ಎಂಟು ನಿಮಿಷದ ಹಾಡಿನಲ್ಲಿ ಟಾಪ್​ ನಟ-ನಟಿಯರ ದರ್ಶನ..!

ಕೊರೊನಾ ಸಮಸ್ಯೆ ಮತ್ತು ಲಾಕ್​ಡೌನ್​ನಿಂದಾಗಿ ಇಡೀ ಚಿತ್ರರಂಗವೇ ಸ್ತಬ್ದವಾಗಿದೆ. ಇದ್ರಿಂದ ನಮ್ಮ ಸೆಲೆಬ್ರೆಟಿಗಳ ಮುಖ ನೋಡಿ 2 ತಿಂಗಳುಗಳೇ ಕಳೆದುಹೋಗಿದೆ. ಆದರೆ, ಈಗ ಎಲ್ಲ ಸ್ಟಾರ್​ಗಳನ್ನು ಒಂದೇ ಬಾರಿ, ಒಂದೇ ಹಾಡಿನಲ್ಲಿ ನೋಡೋ ಅವಕಾಶ ಸಿಕ್ಕಿದೆ. ಅದು ಹೇಗೆ(?) ಏನು(?)

ಸ್ಯಾಂಡಲ್​ವುಡ್​ ಸ್ತಬ್ದವಾಗಿ 2 ತಿಂಗಳುಗಳೇ ಕಳೆದುಹೋಗಿದೆ. ಯಾವುದೇ ಸಿನಿಮಾ ರಿಲೀಸ್​ ಇಲ್ಲದೇ, ಬೆಳ್ಳಿಪರದೆ ಮೇಲೆ ನೆಚ್ಚಿನ ಸೆಲೆಬ್ರೆಟಿಗಳನ್ನ ನೋಡೋ ಅವಕಾಶವೂ ಮಿಸ್​ ಆಗಿದೆ. ಶೂಟಿಂಗ್, ಸಿನಿಮಾ ರಿಲೀಸ್ ಇಲ್ಲ ಅಂದ್ರೂ ಪರವಾಗಿಲ್ಲ. ಆಗಾಗ ನಮ್ಮ ಫೇವರಿಟ್ ಸ್ಟಾರ್​ಗಳನ್ನ ನೋಡೋಕ್ಕಂತ್ಲೇ ಅಭಿಮಾನಿಗಳು ಅವರ ಮನೆಮುಂದೆ ಜಮಾಯಿಸ್ತಾ ಇದ್ದರು. ಆದರೆ ಈಗ ಅದು ಸಾಧ್ಯವಾಗ್ತಿಲ್ಲ.

ಆದರೆ, ಇದೀಗ ಎಲ್ಲಾ ಸ್ಟಾರ್​ಗಳ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಇನ್ನೆರೆಡು ದಿನಗಳಲ್ಲೇ ತಮ್ಮ ನೆಚ್ಚಿನ ನಟಿ ನಟಿಯರನ್ನ ಕಣ್ತುಂಬಿಕೊಳ್ಳೋ ಅವಕಾಶ ಅವರ ಅಭಿಮಾನಿಗಳಿಗೆ. ಸ್ಯಾಂಡಲ್​ವುಡ್​ನ ಬಿಗ್​ ಸ್ಟಾರ್​ಗಳಾದ ಚಾಲೆಂಜಿಂಗ್​ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ಕ್ರೇಜಿಸ್ಟಾರ್​ ರವಿಚಂದ್ರನ್, ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್, ಹಿರಿಯ ನಟಿ ಸುಮಲತಾ, ರಕ್ಷಿತ್ ಶೆಟ್ಟಿ, ಗಣೇಶ್, ಆಶಿಕಾ ರಂಗನಾಥ್​, ಹೀಗೆ ಸಾಕಷ್ಟು ನಟ ನಟಿಯರು ಒಂದೇ ಹಾಡಿನಲ್ಲಿ ಕಾಣಿಸಿಕೊಳ್ತಿದ್ದಾರೆ.

ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಹಾಡೊಂದನ್ನ ತಯಾರು ಮಾಡಿದೆ. ಮೈ ಹೀರೋ ಎಂಬ ಕಾನ್ಸೆಪ್ಟ್​ನಲ್ಲಿ ಈ ಹಾಡು ರೆಡಿಯಾಗಿದ್ದು, 8 ನಿಮಿಷದ ಈ ಹಾಡಿನಲ್ಲಿ ಸ್ಯಾಂಡಲ್​ವುಡ್​ನ ನಟನಟಿಯರು , ಕೊರನಾ ವಿರುದ್ಧ ಜಾಗೃತಿ ಮೂಡಿಸಲಿದ್ದಾರೆ.

ಅಂದ್ಹಾಗೇ ಈ ಹಾಡಿನ ಸಂಪೂರ್ಣ ಸಾರಥ್ಯವನ್ನ ನಿರ್ದೇಶಕ ಪವನ್ ಒಡೆಯರ್ ವಹಿಸಿಕೊಂಡಿದ್ದು, ಈ ಹಾಡಿಗೆ ವಿ.ಹರಿಕೃಷ್ಣ ಮ್ಯೂಸಿಕ್​ ಮಾಡಿದ್ದಾರೆ. ಸ್ವತಃ ಪವನ್​ ಒಡೆಯರ್​ ನಟ ನಟಿಯರ ಮನೆಗೆ ತೆರಳಿ ಈ ಹಾಡನ್ನ ಚಿತ್ರೀಕರಿಸಿಕೊಂಡು ಬಂದಿದ್ದಾರೆ. ಮತ್ತೆ ಕೆಲವರು ವೀಡಿಯೋ ಮಾಡಿ ಕಳುಹಿಸಿದ್ದಾರೆ. ಅದನ್ನೆಲ್ಲಾ ಎಡಿಟ್​​​​​ ಮಾಡಿ ಈ ಹಾಡಿನಲ್ಲಿ ಕಟ್ಟಿಕೊಡಲಾಗ್ತಿದೆ.

‘ಬದಲಾಗು ನೀನು ಬದಲಾಯಿಸು ನೀನು’ ಅಂತ ಶುರುವಾಗುವ ಈ ಹಾಡಿಗೆ ಇಮ್ರಾನ್​ ಸರ್ದಾರಿಯಾ ಕೊರಿಯೊಗ್ರಫಿ ಮಾಡಿದ್ದಾರೆ..ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ವೈಧ್ಯಕೀಯ ಶಿಕ್ಷಣ ಸಚಿವರಾದ ಸುಧಾಕರ್​ ಕೂಡ ಈ ಹಾಡಿನಲ್ಲಿ ಕಾಣಿಸಿಕೊಳ್ತಿದ್ದಾರೆ..

ಈ ಹಾಡು ಸೋಮವಾರ ಅಂದ್ರೆ ಇದೇ ಮೇ 25 ರಂದು ಸಂಜೆ 5 ಗಂಟೆಗೆ, ಡಿ ಬೀಟ್ಸ್​ ಅಫಿಶೀಯಲ್ ಯೂಟ್ಯೂಬ್​ ಚಾನಲ್​ನಲ್ಲಿ ರಿಲೀಸ್​ ಆಗ್ಲಿದೆ. ಒಟ್ನಲ್ಲಿ ಇಂತದೊಂದು ಒಳ್ಳೆ ವಿಚಾರಕ್ಕೆ ನಮ್ಮ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ಕೈ ಜೋಡಿಸ್ತಿರೋದು ಹೆಮ್ಮೆಯ ವಿಷಯ.

Recommended For You

About the Author: user

Leave a Reply

Your email address will not be published. Required fields are marked *