ಡಿ ಬಾಸ್​​ ಸಿನಿಮಾ ನಿರ್ಮಾಣ ಕನಸು ಬಿಚ್ಚಿಟ್ಟ ನಟಿ ರಚಿತಾ ರಾಮ್..!

ನಟಿಯರಿಗೆ ಆ ಹೀರೋ ಜೊತೆ ನಟಿಸ್ಬೇಕು, ಅಂತಾದೊಂದು ಪಾತ್ರ ಮಾಡಬೇಕು. ಈ ನಿರ್ದೇಶಕರ ಸಿನಿಮಾದಲ್ಲಿ ಬಣ್ಣ ಹಚ್ಚಬೇಕು(?) ಹೀಗೆ ನಾನಾ ಕನಸುಗಳು ಇರ್ತಾವೆ. ಸ್ಯಾಂಡಲ್​ವುಡ್​ ಡಿಂಪಲ್​ ಕ್ವೀನ್​ ರಚಿತಾರಾಮ್​ಗೂ ಒಂದು ಕನಸಿದೆ.

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಡಿಂಪಲ್​ ಕ್ವೀನ್​ ರಚಿತಾ ರಾಮ್. ಬಹುತೇಕ ಹಿಟ್​ ಸಿನಿಮಾಗಳನ್ನೇ ಕೊಟ್ಟಿರೋ ಅಪ್ಪಟ ಕನ್ನಡದ ನಟಿ ರಚ್ಚು. ಕನ್ನಡದ ಬಹುತೇಕ ಎಲ್ಲಾ ಸ್ಟಾರ್​ ನಟರ ಸಿನಿಮಾಗಳಲ್ಲಿ ನಟಿಸಿ, ಸೈ ಅನ್ನಿಸಿಕೊಂಡಿರೋ ಚೆಲುವೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನ ಒಪ್ಪಿಕೊಂಡು ಸದಾ ಬ್ಯುಸಿ ಇರುವ ರಚಿತಾ ರಾಮ್​​, ಹೊಸ ಪ್ರಯತ್ನಕ್ಕೆ ಕೈ ಹಾಕುವ ಸುಳಿವು ಕೊಟ್ಟಿದ್ದಾರೆ.

ಸ್ಟಾರ್​ ನಟರಷ್ಟೆ ಅಲ್ಲ, ನಟಿಯರು ಕೂಡ ಸಿನಿಮಾ ನಿರ್ಮಾಣ ಮಾಡುವ ಕನಸು ಕಾಣೋಡು ಮಾಮೂಲು. ನಟನೆ ಬಿಟ್ರೆ, ನಿರ್ದೇಶನಕ್ಕಿಂತ ಸಿನಿಮಾ ನಿರ್ಮಾಣಕ್ಕೆ ನಟಿಯರು ಹೆಚ್ಚು ಮನಸು ಮಾಡ್ತಾರೆ. ಡಿಂಪಲ್​ ಕ್ವೀನ್​ ರಚಿತಾ ರಾಮ್​ ಕೂಡ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟಾಕ್ಕುವ ಸುಳಿವು ಕೊಟ್ಟಿದ್ದಾರೆ. ತಮ್ಮ ಬ್ಯಾನರ್​​ನ ಮೊದಲನೇ ಸಿನಿಮಾದಲ್ಲಿ ದರ್ಶನ್​ ನಟಿಸ್ಬೇಕು ಅನ್ನೋದು ಅವರ ಮಹದಾಸೆ.

7 ವರ್ಷಗಳ ಹಿಂದೆ ತೂಗುದೀಪ ಪ್ರೊಡಕ್ಷನ್ಸ್​ ಬ್ಯಾನರ್​​ನಲ್ಲಿ ನಿರ್ಮಾಣವಾದ ಬುಲ್​ಬುಲ್​ ಸಿನಿಮಾ ಮೂಲಕ ರಚಿತಾರಾಮ್​ ಚಿತ್ರರಂಗಕ್ಕೆ ಎಂಟ್ರಿಯಾದ್ರು. ಅಲ್ಲಿಂದ ಮುಂದೆ ಅವರು ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮತ್ತು ದಿನಕರ್​ ತೂಗುದೀಪ ಹೊಸ ನಟಿಗೆ ಅವಕಾಶ ಕೊಟ್ಟಿದ್ರು. ಆ ಅವಕಾಶವನ್ನ ಬಳಸಿಕೊಂಡು ರಚ್ಚು ಗೆದ್ರು. ಮುಂದೆ ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗದ ಬಹುಬೇಡಿಕೆಯ ನಟಿಯಾದ್ರು.

