ಕಾಂಗ್ರೆಸ್ ಟೀಂ ಲೆಕ್ಕದಲ್ಲಿ ಮುಂದಿನ ಸಿಎಂ ಜಗದೀಶ್ ಶೆಟ್ಟರ್ – ಸತೀಶ್​ ಜಾರಕಿಹೊಳಿ

ಬೆಳಗಾವಿ: ಬಿಜೆಪಿ ಸರ್ಕಾರ ಬರೀ ಘೋಷಣೆ ಮಾಡುತ್ತವೆ, ಸಂಕಷ್ಟ ಸಂದರ್ಭದಲ್ಲಿ ಜನರಿಗೆ ದುಡ್ಡು ಕೊಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗೆ ಹಣ ತಲುಪಿಸುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಅವರು ಶನಿವಾರ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿ ಜನರ ಪರವಾದ ಸರ್ಕಾರ ಅಲ್ಲ, ತಮ್ಮ ಹಿತಾಸಕ್ತಿ, ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದೆ. ಸಮಸ್ಯೆಗೆ ಹೆಚ್ಚು ಒತ್ತು ನೀಡುತ್ತಿಲ್ಲ. ಆತಂಕರಿಕ ಕಚ್ಚಾಟದಲ್ಲಿ ಮಗ್ನವಾಗಿದ್ದಾರೆ ಎಂದು ರಾಜ್ಯ ಸರ್ಕಾರದ ಬಗ್ಗೆ ಟೀಕಿಸಿದರು.

ಬಿಜೆಪಿ ಶಾಸಕರ ಬಂಡಾಯ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಬಂಡಾಯ ಅವರ ಪಕ್ಷದ ಆತಂರಿಕ ವಿಚಾರ ಇದರಲ್ಲಿ ಕಾಂಗ್ರೆಸ್ ಏನು ಹೇಳುವುದಿಲ್ಲ. ಬಿಜೆಪಿ ಹೋದ ನಮ್ಮವರೇ 1, 2, 3 ಟಾಪನಲ್ಲಿ ಇದ್ದಾರೆ. ಇದು ಮೂಲ ಬಿಜೆಪಿ ಶಾಸಕರಲ್ಲಿ ಸಮಸ್ಯೆ ಆರಂಭವಾಗಿದೆ ಎಂದರು.

ಇನ್ನು ಇದು ಯಾವಾಗ ಸ್ಫೋಟ ಆಗೋತ್ತೋ ಗೊತ್ತಿಲ್ಲ. ಬಿಜೆಪಿಯಲ್ಲಿ ಸಿಎಂ ಬದಲಾವಣೆ ರಾಜಕೀಯ ನಡೆಯುತ್ತಿದೆ ಇದನ್ನು ಬಿಜೆಪಿ ಹೈಕಮಾಂಡ್,​ ಯಡಿಯೂರಪ್ಪ ಮೇಲೆ ಬಿಡ್ತಾರಾ ನೋಡಬೇಕು. ಬಿಜೆಪಿ ಪಾಳ್ಯದಲ್ಲಿ ಪ್ರಹ್ಲಾದ ಜೋಶಿ, ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡುವ ಚರ್ಚೆ ನಡೆದಿದೆ. ಬಿಜೆಪಿಗೆ ಹೋದ ನಮ್ಮ ಕಾಂಗ್ರೆಸ್ ಟೀಂ ಜಗದೀಶ್ ಶೆಟ್ಟರ್ ಪರವಾಗಿದೆ ಎಂದು ಪರೋಕ್ಷವಾಗಿ ಅನರ್ಹ ಶಾಸಕರು ಶೆಟ್ಟರ್ ಪರ ಇದ್ದಾರೆ ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.

ಸದ್ಯ ಶೆಟ್ಟರ್ ಸಿಎಂ ಮಾಡಲು ನಮ್ಮ ಕಾಂಗ್ರೆಸ್ ಟೀಂ ಪ್ಲಾನ್ ಮಾಡುತ್ತಿದೆ. ಬಿಜೆಪಿಗೆ ಹೋದವರು ಕಾಂಗ್ರೆಸ್ ಟೀಂ, ಇವರು ತಮ್ಮ ಲಾಭಕ್ಕಾಗಿ ಹೋಗಿದ್ದಾರೆ. ಇವರಿಗೆ ಪಕ್ಷದ ಸಿದ್ಧಾಂತದ ಪ್ರಶ್ನೆ ಬರುವುದಿಲ್ಲ. ಕಾಂಗ್ರೆಸ್ ಟೀಂ ಲೆಕ್ಕದಲ್ಲಿ ಮುಂದಿನ ಸಿಎಂ ಜಗದೀಶ್ ಶೆಟ್ಟರ್ ಎಂದು ಅವರು ಹೇಳಿದ್ದರು.

ರಮೇಶ್​ ಜಾರಕಿಹೊಳಿ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡ್ತಾರೆ ಹೇಳಿಕೆಗೆ ಬಗ್ಗೆ ಮಾತನಾಡಿದ ಅವರು, ಹೊಸದಾಗಿ ರಾಜೀನಾಮೆ ಕೊಟ್ಟರೆ, ಅವರಿಗೆ ಎಲ್ಲಿಂದ ಮಂತ್ರಿ ಮಾಡ್ತಾರೆ. ಮಂತ್ರಿ ಆಗ್ತಿದ್ದರೆ ಓಕೆ ಎಂಎಲ್​ಎ ಆಗಿ ಇರಬೇಕೆಂದ್ರೆ ಕಾಂಗ್ರೆಸ್​ನಲ್ಲಿ ಓಕೆ. ಮಂತ್ರಿ ಸ್ಥಾನ ಖಾಲಿ ಇಲ್ಲ. ರಮೇಶ ಜಾರಕಿಹೊಳಿ ಬಂಡವಾಳ ಅಲ್ಲಿ-ಇಲ್ಲಿ ಶಾಸಕರನ್ನು ಕರೆದುಕೊಂಡು ಬರ್ತಿವಿ ಅನ್ನೋದು. ಆದರೆ, ಕಾಂಗ್ರೆಸನಿಂದ ಯಾವ ಶಾಸಕರು ಬಿಟ್ಟು ಹೋಗಲ್ಲ ಎಂದು ತಿಳಿಸಿದರು.

ಡಿಸಿಎಂ ಸವದಿ ಬಿಜೆಪಿ ಶಾಸಕರು ಮಾರಾಟಕ್ಕೆ ಇಲ್ಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಹೋದ್ರೆ ಚುನಾವಣೆಗೆ ಹೋಗ್ತಿವಿ ಹೊರತು ಯಾವ ಬಿಜೆಪಿ ಶಾಸಕರನ್ನ ಸೆಳೆಯುತ್ತಿಲ್ಲ. ಬಿಜೆಪಿ ಶಾಸಕರನ್ನ ಸೆಳೆಯುವ ಪ್ರಶ್ನೆ ಇಲ್ಲ. ಆಪರೇಷನ್ ಮಾಡುವಷ್ಟು ಬ್ಯಾಂಕ್ ಬ್ಯಾಲೆನ್ಸ್ ನಮ್ಮ ಬಳಿ ಇಲ್ಲ. ಏನೇ ಪರಿಸ್ಥಿತಿ ಬಂದ್ರು ಚುನಾವಣೆ ಒಂದೇ ಪರಿಹಾರ ಎಂದಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *