‘ಲಾಕ್​ಡೌನ್ ಫ್ರೀ ಮಾಡಿದೀವಿ ಅಂದ್ರೆ ಯದ್ವಾತದ್ವಾ ಓಡಾಡಿ ಅಂತಲ್ಲ’ – ಸಚಿವ ಡಾ.ಕೆ ಸುಧಾಕರ್

ಚಿಕ್ಕಬಳ್ಳಾಪುರ: ಇಂದು ಜಿಲ್ಲಾ ಮಟ್ಟದ ಸಭೆ ನಡೆಸಿದ್ದೇನೆ, ವಿಶೇಷವಾಗಿ ಕೊರೊನಾ ಸೋಂಕಿತರು ಮಹಾರಾಷ್ಟ್ರದಿಂದ ಆರು-ಏಳು ಬಸ್ಸುಗಳಲ್ಲಿ ನಮ್ಮ ಗಮನಕ್ಕೆ ಇಲ್ಲದೇ ಬಂದಿದ್ದಾರೆ. ಅವರು ಬಂದ ಎರಡು ದಿನದ ಮೇಲೆ ನಮಗೆ ಗೊತ್ತಾಯಿತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಮನವಿ ಮೇಲೆ ನಾವಿಲ್ಲಿ ಕ್ವಾರೆಂಟೈನ್​ಗೆ ಅವಕಾಶ ಕೊಟ್ಟಿದ್ದೇವೆ. ಇಂದು 20 ಪ್ರಕರಣ, ನಿನ್ನೆ 47 ಸೇರಿ 67 ಜನರದ್ದು ಪಾಸಿಟಿವ್ ಬಂದಿದೆ. ಇನ್ನು 87 ಜನರ ವರದಿ ಬರಬೇಕಿದೆ ಎಂದರು.

ಇನ್ನು ಮೊನ್ನೆ ತನಕ ನಮ್ಮಲ್ಲಿ ಎಲ್ಲವೂ ಕಂಟ್ರೋಲ್ ಇತ್ತು. ಶೇ. 40ರಷ್ಟು ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ದೃಢಪಟ್ಟಿದೆ. ಮುಖ್ಯಮಂತ್ರಿಗಳು 1ನೇ ತಾರೀಖು ವರೆಗೂ ಗುಜರಾತ್, ಮಹಾರಾಷ್ಟ್ರ, ತಮಿಳುನಾಡಿನವರು ಬರುವುದು ಬೇಡ ಎಂದು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸದ್ಯ ರಾಜ್ಯದಲ್ಲಿ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಮಂಡ್ಯ, ರಾಯಚೂರು, ಯಾದಗಿರಿ, ಗದಗ ಸೇರಿದಂತೆ ಎಲ್ಲಾ ಪ್ರಕರಣ ಮಹಾರಾಷ್ಟ್ರದಿಂದ ಬಂದವರು. 598 ಗುಣಮುಖ ಆಗಿದ್ದು, 42 ಜನ ನಿಧನ ಹೊಂದಿದ್ದಾರೆ ಎಂದು ಹೇಳಿದರು.

ಕೆಲವು ರಾಜ್ಯಗಳಲ್ಲಿ ಹೃದಯಾಘಾತದಿಂದ ಮೃತಪಟ್ಟರೆ ಕೊರೊನಾ ಲಿಸ್ಟ್​ನಲ್ಲಿ ತೋರಿಸ್ತಾ ಇಲ್ಲ, ನಾವು ಎಲ್ಲವನ್ನೂ ಸರಿಯಾದ ಅಂಕಿತ ನೀಡೋದ್ರಿಂದ ಸಾವಿನ ಸಂಖ್ಯೆ ಹೆಚ್ಚು ಕಾಣಿಸ್ತಿದೆ. ಇಂದು 32 ವರ್ಷದ ವ್ಯಕ್ತಿಗೆ ಟಿ.ಬಿ, ಏಡ್ಸ್ ಇತ್ತು ಅದರಿಂದಾಗಿ ಸಾವನ್ನಪ್ಪಿದ್ದರು. ಸಾವಿಗೆ ವಿವಿಧ ಕಾರಣಗಳೇ ಕಾರಣ ಇರ್ತವೆ. ಸಾವಿನ ಸಮಸ್ಯೆಯಿಂದ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ, ಲಾಕ್​ಡೌನ್ ಫ್ರೀ ಮಾಡಿದೀವಿ ಅಂದ್ರೆ ಯದ್ವಾತದ್ವಾ ಓಡಾಡಿ ಅಂತಲ್ಲ, ಕೆಲವು ಅಭ್ಯಾಸ ರೂಡಿಸಿಕೊಳ್ಳಿ, ಕಾನೂನು ಸಂಸ್ಕಾರ, ಸಂಸ್ಕೃತಿ ಆಗಬೇಕು. ಎಲ್ಲಕ್ಕೂ0 ಕಾನೂನು ರೂಪಿಸಿ ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ಸಚಿವ ಡಾ.ಕೆ ಸುಧಾಕರ್ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *