ಸಣ್ಣ ವ್ಯಾಪಾರಿಗಳ ಪರ ನಿಂತ ವಿಜಯಲಕ್ಷ್ಮೀ ದರ್ಶನ್..!

ಕೊರೊನಾ ಮತ್ತು ಲಾಕ್​ಡೌನ್​ ಸಮಸ್ಯೆಯಿಂದ ಇಡೀ ದೇಶವೇ ತತ್ತರಿಸಿ ಹೋಗಿವೆ. ಅದರಲ್ಲೂ ದಿನಗೂಲಿ ಕಾರ್ಮಿಕರು, ಸಣ್ಣಪುಟ್ಟ ಉದ್ಯೋಗ ಮಾಡ್ತಿರೋರು,ಕಿರಾಣಿ ಅಂಗಡಿಗಳ ವ್ಯಾಪಾರಿಗಳು ತೀರಾ ಸಂಕಷ್ಟದಲ್ಲಿದ್ದಾರೆ. ಇದೀಗ ಇಂತವರ ಪರ ದನಿಯೆತ್ತಿದ್ದಾರೆ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ .

ಕೊರೊನಾ ಮತ್ತು ಲಾಕ್​ಡೌನ್​ನಿಂದ ಸಾಕಷ್ಟು ವರ್ಗಗಳು ಅತೀವ ಸಮಸ್ಯೆ ಎದುರಿಸ್ತಾ ಇದೆ. ಈ ನಿಟ್ಟಿನಲ್ಲಿ ಸ್ಯಾಂಡಲ್​ವುಡ್​ನ ಸೆಲೆಬ್ರೆಟಿಗಳು ಮತ್ತು ಅವ್ರ ಅಭಿಮಾನಿಗಳು ತಮ್ಮ ಕೈಲಾದಷ್ಟು ನೆರವಿನ ಹಸ್ತ ಚಾಚ್ತಿರೋದು ಗೊತ್ತೇಯಿದೆ. ಹಾಗೆಯೇ ಯಾವುದೇ ಸಮಾಜಮುಖಿ ಕೆಲಸಗಳು, ಕಷ್ಟದಲ್ಲಿರೋರಿಗೆ ಸಹಾಯ ಮಾಡೋದು, ರೈತರ ಪರ ದನಿಯೆತ್ತೋದು ಇಂತಹ ಕಾರ್ಯಗಳಲ್ಲಿ ಸದಾ ಮುಂದಿರ್ತಾರೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​. ಇದೀಗ ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ಪತ್ನಿ ವಿಜಯಲಕ್ಷ್ಮೀ .

ಕೊರೊನಾ ಮತ್ತು ಲಾಕ್​ಡೌನ್​ನಿಂದ ತೀರಾ ನಷ್ಟಕೀಡಾಗಿರೋ ಕಿರಾಣಿ ಅಂಗಡಿಗಳ ಪರ ದನಿಯೆತ್ತಿದ್ದಾರೆ ವಿಜಯಲಕ್ಷ್ಮಿ ದರ್ಶನ್. ಟ್ವಿಟ್ಟರ್​​​ನಲ್ಲಿ ಬರೆದುಕೊಂಡಿರೋ ವಿಜಯಲಕ್ಷ್ಮಿ, ಇನ್ನುಮುಂದಾದ್ರೂ ಅಮೇಜಾನ್​ ಮೂಲಕ ದಿನಸಿ ಖರೀದಿ ಮಾಡೋ ಬದಲು, ನಿಮ್ಮ ಅಕ್ಕಪಕ್ಕದಲ್ಲಿರೋ ದಿನಸಿ ಅಂಗಡಿಗಳಲ್ಲಿ ಖರೀದಿ ಮಾಡಿ, ಸ್ಟಾರ್​ ಹೋಟೇಲ್​ಗಳಲ್ಲಿ ಕಾಫಿ ಕುಡಿಯೋ ಬದಲು, ಚಿಕ್ಕಪುಟ್ಟ ಹೊಟೇಲ್​ಗಳು, ಟೀ ಅಂಗಡಿಗಳಲ್ಲಿ ಕುಡಿಯಿರಿ. ಕಿರಾಣಿ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನ ಖರೀದಿ ಮಾಡಿ ಅಂತ ಹೇಳಿದ್ದಾರೆ.

ಅಷ್ಟೇ ಅಲ್ಲ, ಪಿಜಾ, ಮ್ಯಾಕ್​ಡೋನಲ್ಸ್, ಕೆಎಫ್​ಸಿಗಳು, ಲಾಕ್ಡೌನ್​ ಇದ್ದರೂ ಕೂಡ ಬದುಕುತ್ತವೆ. ಆದರೆ, ಸಣ್ಣಪುಟ್ಟ ವ್ಯಾಪಾರಿಗಳು ತೊಂದರೆ ಅನುಭವಿಸ್ತಾ ಇದ್ದಾರೆ. ಹಾಗಾಗಿ ಎಲ್ಲರೂ ಕೂಡ ಕಿರಾಣಿ ಅಂಗಡಿಗಳಿಗೆ ಪ್ರಾಮುಖ್ಯತೆ ಕೊಡಿ. ಇದರಿಂದ ಅವರ ಬದುಕಿಗೆ ಸಹಾಯವಾಗುತ್ತದೆ ಅಂತ ಮನವಿ ಮಾಡಿದ್ದಾರೆ.

ಈಗಾಗ್ಲೇ ವಿದೇಶಿ ಪ್ರಾಡಕ್ಟ್​ಗಳನ್ನ ಬಿಟ್ಟು ಸ್ವದೇಶಿ ಪ್ರಾಡಕ್ಟ್​ಗಳನ್ನೇ ಬಳಸುವಂತೆ ಅಭಿಯಾನವೊಂದು ಶುರುವಾಗಿದೆ. ಅಂತೆಯೇ ವಿದೇಶಿ ಆ್ಯಪ್​ಗಳನ್ನ ಬಿಟ್ಟು,ಆನ್​ಲೈನ್​ ಗ್ರೋಸರಿ ಶಾಪಿಂಗ್​ ಬಿಟ್ಟು, ಕಿರಾಣಿ ಅಂಗಡಿಗೆ ಭೇಟಿ ನೀಡಿ, ನಮ್ಮವರ ಬದುಕಿಗೆ, ನಾವೇ ನೆರವಾಗಿ ನಿಲ್ಲಬೇಕಾಗಿದೆ.

Recommended For You

About the Author: user

Leave a Reply

Your email address will not be published. Required fields are marked *