‘ಬಾಯಿ ಮಾತಲ್ಲಿ ಹೇಳೋದು ಕಾರ್ಯಗತವಾಗಲ್ಲ ಹೇಳಿಕೆ ಬೇರೆ ಅಧಿಕೃತ ಆದೇಶ ಬೇರೆ’

ಬೆಂಗಳೂರು: ಡಿ.ಕೆ ಶಿವಕುಮಾರ್ ಪದಗ್ರಹಣ ಬಗ್ಗೆ ಮುಖ್ಯಮಂತ್ರಿ ಬಿ.ಎಸ್​ ಯಡುಯೂರಪ್ಪ ಅವರ ಹೇಳಿಕೆ ಬಗ್ಗೆ ಸಂಸದ ಡಿ.ಕೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ನಾವು ಅನುಮತಿ ಕೋರಿ ಮನವಿ ಮಾಡಿದ್ದೇವೆ. ನಮ್ಮ ಅರ್ಜಿಗೆ ಅನುಮತಿ ಕೊಟ್ಟರೆ ಒಳ್ಳೆಯದು ಎಂದು ಅವರು ಗುರುವಾರ ಹೇಳಿದರು.

ಬೆಂಗಳೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಂವಿಧಾನ ಉಲ್ಲಂಘಿಸೋದು ಬೇಡ ಅಂತ 3ನೇ ಬಾರಿ ಅರ್ಜಿ ಹಾಕಿದ್ವಿ. ಅನುಮತಿ ಕೊಟ್ಟರೆ, ದಿನಾಂಕ ನಿಗದಿ ಮಾಡುತ್ತೇವೆ. ದಿನಾಂಕ ಫಿಕ್ಸ್ ಮಾಡಿ ಕಾರ್ಯಕ್ರಮವನ್ನು ನಡೆಸುತ್ತೇವೆ ಎಂದು ಅವರು ತಿಳಿಸಿದರು.

ಇನ್ನು ಬರೀ ಬಾಯಿ ಮಾತಿನಲ್ಲಿ ಹೇಳಿದ್ರೆ ಆಗುತ್ತಾ(?) ಬಾಯಿ ಮಾತಲ್ಲಿ ಹೇಳೋದು ಕಾರ್ಯಗತವಾಗಲ್ಲ, ಸಿಎಂ ಹೇಳಿಕೆ ಬೇರೆ, ಸರ್ಕಾರಿ ಅಧಿಕೃತ ಆದೇಶ ಬೇರೆ. ಸರ್ಕಾರದ ಸೂಚನೆ ಪಾಲನೆಗೆ ನಾವು ಸಿದ್ಧರಿದ್ದೇವೆ ಎಂದರು.

ಸದ್ಯ ಇವರೇನೋ ಕೊಟ್ರು ಅಂತ ಹೇಳ್ತೀರಾ. ಆದರೆ, ಗ್ರಾಮ ಪಂಚಾಯ್ತಿಗಳಲ್ಲೂ ಕಾರ್ಯಕ್ರಮ ನಡೆಸಬೇಕು. ಅಲ್ಲಿ ಅಧಿಕಾರಿಗಳು ದಾಖಲೆ ತೋರಿಸಿ ಅಂದ್ರೆ ಏನ್ಮಾಡೋದು. ಅದಕ್ಕೆ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿ. ಸಿಎಂ ಹೇಳಿರೋದು ಸಂತೋಷ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಶಿವಕುಮಾರ್ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *