‘ದೇವಸ್ಥಾನಗಳು ಓಪನ್ ಆದರೆ ಚರ್ಚ್​​, ಮಸೀದಿಗಳು ಆಗಲೇಬೇಕು’ – ಸಿಎಂ ಬಿಎಸ್​ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ದೇವಸ್ಥಾನಗಳು ಜೂನ್ 1ನೇ ತಾರೀಖಿನಿಂದ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬುಧವಾರ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ​ಜೂನ್ 1ನೇ ತಾರೀಖಿನ ಬಳಿಕ ಎಲ್ಲದಕ್ಕೂ ಬಹುಪಾಲು ಕೇಂದ್ರದಿಂದ ಅನುಮತಿ ಸಿಗಬಹುದು. ದೇವಸ್ಥಾನಗಳು ಓಪನ್ ಆದರೆ ಚರ್ಚ್​​, ಮಸೀದಿಗಳು ಆಗಲೇಬೇಕು. ಕಾನೂನು ಎಲ್ಲರಿಗೂ ಒಂದೇ ಅಲ್ವಾ(?) ದೇವಸ್ಥಾನಗಳು ಪ್ರಾರಂಭ ಆಗುತ್ತವೆ ಎಂದರೆ, ಅದರ ಅರ್ಥ ಚರ್ಚ್​​, ಮಸೀದಿ ಪ್ರಾರಂಭ ಎಂದೇ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ಈಗಾಗಲೇ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ.ವೀರೇಂದ್ರ ಹೆಗ್ಗಡೆಯವರು ಕೆಲವು ಸೂಚನೆ ನಿಯಮಗಳನ್ನು ಸಲಹೆ ಮಾಡಿದ್ದಾರೆ. ಎಲ್ಲ ಭಕ್ತರೂ ದೇವರ ದರ್ಶನ ಮಾಡಿದ ಬಳಿಕ ತೆರಳಬೇಕು. ಅಲ್ಲಿನ ರೂಂಗಳಲ್ಲಿ ಉಳಿದುಕೊಳ್ಳಬಾರದು ಎಂದು ಧರ್ಮಾಧಿಕಾರಿಗಳು ಸಲಹೆ ಕೊಟ್ಟಿದ್ದಾರೆ. ಆದರೆ, ಸಾವಿರಾರು ಮಂದಿ ಭಕ್ತಾಧಿಗಳು ಬಂದರೆ ಅವರಿಗೆ ಹೇಗೆ ಊಟ ನೀರು ವ್ಯವಸ್ಥೆ ಮಾಡಬೇಕು(?) ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ ಎಂದರು.

ಸದ್ಯ ಕೋವಿಡ್-19 ಜೊತೆ ನಾವು ಬದಕುಬೇಕಿದೆ. ನಿನ್ನೆ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಮಾಲ್, ಸಿನಿಮಾ ಚಿತ್ರಮಂದಿರಗಳು ಪ್ರಾರಂಭ ಮಾಡುವ ಕುರಿತು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ. ನಾನು ತೀರ್ಮಾನ ಮಾಡಲಿಕ್ಕೆ ಬರಲ್ಲ ಎಂದು ಬಿಎಸ್​ವೈ ಸ್ಪಷ್ಟನೆ ನೀಡಿದ್ದಾರೆ.

ಘೋಷಣೆ ಮಾಡಿರೋ ಯೋಜನೆಗಳು ಜನರಿಗೆ ಇನ್ನು ತಲುಪಿಲ್ಲ ಎಂಬ ವಿಪಕ್ಷಗಳ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಈಗ ಕೋವಿಡ್-19 ಹಿನ್ನೆಲೆ ಘೋಷಣೆ ಮಾಡಿದ ಪರಿಹಾರ ಜನರಿಗೆ ತಲುಪುತ್ತಿದ್ದೆ. ಯಾವುದೇ ತೊಂದರೆ ಆಗಿಲ್ಲ, ದೇವರು ಮೆಚ್ಚೋ ಕೆಲಸ ಮಾಡಿದ್ದೇವೆ. ಹಂತ-ಹಂತವಾಗಿ ಪರಿಹಾರ ಬಿಡುಗಡೆ ಮಾಡುತ್ತಿದ್ದೇವೆ. ಹಣಕಾಸು ಬಿಡುಗಡೆ ಮಾಡಿ ಕೆಲಸ ಪ್ರಾರಂಭ ಮಾಡಿದ್ದೇವೆ ಎಂದು ಅವರು ವಿರೋಧ ಪಕ್ಷದ ಆರೋಪಕ್ಕೆ ಉತ್ತರಿಸಿದ್ದಾರೆ.

ಇನ್ನು ಸರ್ಕಾರದಿಂದ ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಮಾಡಿಲ್ಲ, ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಸಮುದಾಯಗಳಿಗೆ ಪರಿಹಾರ ಘೋಷಿಸಿದೆ. ಈಗಾಗಲೇ ಘೋಷಿಸಿದ ಪರಿಹಾರಗಳನ್ನು ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅಂತೆಯೇ, ಸಾಕಷ್ಟು ಸಮಸ್ಯೆಗಳಿವೆ. ಹೊರಗಿನ ರಾಜ್ಯಗಳಿಂದ ಜನ ಬರ್ತಿದ್ದಾರೆ. ಅವರೆಲ್ಲರಿಗೂ ಉಳಿಯಲು ವ್ಯವಸ್ಥೆ ಮಾಡಬೇಕಿದೆ. ಅವರ ವಸತಿಗೆ ಸಮಸ್ಯೆಯಾಗಿದೆ ಇದರ ಬಗ್ಗೆಯೂ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಗಮನ ಸೆಳೆಯಲಾಗಿದೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *