‘ಧಗಧಗನೂ ಇಲ್ಲ ಬಿಲಬಿಲನೂ ಇಲ್ಲ ಚಕಚಕನೂ ಇಲ್ಲ’ – ಸಂಸದ ಜಿ.ಎಂ ಸಿದ್ದೇಶ್ವರ್​

ದಾವಣಗೆರೆ: ಬಿ.ಎಸ್​ ಯಡಿಯೂರಪ್ಪ ಅವರು ಇನ್ನೂ ಮೂರು ವರ್ಷ ಸಿಎಂ ಆಗಿರ್ತಾರೆ ಎಂದು ಸಂಸದ ಜಿ.ಎಂ ಸಿದ್ದೇಶರ್ ಅವರು ಸ್ಪಷ್ಟನೆ ನೀಡಿದರು.

ದಾವಣಗೆರೆಯ ಹೊನ್ನಾಳಿಯಲ್ಲಿಂದು ಉಮೇಶ್ ಕತ್ತಿ ಅವರ ಮನೆಯಲ್ಲಿ ಸಭೆ ನಡೆದ ವಿಚಾರಕ್ಕೆ ಸಂಬಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಉಮೇಶ್​ ಕತ್ತಿ ಮನೆಯಲ್ಲಿ ಮೀಟಿಂಗ್ ನಡೆದಿದ್ದು ನಿಜ. ಆದರೆ, ಸಿಎಂ ವಿರುದ್ಧದ ಚಟುವಟಿಕೆಗೆ ಅಲ್ಲ ಎಂದು ಅವರು ತಿಳಿಸಿದರು.

ಇನ್ನು ಇದರಲ್ಲಿ ಧಗ ಧಗನೂ ಇಲ್ಲ, ಬಿಲ ಬಿಲನೂ ಇಲ್ಲ, ಚಕಚಕನೂ ಇಲ್ಲ. ಹೋಳಗಿ, ಶೀಕರಣಿ ಊಟಕ್ಕೆ ಮಾತ್ರ ಎಲ್ಲರೂ ಸೇರಿದ್ದು. ನನಗೂ ಮೀಟಿಂಗ್​ ಕರೆದಿದ್ದರು. ಆದರೆ, ನನಗೆ ಮತ್ತೊಂದು ಕಾರ್ಯಕ್ರಮದ ಹಿನ್ನೆಲೆ ಮೀಟಿಂಗ್​ ಹೋಗಲಿಲ್ಲ ಎಂದು ಅವರು ನುಡಿದರು.

ಸದ್ಯ ಯಡಿಯೂರಪ್ಪ ಯಾರಿಗೇ ಮಂತ್ರಿ ಸ್ಥಾನ ನೀಡಿದ್ರೂ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಬಿಎಸ್​ವೈ ಅವರನ್ನು ಅಧಿಕಾರದಿಂದ ಬದಲಾಯಿಸುವ ಮಾತುಕತೆ ನಡೆದಿಲ್ಲ ಎಂದರು.

ಸದ್ಯ ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಮುಕ್ತಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎಲ್ಲರಿಗೂ ಮಂತ್ರಿ ಆಗುವ ಆಸೆ ಇರುತ್ತೆ ಅದರಲ್ಲಿ ತಪ್ಪೇನಿಲ್ಲ, ಯಡಿಯೂರಪ್ಪ ಇನ್ನೂ ಮೂರು ವರ್ಷ ಸಿಎಂ ಆಗಿರ್ತಾರೆ ಎಂದು ಜಿ.ಎಂ ಸಿದ್ದೇಶರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *