ರಾಹುಲ್​ ದ್ರಾವಿಡ್​ ‘ಗ್ರೇಟ್​​ ಕ್ರಿಕೆಟಿಂಗ್​ ಮೈಂಡ್​’​ – ರಶೀದ್ ಲತೀಫ್ ಪ್ರಶಂಸೆ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಅವರ ಗ್ರೇಟ್​​ ಕ್ರಿಕೆಟಿಂಗ್​ ಮೈಂಡ್​ಗೆ ಸಾಟಿಯಿಲ್ಲ, ಅವರು ಕ್ರಿಕೆಟ್​ ಆಡಲೆಂದೇ ಜನಿಸಿದವರು ಎಂದು ರಶೀದ್ ಲತೀಫ್ ಅವರು ಹೇಳಿದ್ದಾರೆ. 1996ರಲ್ಲಿ ಮುಷ್ತಾಕ್ ಅಹ್ಮದ್ ಅವರ ಗಟ್ಟಿಯಾದ ಮನವಿಗೆ ಅಂಪೈರ್​ ತಪ್ಪು ತೀರ್ಪಿ ನೀಡಿ ರಾಹುಲ್​ ದ್ರಾವಿಡ್ ಅವರನ್ನು​ ಮೈದಾನದಿಂದ ಹೊರಗೆ ಕಳುಹಿಸಿದರು ಎಂದು ಅವರು ಹಳೆಯ ಘಟನೆಯನ್ನು ನೆನಪಿಸಿಕೊಂಡರು.

ಕರಾಚಿ ಮೂಲದ 51 ವರ್ಷ ಹರೆಯದ ಪಾಕಿಸ್ತಾನ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ಅವರು ‘ಕ್ಯಾಟ್ ಬಿಹೈಂಡ್’ (Caught Behind) ಎಂಬ ಯೂಟ್ಯೂಬ್ ಶೋವೊಂದರಲ್ಲಿ ಮಾತನಾಡಿದ್ದು, ರಾಹುಲ್​ ದ್ರಾವಿಡ್ ವಿರುದ್ಧ ಅನೇಕ ಕ್ಲಾಸಿಕ್ ಪಂದ್ಯಗಳನ್ನು ಆಡಿದ್ದು, ಅವರು ಅಪ್ರತಿಮ ಶ್ರೇಷ್ಠ ಕ್ರಿಕೆಟಿಂಗ್ ಮನಸ್ಸನ್ನು ಹೊಂದಿದ್ದಾರೆಂದು ಎಂದು ರಾಹುಲ್​ ದ್ರಾವಿಡ್​ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಒಂದು ಸಲ ಯೂನಿಸ್​ ಖಾನ್ ಅವರು ದ್ರಾವಿಡ್​​ ಬಗ್ಗೆ ನನ್ನ ಜೊತೆ ಮಾತನಾಡಿದ್ದರು. ರಾಹುಲ್​ ದ್ರಾವಿಡ್ ಅವರು​​ ಅದ್ಭುತ ವ್ಯಕ್ತಿ. ಅವರು ತಮ್ಮ ವೃತ್ತಿ ಜೀವನದಲ್ಲಿ ಹೇಗೆ ಮಾರ್ಗದರ್ಶನ ನೀಡಿದರು ಜೊತೆಗೆ ಆಟದಲ್ಲಿ ಬದಲಾವಣೆಯನ್ನು ತಂದರು. ಅವರು ಉತ್ತಮ ಕ್ರಿಕೆಟಿಂಗ್ ಮನಸ್ಸನ್ನು ಹೊಂದಿದ್ದು, ಅವರು ಕ್ರಿಕೆಟ್ ಆಡಲು ಜನಿಸಿದವರು ಎಂದು ಯೂನಿಸ್ ಖಾನ್ ತಮ್ಮ ಅಭಿಪ್ರಾಯವನ್ನು ರಶೀದ್​ ಲತೀಪ್​ ಜೊತೆ ಹೇಳಿಕೊಂಡಿದ್ದಾರಂತೆ.

ಸದ್ಯ ರಾಹುಲ್ ದ್ರಾವಿಡ್​​ ಅವರು​ ಭಾರತ ಎ ಮತ್ತು ಅಂಡರ್-19 ತಂಡವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಕ್ರಿಕೆಟ್‌ಗಾಗಿ ಜನಿಸಿದವರು ಎಂದು ತೋರುತ್ತದೆ ಎಂದರು.

