ಜಾಗತಿಕವಾಗಿ ಕೋವಿಡ್​ 19 ಆರ್ಭಟ: 76 ಲಕ್ಷಕ್ಕೂ ಹೆಚ್ಚು ಕೇಸ್​ಗಳು, 4 ಲಕ್ಷಕ್ಕೂ ಹೆಚ್ಚು ಮಂದಿ ಸಾವು

ಫ್ರಾನ್ಸ್​‌: ಚೀನಾದ ವುಹಾನ್​ನಿಂದ ಆರಂಭಗೊಂಡ ಕೋವಿಡ್​ 19 ವೈರಸ್​​ ಸೋಂಕು ಸದ್ಯ ಇಡೀ ವಿಶ್ವದ್ಯಾಂತ ಸರವೇಗದಲ್ಲಿ ಪ್ರಸರಣಗೊಂಡಿದ್ದು, ಈ ಸೋಂಕಿಗೆ ಜಾಗತಿಕವಾಗಿ 4,28,362 ಜನರು ಬಲಿಯಾಗಿದ್ದಾರೆ.

ಶನಿವಾರ ಬೆಳಗ್ಗೆಯ ವರದಿಯಂತೆ ಜಾಗತಿಕವಾಗಿ 7,742,517 ಕೊರೊನಾ ವೈರಸ್​ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 4,25,282 ಜನರು ಸಾವನ್ನಪ್ಪಿದ್ದಾರೆ.

ಯುರೋಪ್‌ ದೇಶಗಳಲ್ಲಿ 23,63,538 ಕೋವಿಡ್ 19‌ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 1,86,843 ಮಂದಿ ಬಲಿಯಾಗಿದ್ದಾರೆ. ಲ್ಯಾಟಿನ್‌ ಅಮೆರಿಕ ಭಾಗದಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿದ್ದು15,69,938 ಪ್ರಕರಣಗಳು ಸಕ್ರಿಯವಾಗಿದ್ದು(Active Case) 76,343 ಜನರ ಸಾವನ್ನಪ್ಪಿದ್ದಾರೆ.

ವಿಶ್ವದ ದೊಡ್ಡಣ ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದಾಗಿ ಮರಣ ಮೃದಂಗ ಮುಂದುವರೆದಿದೆ. ಜಾಗತಿಕವಾಗಿ ಅಮೆರಿಕದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿವೆ. ಇಲ್ಲಿಯವರೆಗೂ ಅಲ್ಲಿ 1,14,643 ಜನರು ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ 41,828, ಬ್ರಿಟನ್‌ನಲ್ಲಿ41,481, ಇಟಲಿಯಲ್ಲಿ 34,223 ಹಾಗೂ ಫ್ರಾನ್ಸ್‌ನಲ್ಲಿ 29,374 ಜನರು ಮೃತಪಟ್ಟಿದ್ದಾರೆ.

ಪ್ರಪಂಚದಲ್ಲಿ 36 ಲಕ್ಷ ಕ್ರಿಯಾಶೀಲ ಪ್ರಕರಣಗಳಿದ್ದು, 40 ಲಕ್ಷ ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *