‘ಕೋವಿಡ್​-19 ಸಮರ್ಥವಾಗಿ ನಿರ್ವಹಿಸಿದ ಕರ್ನಾಟಕಕ್ಕೆ ಧನ್ಯವಾದ’ – ಪಿಎಂ ಮೋದಿ

ನವದೆಹಲಿ: ಪ್ರಪಂಚ ಎರಡು ವಿಶ್ವಯುದ್ದಗಳ ಬಳಿಕ ಮತ್ತೊಂದು ಬಹುದೊಡ್ಡ ಯುದ್ದ ಎದುರಿಸತ್ತಿದೆ, ಈ ಸಂದರ್ಭದಲ್ಲಿ ಕೊರೊನಾವನ್ನು ಸಮರ್ಥವಾಗಿ ನಿರ್ವಹಿಸಿದ ಕರ್ನಾಟಕಕ್ಕೆ ಧನ್ಯವಾದ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 25ನೇ ಸಂಸ್ಥಾಪನಾ ದಿನಾಚರಣೆ ಮತ್ತು ರಜತ ಮಹೋತ್ಸವ ಅಂಗವಾಗಿ ವಿಡಿಯೋ ಕಾನ್ಪರೇನ್ಸ್ ಮೂಲಕ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾಕ್ಕೆ ಮೋದಿ ಶ್ಲಾಘಿಸಿದ್ದರು. ಡಾಕ್ಟರ್​ಗಳು, ಮೆಡಿಕಲ್​ನಲ್ಲಿ ಕೆಲಸ ನಿರ್ವಹಿಸುತ್ತಿರುವವರು ಸೈನಿಕರಿದ್ದಂತೆ, ಕೊರೊನಾ ಕಣ್ಣಿಗೆ ಕಾಣದ ಶತ್ರು ಆದರೆ ನಮ್ಮ ಕರೋನಾ ವಾರಿಯರ್ಸ್ ಅಜೇಯರು ಎಂದು ಅವರು ತಿಳಿಸಿದರು.

ಇನ್ನು ನಾವು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಯೋಚಿಸಬೇಕಿದೆ. ಇಡೀ ಪ್ರಪಂಚ ಈ ಸಂದರ್ಭದಲ್ಲಿ ಮಾನವಿಯ ನೆಲೆಯಲ್ಲಿ ಅಭಿವೃದ್ಧಿ ಬಗ್ಗೆ ಯೋಚಿಸಬೇಕಿದೆ. ಸದ್ಯ ಪ್ರಿವೆಂಟಿವ್ ಹೆಲ್ತ್ ಕೇರ್-ಯೋಗ ಆಯುರ್ವೆದ್ ಹಾಗೂ ಫಿಟನೆಸ್​ಗೆ ಆದ್ಯತೆ ನೀಡಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ, ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ, ಸಂಸದ ತೇಜಸ್ವಿ ಸೂರ್ಯ ಹಾಗೂ ವಿಶ್ವ ವಿದ್ಯಾಲಯದ ಕುಲಪತಿಗಳು , ಉಪನ್ಯಾಸಕರು, ಅಧಿಕಾರಿಗಳು ಭಾಗವಹಿಸಿದ್ದರು.

ತೆರೆ ಮರೆಯಲ್ಲಿ ಬಿಎಸ್​ವೈ ನಾಯಕತ್ವ ಬದಲಾವಣೆ ಕೂಗು ಎಬ್ಬಿಸಿದ್ದವರಿಗೆ ಮುಖಭಂಗವಾಗಿದ್ದು, ಮೊನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಬಿಎಸ್​ವೈ ಕಾರ್ಯಕ್ಕೆ ಭೇಷ್ ಎಂದಿದ್ದರು. ಈಗ ಮೋದಿಯವರಿಂದಲೂ ಬಿಎಸ್​ವೈ ಸರ್ಕಾರದ ಕಾರ್ಯವೈಖರಿಗೆ ಶ್ಲಾಘನೆ ವ್ಯಕ್ತವಾಗಿದೆ.

Recommended For You

About the Author: user

Leave a Reply

Your email address will not be published. Required fields are marked *