ಕೋವಿಡ್​-19 ​ಇಂಪ್ಯಾಕ್ಟ್​: ಭಾರತದಲ್ಲಿ ಟಿಕ್​ಟಾಕ್ ಆ್ಯಪ್​​ ಡೌನ್​ಲೋಡ್​ನಲ್ಲಿ ಭಾರಿ ಇಳಿಕೆ

ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಡಿಮೆ ಮಾರ್ಕೆಟಿಂಗ್ ಮತ್ತು ಜಾಹೀರಾತುಗಳ ಮಧ್ಯೆ ಟಿಕ್​ಟಾಕ್​​ ಬಳಕೆದಾರರಲ್ಲಿ ಚೀನಾ ವಿರೋಧಿ ಭಾವನೆ ಮತ್ತು ಅವರ ಜನಪ್ರಿಯ ಅಪ್ಲಿಕೇಶನ್‌ ನಿಷೇಧಿಸಬೇಕೆಂಬ ಕೂಗಿನಿಂದಾಗಿ,  ಹಿಂದಿನ ಎರಡು ತಿಂಗಳುಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಜನರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಟಿಕ್‌ಟಾಕ್ ಆ್ಯಪ್​ ಡೌನ್‌ಲೋಡ್ ಮಾಡಿದ್ದಾರೆ.

ಅಪ್ಲಿಕೇಶನ್ ಗುಪ್ತಚರ ಸಂಸ್ಥೆ ಸೆನ್ಸಾರ್​ ಟವರ್ ಇಟಿಯೊಂದಿಗೆ ಹಂಚಿಕೊಂಡ ದತ್ತಾಂಶಗಳ ಪ್ರಕಾರ, ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಮಾರ್ಚ್‌ನಲ್ಲಿ ಶೇ.8ರಷ್ಟು ಮತ್ತು ಫೆಬ್ರವರಿಯಲ್ಲಿ ಶೇ.7ರಷ್ಟು ಡೌನ್​ಲೋಡ್​ ಮಾಡಲಾಗಿತ್ತು. ಆದರೆ, ಏಪ್ರಿಲ್‌ನಲ್ಲಿ ಶೇ.34 ಮತ್ತು ಮೇ 23 ರವರೆಗೆ ಶೇ.28ರಷ್ಟು ಕುಸಿದಿದೆ ಎಂದು ತೋರಿಸಿದೆ.

ಮಾರ್ಚ್‌ನಲ್ಲಿ 35.7 ಮಿಲಿಯನ್ ಬಳಕೆದಾರರು ಟಿಕ್‌ಟಾಕ್ ಡೌನ್‌ಲೋಡ್ ಮಾಡಿಕೊಂಡರೆ, ಏಪ್ರಿಲ್‌ನಲ್ಲಿ ಅದನ್ನು ಡೌನ್‌ಲೋಡ್ ಮಾಡಿದ ಬಳಕೆದಾರರ ಸಂಖ್ಯೆ 23.5 ಮಿಲಿಯನ್ ಮತ್ತು ಮೇ 23ರ ವರೆಗೆ 17 ಮಿಲಿಯನ್‌ಗೆ ಇಳಿದಿದೆ ಎಂದು ಸೆನ್ಸಾರ್ ಟವರ್ ಡೇಟಾ ತಿಳಿಸಿದೆ.

ಈ ಬೆಳೆವಣಿಗೆಯಿಂದಾಗಿ ಟಿಕ್‌ಟಾಕ್​​ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನಪ್ರಿಯ ಟಿಕ್‌ಟಾಕ್‌ನಂತಹ ಅಪ್ಲಿಕೇಶನ್‌ಗಳಲ್ಲಿ ಜಾಹೀರಾತು ಕಡಿಮೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲೂ ಸಹ ಮಾರ್ಕೆಟಿಂಗ್​ಅನ್ನು ಬೇಡಿಕೆ ಕಡಿಮೆ ಆಗಿದ್ದು, ಕಳೆದ ಎರಡು ತಿಂಗಳುಗಳಲ್ಲಿ ಬ್ರಾಂಡ್ ಮೌಲ್ಯ ಇಳಿಕೆ ಕಂಡಿದೆ.

ಈ ಮೊದಲು, ಟಿಕ್‌ಟಾಕ್ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್ ಸೇರಿದಂತೆ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿರಂತರ ಜಾಹೀರಾತುದಾರರಾಗಿದ್ದರು. ಆದರೆ, ಅದು ಇನ್ನು ಮುಂದೆ ಹಾಗೆ ಆಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೂ ಸಹ ಇದು ತಾತ್ಕಾಲಿಕ ವಿದ್ಯಮಾನವಾಗಬಹುದು.

ಸದ್ಯ ಇದು ಅಲ್ಪಾವಧಿಯ ಪ್ರವೃತ್ತಿಯಂತೆ ಕಾಣುತ್ತಿದ್ದು, ಹಬ್ಬದ ಋತುವಿನಲ್ಲಿ ಟಿಕ್‌ಟಾಕ್‌ನಿಂದ ಭಾರತಕ್ಕೆ ನಿರ್ದಿಷ್ಟವಾದ ಕೆಲವು ಅಭಿಯಾನಗಳನ್ನು ನಾವು ನೋಡುತ್ತೇವೆ ಎಂದು ಒಗಿಲ್ವಿಯಲ್ಲಿ ಸ್ವತಂತ್ರ ಸಂವಹನ ಸಲಹೆಗಾರ ಕಾರ್ತಿಕ್ ಶ್ರೀನಿವಾಸನ್ ಅವರ ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಇನ್ಸ್ಟ್​​ಗ್ರಾಮ್​​ ಹೊಸ ಬಳಕೆದಾರರನ್ನು ಪಡೆಯಲು ಟಿಕ್​ಟಾಕ್​ನಲ್ಲಿ ಜಾಹೀರಾತಿಗಾಗಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂಯೆ ಸೋಮವಾರ ಟಿಕ್​​ಟಾಕ್​ನವರು ಇಟಿ ಅವರ ಇಮೇಲ್​ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಈ ಎರಡು ಬೆಳವಣಿಗೆಗಳು ಟಿಕ್​ಟಾಕ್​ ಬಳಕೆದಾರರ ಕುಸಿತ ಕಂಡಿರುವುದಕ್ಕೆ ಹೊಂದಾಣಿಕೆ ಆಗುತ್ತಿವೆ.

Recommended For You

About the Author: user

Leave a Reply

Your email address will not be published. Required fields are marked *