18 ವರ್ಷಗಳ ಹಿಂದೆ ‘ಮೇಕಪ್’​ ಚಿತ್ರದಿಂದ 75 ಲಕ್ಷ ನಷ್ಟ..!

ಬಣ್ಣದ ಲೋಕದಲ್ಲಿ ಹೀರೋ ಆಗಿದ್ದವರು ಜೀರೋ ಆಗೋದಕ್ಕೆ, ಜೀರೋ ಆಗಿದ್ದವರು ಹೀರೋ ಆಗೋದಕ್ಕೆ ಬಹಳ ಸಮಯ ಬೇಕಾಗೋದಿಲ್ಲ. ಅದೃಷ್ಟ ಚೆನ್ನಾಗಿದ್ರೆ, ರಾತ್ರೋರಾತ್ರಿ ಕೋಟಿ ಕೋಟಿ ದುಡ್ಡು ಮಾಡ್ಬೋದು. ಅದೃಷ್ಟ ಕೈ ಕೊಟ್ರೆ, ಕೋಟಿ ಕೋಟಿ ಕಳೆದುಕೊಳ್ಳಬಹುದು. ಇಂಥದ್ದೇ ಕಥೆಯನ್ನ ನವರಸ ನಾಯಕ ಜಗ್ಗೇಶ್​​ ಬಿಚ್ಚಿಟ್ಟಿದ್ಧಾರೆ.

ಮೇಕಪ್​. 2002ರಲ್ಲಿ ತೆರೆಕಂಡ ಕಾಮಿಡಿ ಎಂಟ್ರಟ್ರೈನರ್​ ಸಿನಿಮಾ. ಪರಿಮಳ ಜಗ್ಗೇಶ್​​ ಈ ಚಿತ್ರಕ್ಕೆ ಬಂಡವಾಳ ಹಾಕಿದ್ರು. ಸಿಂಗೀತಂ ಶ್ರೀನಿವಾಸ್​ ನಿರ್ದೇಶನದ ಈ ಸಿನಿಮಾದಲ್ಲಿ ಸ್ತ್ರೀವೇಷಧಾರಿಯಾಗಿ ಜಗ್ಗೇಶ್​ ಮಿಂಚಿದ್ರು. ಎರಡು ಶೇಡ್​ಗಳಿದ್ದ ಪಾತ್ರದಲ್ಲಿ ದೊಡ್ಡಮ್ಮ ಅನ್ನೋ ಪಾತ್ರಕ್ಕೆ ವಿಭಿನ್ನವಾಗಿ ಮೇಕಪ್​ನಲ್ಲಿ ಜಗ್ಗೇಶ್​ ಬಣ್ಣ ಹಚ್ಚಿ ಪ್ರೇಕ್ಷಕರನ್ನ ರಂಜಿಸಿದರು. ಆದರೆ, ಆ ಸಿನಿಮಾ ಜಗ್ಗೇಶ್​ ಅವರಿಗೆ ಭಾರೀ ನಷ್ಟ ತಂದಿತ್ತು.

ಸಿನಿಮಾ ಚೆನ್ನಾಗಿದ್ರು, ಅವತ್ತಿನ ಕಾಲಕ್ಕೆ ಒಂದೂವರೆ ಕೋಟಿ ಬಂಡವಾಳ ಹಾಕಿ ಜಗ್ಗೇಶ್​ ಕೈ ಸುಟ್ಟುಕೊಂಡಿದರು. ಲೈಲಾ ಪಟೇಲ್​ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ರೆ, ಜಗ್ಗೇಶ್​ ಸಹೋದರ ಕೋಮಲ್​ ಮತ್ತು ಪುತ್ರ ಯತಿರಾಜ್​​​​ ಕೂಡ ಬಣ್ಣ ಹಚ್ಚಿದರು. ಆ ಚಿತ್ರದಿಂದ ಜಗ್ಗೇಶ್​ 75ಲಕ್ಷ ಕಳೆದುಕೊಂಡ ವಿಚಾರವನ್ನ ಇದೀಗ ಜಗ್ಗೇಶ್​ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ಧಾರೆ.

ಸಿನಿಮಾ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ನಿರ್ಮಾಪಕರಾಗುವ ಕನಸಿರುತ್ತದೆ. ಬೇರೆ ನಿರ್ಮಾಪಕರು ಹಣ ಮಾಡುವಾಗ ನಾವು ಯಾಕೆ ನಿರ್ಮಾಪಕರಾಗಬಾರದು ಅನ್ನೋ ಆಸೆ ಬರೋದು ಸಹಜ. ಜಗ್ಗೇಶ್​ ಅವರು ಕೂಡ ಅಂದು ಕನ್ನಡ ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಸಿನಿಮಾ ನೀಡಬೇಕು ಅನ್ನೋ ಮನಸ್ಸು ಮಾಡಿದರು. ಮೇಕಪ್​ ಕಥೆಯನ್ನ ನಂಬಿ ಭಾರಿ ಮೊತ್ತದ ಬಂಡವಾಳ ಹಾಕಿದರು ಆದರೆ ಅವರ ಆಸೆ ಫಲಿಸಲಿಲ್ಲ.

ಅಂದು 75 ಲಕ್ಷ ಸಾಲಕ್ಕಾಗಿ ಜಗ್ಗೇಶ್​​ ಮನೆಯನ್ನ ಮಾರಿದ್ದರು. ಇಂದು ಅದು 35 ಕೋಟಿ ಆಸ್ತಿ. ಇದು ಅಂದಿನ ಕತೆ ವ್ಯಥೆ ಅಂತ ಜಗ್ಗೇಶ್​ ಬರೆದುಕೊಂಡಿದ್ದಾರೆ. ಮೇಕಪ್​ ಸಿನಿಮಾ ಸೋಲಿ ನಂತ್ರ ಜಗ್ಗೇಶ್​ ಕಥೆ ಮುಗಿಯಿತು ಅಂತ್ಲೇ ಕೆಲವರು ಅಂದುಕೊಂಡಿದರು ಆದರೆ ಜಗ್ಗೇಶ್​ ಕಾಸಿದ್ದವನೇ ಬಾಸು ಮತ್ತು ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಸಿನಿಮಾಗಳ ಮೂಲಕ ಮತ್ತೆ ಫೀನಿಕ್ಸ್​ ರೀತಿ ಎದ್ದು ಬಂದಿದರು.

Recommended For You

About the Author: user

Leave a Reply

Your email address will not be published. Required fields are marked *