‘ನಿಮಗೆ ಆಗದಿದ್ದರೆ ಹೇಳಿ ನಾವು 24 ಗಂಟೆಯಲ್ಲಿ ಮಾಡಿ ತೋರಿಸುತ್ತೇವೆ’ – ಡಿ.ಕೆ ಶಿವಕುಮಾರ್ ಸವಾಲ್​​

ಬೆಂಗಳೂರು: ನಿಮಗೆ ಆಗದಿದ್ದರೆ ಹೇಳಿ ನಾವು ಮಾಡಿ ತೋರಿಸ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಚಾಲೆಂಜ್​ ಹಾಕಿದ್ದಾರೆ.

ಶನಿವಾರ ನಗರದಲ್ಲಿಂದು ಮಾಧ್ಯಮದ ಜೊತೆ ಹೊರ ರಾಜ್ಯದ ಕಾರ್ಮಿಕರು ಊಟ, ನೀರು ಸಿಗದೇ ಊರಿಗೆ ಹೋಗಲು ಪರಿತಪಿಸುತ್ತಿರೋ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದು, ದೇಶ ಕಟ್ಟೋರನ್ನು ನಡೆಸಿಕೊಳ್ಳೋ ರೀತಿನಾ ಇದು(?) ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ರಾಜ್ಯ ಸರ್ಕಾರ ವಿರುದ್ಧ ಗರಂ ಆಗಿದ್ದಾರೆ.

ಸದ್ಯ ಸರ್ಕಾರದವರಿಗೆ ಸರಿಯಾಗಿ ಪರಿಸ್ಥಿತಿ ನಿರ್ವಹಣೆ ಮಾಡಲು ಆಗ್ತಿಲ್ಲ, ಸರ್ಕಾರಕ್ಕೆ ನಾಚಿಕೆ ಆಗಬೇಕು. ದೇಶ ಕಟ್ಟೋರನ್ನು ಕೆಟ್ಟದಾಗಿ ನಡೆಸಿಕೊಳ್ತಿದ್ದಾರೆ. ಕಾರ್ಮಿಕರಿಗೆ ಮೂಲಭೂತ ಅವಶ್ಯಕತೆಗಳನ್ನು ಕೊಡಿ. ನಿಮಗೆ ಆಗದಿದ್ದರೆ ಹೇಳಿ. ನಾವು 24 ಗಂಟೆಯಲ್ಲೇ ಮಾಡಿ ತೋರಿಸ್ತೇವೆ ಎಂದು ಸರ್ಕಾರಕ್ಕೆ ಸವಾಲ್​ ಎಸೆದಿದ್ದಾರೆ.

ಸರ್ಕಾರ ಅವರಿಗೆ ರಕ್ಷಣೆ ಕೊಡಲಿ, ಆಹಾರ ಕೊಡಲಿ. ಸರ್ಕಾರಕ್ಕೆ ಆಗದಿದ್ದರೆ ನಾವೇ ಕೊಡ್ತೀವಿ. ಅವರಿಗೆ ಟ್ರೈನ್ ಸೌಲಭ್ಯ, ಊಟ ಕೂಡ ನಾವೇ ಕೊಡ್ತೀವಿ. ನಿಮ್ಮ ಬಿಡಿಗಾಸು ಹಣವೂ ನಮಗೆ ಬೇಡ. ಅವರ ಜೇಬಲ್ಲಿ ಹಣ ಇಲ್ಲ, ಕಾರ್ಮಿಕರ ಸಂಕಷ್ಟ ನೋಡಿ ನಮ್ಮ ಎದೆ ಉರಿಯುತ್ತಿದೆ. ಹಾರ್ಡ್ ವರ್ಕರ್ಸ್ ಅವರು. ನಿಮ್ ಮಕ್ಕಳನ್ನ, ಸಹೋದರರನ್ನು ಹೀಗೇ ನಡಿಸಿಕೊಳ್ಳುತ್ತಿರಾ(?) ಇಂತಹ ವಿಚಾರಗಳಲ್ಲಿ ನಮ್ಮನ್ನು ಕರೆದು ಮಾತಾಡೋಕೂ ನಿಮಗೆ ತಾಳ್ಮೆ ಇಲ್ಲ ಎಂದು ಅವರು ಆಕ್ರೋಶಗೊಂಡರು.

ಕೆಲಸದ ಅವಧಿ 8 ರಿಂದ 10 ತಾಸು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಮಾನವ ಹಕ್ಕುಗಳ ಉಲ್ಲಂಘನೆ. ಕಾರ್ಮಿಕರ ಮೇಲೆ ಒತ್ತಡ ಹೇರಬಾರದು. ಲೇಬರ್ ಯುನಿಯನ್​ಗಳ ಜೊತೆ ಮಾತಾಡಿ ನಿರ್ಧಾರ ಮಾಡಬಹುದಿತ್ತು. ಕಾಂಗ್ರೆಸ್ ಇದನ್ನು ಖಂಡಿಸುತ್ತದೆ. ಲೇಬರ್​​ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಾಡಿರೋದು ಅನ್​ ಎಥಿಕಲ್ ಎಂದು ಡಿ.ಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *