬಂದಿದ್ದರಿಂದಲೇ ನಾವೆಲ್ಲ ಇಲ್ಲಿಗೆ ಬಂದಿದ್ದು ಎಂದು ಆರ್​ ಶಂಕರ್ ಅವರು ಹಳ್ಳಿಹಕ್ಕಿ ಪರ ಬ್ಯಾಟಿಂಗ್​ ಮಾಡಿದ್ದಾರೆ.

ಇನ್ನು ಸಿಎಂ ಭರವಸೆ ಕೊಟ್ಟಿದ್ದಾರೆ ಅವರಿಗೆ ಕೊಟ್ಟೇ ಕೊಡ್ತಾರೆ. ಬೇರೆಯವರ ಬಗ್ಗೆ ಗೊತ್ತಿಲ್ಲ ಆದರೆ ನಾನಂತೂ ವಿಶ್ವನಾಥ್ ಪರ ಒತ್ತಡ ತರ್ತೇನೆ. ಈಗ ಅವರಿಗೆ ವಯಸ್ಸಾಗಿದೆ ಇಂತಹ ಸಂದರ್ಭದಲ್ಲಿ ಮಿಸ್ ಮಾಡಿದ್ರೆ ಬೇರೆ ಅರ್ಥ ಹೋಗುತ್ತೆ. ಆಗಲೂ ನಾವೆಲ್ಲ ಒಟ್ಟಾಗಿಯೇ ಬಂದಿದ್ದೆವು. ಈಗಲೂ ವಿಶ್ವನಾಥ್ ಪರ ನಾವು ನಿಲ್ಲುತ್ತೇವೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್​ ಚುನಾವಣೆ ಬಿಜೆಪಿಯಿಂದ ಟಿಕೆಟ್​ ಪಡೆದಿರುವ ಆರ್.ಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಅಷ್ಟೇ ಅಲ್ಲದೇ, ಸಾಕಷ್ಟು ಸಲ ಬಿಜೆಪಿ ಸರ್ಕಾರ ತರೋಕೆ ಪ್ರಯತ್ನ ಮಾಡಲಾಗಿತ್ತು. ಆದರೆ, ವಿಶ್ವನಾಥ್ ಬಂದ ಬಳಿಕವೇ ಅದು ಸಾಧ್ಯವಾಗಿದ್ದು, ನಡು ಬೀದಿಯಲ್ಲಿ ವಿಶ್ವನಾಥ್​ಅವರನ್ನು ಕೈ ಬಿಡಬೇಡಿ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರಿಗೆ ಆರ್​ ಶಂಕರ್​ ಮನವಿ ಮಾಡಿಕೊಂಡಿದ್ದಾರೆ

Recommended For You

About the Author: user

Leave a Reply

Your email address will not be published. Required fields are marked *