ಶಾರ್ಜಾದಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುತ್ತಿತ್ತು ಆ ಪಂದ್ಯದಲ್ಲಿ ರಾಹುಲ್​ ದ್ರಾವಿಡ್​ ಅವರು ಕ್ರೀಸ್​​ನಲ್ಲಿ ಇದ್ದರು. ಮುಷ್ತಾಕ್​​ ಆಹ್ಮದ್​ ಅವರು ಬೌಲಿಂಗ್​ ಮಾಡುತ್ತಿದ್ದರು ದುರದೃಷ್ಟವಶಾತ್, ಅವರು ಎಸೆದ ಒಂದು ಎಸೆತ ರಾಹುಲ್​ ದ್ರಾವಿಡ್​ ಅವರನ್ನು ದಾಟಿ ನನ್ನ ಕೈಗೆ ಬಂದು ಸೇರಿತು. ಆಗ ಮುಷ್ತಾಕ್​ ಅವರು ಜೋರಾಗಿ ಅಂಪೈರ್​ಗೆ ಮನವಿ ಮಾಡಿದರು. ಬಳಿಕ ನಾವು ಅವರೊಂದಿಗೆ ಸೇರಿ ಮನವಿ ಮಾಡಿದ್ದೆವು. ಅಂಪೈರ್​ ಅದನ್ನು ಔಟ್​​ ಎಂದು ತೀರ್ಪು ನೀಡಿದರು.​ ದ್ರಾವಿಡ್​ ಅವರು ಮೈದಾನದಿಂದ ಹೊರ ನಡೆದರು. ಪಂದ್ಯ ಮುಗಿದ ಬಳಿಕ ರಾಹುಲ್​ ದ್ರಾವಿಡ್​ ಅವರು ನನ್ನನ್ನು ಕೇಳಿದರು ನಾನು ಔಟ್​​ ಆಗಿದ್ದಾನಾ(?) ಎಂದು ನಾನು ಹೇಳಿದೆ ಇಲ್ಲ ಸಹೋದರ, ಮುಷ್ತಾಕ್ ಟ್ಯಾಂಗ್ ಕರ್ತಾ ಹೈ ಬೋಹೊಟ್ (ಹಾಗೇ ಮನವಿ ಮಾಡುವುದು ಮುಷ್ತಾಕ್​ ಅವರ ಅಭ್ಯಾಸ) ಎಂದು ಪಾಕಿಸ್ತಾನ ಮಾಜಿ ವಿಕೆಟ್​ ಕೀಪರ್​ ರಶೀದ್ ಲತೀಫ್ ಅವರು ಹಳೆಯ ಘಟನೆಯನ್ನು ಮೆಲುಕ ಹಾಕಿದ್ದಾರೆ.

2011/12ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ರಾಹುಲ್ ದ್ರಾವಿಡ್ ಅವರು ರಾಷ್ಟ್ರೀಯ ತಂಡದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಈ ಸರಣಿಯನ್ನು ಭಾರತ 4-0 ಅಂತರದಿಂದ ಸೋತಿತ್ತು. ಅದ್ಯಾಗೂ ಅಂದಿನಿಂದ, 47 ವರ್ಷ ಹರೆಯದ ವಯಸ್ಸಿನ ದ್ರಾವಿಡ್​​ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಎನ್​ಸಿಎ ಮುಖ್ಯಸ್ಥ ಸೇರಿದಂತೆ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎನ್​​ಸಿಎಗೆ ಆಯ್ಕೆಗೂ ಮುಂಚೆ, ದ್ರಾವಿಡ್​​ ಅವರು ಅಂಡರ್-19 ತಂಡದ ಮುಖ್ಯ ತರಬೇತುದಾರರಾಗಿ ತಮ್ಮ ಸಮಯವನ್ನು ಕಳೆದರು. ಆ ವೇಳೆ 2018ರ ಅಂಡರ್-19 ವಿಶ್ವಕಪ್ ಅನ್ನು ಗೆದ್ದಿತು.

Recommended For You

About the Author: user

Leave a Reply

Your email address will not be published. Required fields are marked *