ರಚಿತಾ ರಾಮ್​ಗೆ ನಿರ್ಮಾಪಕಿಯಾಗ್ಬೇಕು ಅನ್ನೋದು ಇಂದು ನೆನ್ನೆಯ ಆಸೆ ಅಲ್ಲ. ಈಗಾಗಲೇ ರಿಷಭಪ್ರಿಯ ಅನ್ನೋ ಒಂದು ಶಾರ್ಟ್​ ಫಿಲ್ಮ್​ ಕೂಡ ನಿರ್ಮಾಣ ಮಾಡಿದ್ದಾರೆ. ಪೂರ್ಣಪ್ರಮಾಣದ ದೊಡ್ಡ ಸಿನಿಮಾ ಮಾಡಬೇಕು ಅನ್ನುವ ಇರಾದೆ ಅವರಿಗಿದೆ.

ಸಿನಿಮಾ ನಿರ್ಮಾಣ ಸಂಸ್ಥೆ ಶುರುವಾದ್ರೆ, ತಮ್ಮ ಬ್ಯಾನರ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​ಗೆ ಮೊದಲ ಸಿನಿಮಾ ಮಾಡ್ಬೇಕು ಅನ್ನೋದು ರಚಿತಾ ರಾಮ್​ ಕನಸು. ಆ ಮೂಲಕ ಚಿತ್ರರಂಗದಲ್ಲಿ ತಮಗೆ ಮೊದಲ ಅವಕಾಶ ಕೊಟ್ಟ ದರ್ಶನ್​​ ಅವರ ಋಣ ಸಂದಾಯ ಮಾಡಬೇಕು ಅನ್ನೋ ಆಸೆಯನ್ನ ಡಿಂಪಲ್​ ಕ್ವೀನ್​ ವ್ಯಕ್ತಪಡಿಸಿದ್ದಾರೆ.

ಇನ್ನು ಸಿನಿಮಾ ನಿರ್ಮಾಣ ಸಂಸ್ಥೆ ಸ್ಥಾಪನೆ, ದರ್ಶನ್​​ ಚಿತ್ರಕ್ಕೆ ಬಂಡವಾಳ ಹಾಕಬೇಕು ಅನ್ನುವ ಕನಸನ್ನ ಪಕ್ಕಕ್ಕಿದ್ರೆ, ಸದ್ಯ ಸ್ಯಾಂಡಲ್​ವುಡ್​ ಬ್ಯುಸಿಯೆಸ್ಟ್​ ನಟಿಯಾಗಿ ರಚಿತಾ ರಾಮ್​ ಕಾಣ್ತಿದ್ದಾರೆ. ಅರ್ಧ ಡಜನ್​ಗೂ ಹೆಚ್ಚು ಸಿನಿಮಾಗಳು ಅವರ ಕೈಯಲ್ಲಿದೆ. ಅದರಲ್ಲಿ ಒಂದು ತೆಲುಗು ಸಿನಿಮಾ ಕೂಡ ಇದೆ ಅನ್ನೋದು ವಿಶೇಷ.. ಬೆಳ್ಳಿತೆರೆ ಅಷ್ಟೆ ಅಲ್ಲದೇ ಕಿರುತೆರೆಯಲ್ಲೂ ರಚ್ಚು ಕಮಾಲ್ ಮಾಡ್ತಿದ್ಧಾರೆ.

ಏಕ್​ ಲವ್​ ಯಾ, 100, ಡಾಲಿ, ಏಪ್ರಿಲ್, ವೀರಂ, ಸೀರೆ, ರವಿಬೋಪಣ್ಣ, ಸಂಜಯ್​ ಅಲಿಯಾಸ್​ ಸಂಜು, ಲಿಲ್ಲಿ ಹೀಗೆ ರಚಿತಾ ರಾಮ್​ ಅಭಿನಯಿಸಲಿರೋ ಸಿನಿಮಾಗಳ ಪಟ್ಟಿ ದೊಡ್ಡದಿದೆ. ರಚಿತಾ ರಾಮ್​​ಗೆ ಮತ್ತಷ್ಟು ಕನಸು ಸಿಗಲಿ, ಅವರ ಕನಸು ಆದಷ್ಟು ಬೇಗ ನನಸಾಗಲಿ ಅಂತ ಹಾರೈಸೋಣ.

Recommended For You

About the Author: user

Leave a Reply

Your email address will not be published. Required fields are marked *