‘ರಾಕ್ಷಸರಿಗೆ ಕೊರೊನಾ ಬರುವುದಿಲ್ಲ ನನ್ನಂತವನಿಗಂತೂ ಬರುವುದಿಲ್ಲ’

ಶಿವಮೊಗ್ಗ: ನಿಮಗೆ ಕೊರೊನಾ ಬಂದಿದೆಯೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಮಾಧ್ಯಮದವರನ್ನು ಪ್ರಶ್ನೆ ಮಾಡಿ, ರಾಕ್ಷಸರಿಗೆ ಕೊರೊನಾ ಬರುವುದಿಲ್ಲ, ನನ್ನಂತವನಿಗಂತೂ ಬರುವುದಿಲ್ಲ ಎಂದು ಅವರು ಹ್ಯಾಸ ಚಟಾಕಿ ಹಾರಿಸಿದ ಪ್ರಸಂಗ ನಡೆಯಿತು.ಲ

ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು ಈಶ್ವರಪ್ಪ ಅವರು, ಕೊರೊನಾವನ್ನು ಎದುರಿಸುತ್ತೇನೆ ಎಂಬ ಆತ್ಮಸ್ಥೈರ್ಯ ಇರಬೇಕು ಇದರ ಜೊತೆಗೆ ಜಾಗರೂಕತೆಯೂ ಬೇಕು. ಕೊರೊನಾ ಎಂಬ ಭಯದಿಂದ ಶಾಸಕರು, ಸಚಿವರು, ಸಂಸದರು ಮನೆಯಲ್ಲೇ ಇದ್ದರೆ ಅಭಿವೃದ್ಧಿ ಕಾಮಗಾರಿಗಳು ನಡೆಯುವುದು ಹೇಗೆ(?) ಎಂದು ಅವರು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಿದರು.

ಸದ್ಯ ಇಡೀ ಪ್ರಪಂಚ ಮೋದಿ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಜನ ಲಕ್ಷಾಂತರ ರೂಪಾಯಿ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಕೊರೊನಾ ಬಗ್ಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಒಂದಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಅವರು ನುಡಿದರು.

ಇಂತಹ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹೇಳಿಕೆಯಿಂದ ಎಲ್ಲರಿಗೂ ನೋವಾಗಿದೆ. ಸೋನಿಯಾ ಗಾಂಧಿ ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ನಾನು ಹೇಳುವುದಿಲ್ಲ, ಸಾಗರ ಒಬ್ಬ ವಕೀಲ ತನ್ನ ಕೆಲಸವನ್ನು ತಾನು ಮಾಡಿದ್ದಾನೆ. ಸಬ್​ಇನ್ಸ್​​ಪೆಕ್ಟರ್​ ಎಫ್​ಐಆರ್ ಹಾಕಿರುವುದು ಸರಿಯೋ, ತಪ್ಪೋ ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ. ಎಂದು ಕಾಂಗ್ರೆಸ್​ ಅಧ್ಯಕ್ಷೆ ಸೋನಿಗಾಂಧಿ ವಿರುದ್ಧ ಹೂಡಿರುವ ಎಫ್​ಐಆರ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *