‘ಹೊಸ ಅಧ್ಯಾಯ’ಕ್ಕೆ ಬರಗೂರು-ಹಂಸಲೇಖ ಮುನ್ನುಡಿ..!

ಡೆಡ್ಲಿ ಕೊರೊನಾ ವೈರಸ್​ ಬಗ್ಗೆ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಆಲ್ಬಮ್​ ಸಾಂಗ್ಸ್​​ ಮತ್ತು ಶಾರ್ಟ್​ ಫಿಲ್ಮ್ಸ್​​ ಬಂದಿವೆ. ಈ ಸಾಲಿಗೆ ಹೊಸದೊಂದು ಹಾಡು ಸೇರಿಕೊಂಡಿದೆ. ಕನ್ನಡ ಚಿತ್ರರಂಗದ ದಿಗ್ಗಜರು ಈ ಹಾಡು ಕಟ್ಟಲು ಕೈ ಜೋಡಿಸಿರೋದು ವಿಶೇಷ.

ಕೊರೊನಾ ಮಹಾಮಾರಿ ವಿರುದ್ಧ ಹೋರಾಟಕ್ಕೆ ಸ್ಪೂರ್ತಿ ತುಂಬುವಂತಹ ಹಾಡಿಗೆ ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಮತ್ತು ನಾದಬ್ರಹ್ಮ ಹಂಸಲೇಖ ಜೀವ ತುಂಬಿದ್ದಾರೆ. ಇಷ್ಟು ದಿನ ಬಂದ ಕೊರೊನಾ ಹಾಡುಗಳಿಗಿಂತ ಈ ಹಾಡು ಬಹಳ ವಿಶೇಷವಾಗಿ ಮತ್ತು ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ.

‘ಕೊರೊನಾ ಕೊರೊನಾ ನಿಶ್ಚಿತ ನಿನ್ನ ಪಲಾಯನ’ ಅಂತ ಶುರುವಾಗುವ ಈ ಹಾಡಿಗೆ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸಾಹಿತ್ಯ ಬರೆದಿದ್ದಾರೆ. ಹಾಡಿಗೆ ಟ್ಯೂನ್​ ಹಾಕುವುದರ ಜೊತೆಗೆ ದನಿಯಾಗಿದ್ದಾರೆ ಸಾಹಿತ್ಯ ಸರೋವರ, ಸಂಗೀತ ಸಾಗರ ಹಂಸಲೇಖ.

ಕಣ್ಣಿಗೆ ಕಾಣದ ಕೊರೊನಾ ವೈರಸ್ ಆರ್ಭಟ, ಅದರ ವಿರುದ್ಧ ನಾವೆಲ್ಲರೂ ನಡೆಸುತ್ತಿರುವ ಹೋರಾಟ ಮತ್ತು ಈ ಹೋರಾಟದಲ್ಲಿ ಗೆಲುವು ಸಾಧಿಸುತ್ತೇವೆ ಅನ್ನುವ ಭರವಸೆ ತುಂಬುವ ಸಾಲುಗಳನ್ನ ಬರಗೂರು ರಾಮಚಂದ್ರಪ್ಪ ಬರೆದಿದ್ದಾರೆ.

ಕೊರೊನಾ ಹಾವಳಿ, ಲಾಕ್​ಡೌನ್​, ಜನರ ಸಂಕಷ್ಟವನ್ನ ಬಿಂಬಿಸುವ ದೃಶ್ಯಗಳನ್ನ ಸೇರಿಸಿ, ಹಾಡನ್ನು ಕಟ್ಟಿ ಕೊಡಲಾಗಿದೆ. ವಿಶ್ವಾಸ್ ಮಾದಿಶೆಟ್ಟಿ ಸಾರಥ್ಯದಲ್ಲಿ ಹಾಡು ಮೂಡಿ ಬಂದಿದ್ದು, ಸತೀಶ್​ ರಾಜೇಂದ್ರನ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ಡೆಡ್ಲಿ ವೈರಸ್​ನಿಂದ ಜರ್ಜರಿತರಾಗಿರುವ ಜನರಲ್ಲಿ ಆತ್ವ ವಿಶ್ವಾಸ ಮತ್ತು ಎಲ್ಲವನ್ನೂ ಮೆಟ್ಟಿ ಬದುಕು ಕಟ್ಟಿಕೊಳ್ಳುವ ಸ್ಪೂರ್ತಿಯನ್ನ ಈ ಹಾಡು ತುಂಬುವಂತಿದೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ‘ಕೊರೊನಾ ಕೊರೊನಾ ನಿಶ್ಚಿತ ನಿನ್ನ ಪಲಾಯನ’ ಹಾಡು ಸದ್ದು ಮಾಡುತ್ತಿದೆ.

Recommended For You

About the Author: user

Leave a Reply

Your email address will not be published. Required fields are marked *