Top

ಪ್ರಶಾಂತ್​ ನೀಲ್​- ಜೂನಿಯರ್​ ಎನ್​ಟಿಆರ್​ ಸಿನಿಮಾಗೆ ಟೈಟಲ್​ ಫಿಕ್ಸ್​..!

ಪ್ರಶಾಂತ್​ ನೀಲ್​- ಜೂನಿಯರ್​ ಎನ್​ಟಿಆರ್​ ಸಿನಿಮಾಗೆ ಟೈಟಲ್​ ಫಿಕ್ಸ್​..!
X

ಕೆಜಿಎಫ್​ ​-2 ನಂತರ ಪ್ರಶಾಂತ್​ ನೀಲ್​ ಮುಂದಿನ ಸಿನಿಮಾ ಯಾವ್ದು ಅನ್ನೋ ಪ್ರಶ್ನೆ ಬಹಳ ದಿನಗಳಿಂದ ಅಭಿಮಾನಿಗಳನ್ನು ಕಾಡ್ತಿದೆ. ಪ್ರಭಾಸ್​, ಮಹೇಶ್​ ಬಾಬುನಾ ಬಿಟ್ಟು, ನೀಲ್ ಜೂನಿಯರ್​ ಎನ್​ಟಿಆರ್​ಗೆ ಸಿನಿಮಾ ಮಾಡೋದು ಪಕ್ಕಾ ಆಗಿದೆ ಅಂತ್ಲೇ ಕೆಲವರು ಫಿಕ್ಸ್​ ಆಗಿದ್ದಾರೆ. ಇದೀಗ ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಕೊಡುವಂತೆ , ಚಿತ್ರಕ್ಕೆ ಟೈಟಲ್​ ಕೂಡ ರಿಜಿಸ್ಟರ್ ಆಗಿದೆ ಅನ್ನೋ ಮಾತು ದಟ್ಟವಾಗಿದೆ.

ಕೆಜಿಎಫ್​ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲೇ ಗುರುತಿಸಿಕೊಂಡ ನಿರ್ದೇಶಕ ಪ್ರಶಾಂತ್​ ನೀಲ್. ಇದೀಗ ಕೆಜಿಎಫ್​ 2ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾದ್ರೆ ನೀಲ್​ ಮುಂದಿನ ಸಿನಿಮಾ ಯಾವುದು ಅಂತ ಯೋಚನೆ ಮಾಡುತ್ತಿದ್ದ ಸಿನಿಪ್ರಿಯರು ಜೂನಿಯರ್​ ಎನ್​ಟಿಆರ್​ಗೆ ನೀಲ್​ ಆ್ಯಕ್ಷನ್​ ಕಟ್ ಹೇಳೋದು ಪಕ್ಕಾ ಅಂತ್ಲೇ ಫಿಕ್ಸ್​ ಆಗಿದ್ರು.

ಎನ್​​ಟಿಆರ್​​ಗಂತ್ಲೇ ನೀಲ್​ ಹೈವೋಲ್ಟೇಜ್​ ಸ್ಕ್ರಿಪ್ಟ್​ ರೆಡಿ ಮಾಡಿದ್ದು, ಈ ಸಿನಿಮಾ ಕೆಜಿಎಫ್​ನ ಮೀರಿಸುತ್ತೆ, ಮೈತ್ರಿ ಮೂವಿ ಮೇಕರ್ಸ್​ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣವಾಗುತ್ತೆ ಅಂತ ಸುದ್ದಿ ಆಯ್ತು. ಅಧಿಕೃತವಾಗಿ ಯಾರು ಹೇಳದೇ ಇದ್ರು, ಎನ್​ಟಿಆರ್​ ಮತ್ತು ನೀಲ್​​ ಕಾಂಬೋ ಸಿನಿಮಾ ಪಕ್ಕಾ ಅಂತ್ಲೇ ಸುದ್ದಿಯಾಗ್ತಿದೆ.

ಇದೀಗ ಈ ಸುದ್ದಿಯ ಬೆನ್ನಲ್ಲೇ ಮತ್ತೊಂದು ಹೊಸ ಸುದ್ದಿ ಹರಿದಾಡ್ತಿದೆ. ಮೈತ್ರಿ ಮೂವಿ ಮೇಕರ್ಸ್​ ಬ್ಯಾನರ್​ನಲ್ಲಿ, ನೀಲ್​ ಮತ್ತು ಎನ್​ಟಿಆರ್ ಚಿತ್ರಕ್ಕೆ ಟೈಟಲ್​ ಕೂಡ ರಿಜಿಸ್ಟರ್ ಮಾಡಿದ್ದಾಗಿದೆಯಂತೆ. ಒಂದಲ್ಲ ಅಂತ ಎರಡು ಟೈಟಲ್​ಗಳನ್ನ ರಿಜಿಸ್ಟರ್ ಮಾಡಿದ್ದು, ಎರಡಲ್ಲಿ ಒಂದು ಫೈನಲ್​ ಆಗಲಿದ್ಯಂತೆ. ಅಂದ್ಹಾಗೇ ಈ ಟೈಟಲ್​ಗಳು ಕೂಡ ಪಕ್ಕಾ ಮಾಸ್​ ಟೈಟಲ್​ಗಳಾಗಿದ್ದು, ಮೊದಲ ಟೈಟಲ್​ ನ್ಯೂಕ್ಲಿಯರ್ ಅಂತ್ಲೂ, ಎರಡನೇ ಟೈಟಲ್​ ಮಿಸೈಲ್​ ಅಂತ್ಲೂ ರಿಜಿಸ್ಟರ್ ಆಗಿದೆ.

ನಿಮಗೆಲ್ಲಾ ನೆನಪಿರಬಹುದು , ಟಾಲಿವುಡ್​ ಯಂಗ್​ ಟೈಗರ್​ ಹುಟ್ಟುಹಬ್ಬಕ್ಕೆ ಪ್ರಶಾಂತ್​ ನೀಲ್​ ಬಹಳ ವಿಶೇಷವಾಗಿ ಶುಭಾಶಯ ತಿಳಿಸಿದ್ರು. ನ್ಯೂಕ್ಲಿಯರ್ ಪ್ಲಾಂಟ್​​ ಪಕ್ಕ ಕುಳಿತರೆ ಆಗುವ ಅನುಭವ ಹೇಗಿರುತ್ತೆ ಅನ್ನೋದು ಗೊತ್ತಾಯಿತು. ಮುಂದಿನ ಸಲ ರೇಡಿಯೇಷನ್ ಸೂಟ್ ಧರಿಸಿಕೊಂಡು ನಿಮ್ಮ ಕ್ರೇಜಿ ಎನರ್ಜಿ ಹತ್ತಿರ ಸುಳಿಯುತ್ತೇನೆ. ಹ್ಯಾಪಿ ಬರ್ತ್ ಡೇ ಸೋದರ. ಶೀಘ್ರದಲ್ಲೇ ಭೇಟಿಯಾಗೋಣ ಅಂತ ಟ್ವೀಟ್​ ಮೂಲಕ ವಿಶ್ ಮಾಡಿದ್ರು ನೀಲ್.

ಇದೀಗ ಚಿತ್ರದ ಟೈಟಲ್​ ಕೇಳಿದ ಮೇಲೆ ತಮ್ಮ ಶುಭಾಶಯದ ಮೂಲಕವೇ ಎನ್​ಟಿಆರ್ ಸಿನಿಮಾ ಟೈಟಲ್​ ಬಗ್ಗೆ ಕ್ಲೂ ಕೊಟ್ಟಿದ್ರಾ ನೀಲ್​ ಅಂತ ಇದೀಗ ಸಿನಿಪ್ರಿಯರು ಲೆಕ್ಕಾಚಾರ ಹಾಕ್ತಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್​ ಬ್ಯಾನರ್​​ನಲ್ಲಿ ಪ್ರಶಾಂತ್​ ನೀಲ್​ ಮತ್ತು NRT​ ಜೋಡಿ ಸಿನಿಮಾ ಬರುತ್ತೆ ಅನ್ನೋ ಸುದ್ದಿ ಗೆ ಒಂದಲ್ಲ ಒಂದು ರೀತಿಯಲ್ಲಿ ಪುಷ್ಟಿ ಸಿಗ್ತಿದೆ. ಈ ಹಿಂದೆ ಕೂಡ ಹುಟ್ಟುಹಬ್ಬ ಆಚರಿಸಿಕೊಂಡ ನೀಲ್ ಗೆ ಮೈತ್ರೀ ಮೂವಿ ಮೇಕರ್ಸ್ ಸಂಸ್ಥೆ ಶುಭಾಶಯ ಕೋರಿತ್ತು. ರೇಡಿಯೇಷನ್​ ಸೂಟ್​ನಲ್ಲಿ ನಿಮ್ಮನ್ನ ಭೇಟಿಯಾಗೋದಕ್ಕೆ ಕಾಯುತ್ತಿದ್ದೇವೆ ಅಂತ ಟ್ವೀಟ್​ನಲ್ಲಿ ಸಂಸ್ಥೆ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರೋ ನೀಲ್, ಲಾಕ್​ಡೌನ್​ನಿಂದ ತಡವಾಗ್ತಿದೆ. ಆದಷ್ಟು ಬೇಗ ಸೂಟ್​ ಸಮೇತ ಸಿಗ್ತೀನಿ ಅಂತ ಕಮೆಂಟ್​ ಮಾಡಿದ್ರು.

ಈಗ ನೋಡಿದ್ರೆ ಸಿನಿಮಾದ ಟೈಟಲ್​ ಕೂಡ ರಿಜಿಸ್ಟರ್ ಆಗಿದ್ಯಂತೆ.ಆದ್ರೆ ಇತ್ತ ಪ್ರಶಾಂತ್​ ನೀಲ್​ ಕೆಜಿಎಫ್​ 2 ಮುಗಿಯೋವರೆಗೆ ಬೇರೆ ಸಿನಿಮಾ ಬಗ್ಗೆ ಮಾತನಾಡೋಲ್ಲ ಅಂತಿದ್ದಾರೆ. ಒಟ್ನಲ್ಲಿ ಈ ಸುದ್ದಿ ಸತ್ಯವೇ ಆದ್ರೆ , ಕನ್ನಡದ ನಿರ್ದೇಶಕನೊಬ್ಬ ಟಾಲಿವುಡ್​ನಲ್ಲಿ ಮಿಂಚು ಹರಿಸೋದ್ರಲ್ಲಿ ನೋ ಡೌಟ್.

Next Story

RELATED STORIES