Top

'ನಾವು ಹೇಗೆ ಹೋರಾಟ ಮಾಡುತ್ತೇವೆ ಅನ್ನೋದನ್ನು ಹೇಳಲ್ಲ'- ಡಿ.ಕೆ ಶಿವಕುಮಾರ್ ವಾರ್ನಿಂಗ್​​

ನಾವು ಹೇಗೆ ಹೋರಾಟ ಮಾಡುತ್ತೇವೆ ಅನ್ನೋದನ್ನು ಹೇಳಲ್ಲ- ಡಿ.ಕೆ ಶಿವಕುಮಾರ್ ವಾರ್ನಿಂಗ್​​
X

ಬೆಂಗಳೂರು: ಕೋವಿಡ್​-19 ನೆಪವಾಗಿಟ್ಟುಕೊಂಡು ಗ್ರಾಮ ಪಂಚಾಯ್ತಿ ಚುನಾವಣೆ ಮುಂದೂಡುವ ಪ್ರಯತ್ನವನ್ನು ಸರ್ಕಾರ ನಡೆಸಿದೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಐದು ವರ್ಷಕ್ಕೊಮ್ಮೆ ಗ್ರಾಮ ಪಂಚಾಯ್ತಿಗೆ ಚುನಾವಣೆ ನಡೆಯುತ್ತವೆ. ಈ ಚುನಾವಣೆಗಳನ್ನು ಮುಂದೂಡಲು ಬರುವುದಿಲ್ಲ, ಇಷ್ಟೊತ್ತಿಗೆ ಚುನಾವಣೆ ಪ್ರಕ್ರಿಯೆ ಸ್ಟಾರ್ಟ್ ಆಗಬೇಕಿತ್ತು. ಚುನಾವಣಾ ಆಯೋಗ ಸಿದ್ಧತೆಯನ್ನು ಮಾಡಿಕೊಳ್ಳಬೇಕಿತ್ತು. ಆದರೆ, ಮಾಡದಿರುವುದು ಅನುಮಾನಕ್ಕೆ ಕಾರಣ ಎಂದರು.

ಇನ್ನು ಸರ್ಕಾರ ಈಗಾಗಲೇ ಮುಂದೂಡುವ ಬಗ್ಗೆ ಹೇಳಿಕೆ ನೀಡ್ತಿದೆ. ಜಿಲ್ಲಾಧಿಕಾರಿಗೆ ಅಧಿಕಾರವಿದೆ ಚುನಾವಣೆ ಮುಂದೂಡಲು ಅಂತ ಹೇಳುತ್ತಿದ್ದಾರೆ. ಕಾಯ್ದೆ ಪ್ರಕಾರ ಮುಂದೂಡಲು ಸಾಧ್ಯವಿಲ್ಲ, ನಾಮ ನಿರ್ದೇಶನ ಮಾಡಲು ಸಾಧ್ಯವಿಲ್ಲ, ಹೀಗಾಗಿ ಚುನಾವಣೆ ನಡೆಸಲೇಬೇಕೆಂದು ರಾಜ್ಯ ಚುನಾವಣೆ ಆಯೋಗಕ್ಕೆ ಒತ್ತಾಯಿಸಿದ್ದೇವೆ ಅವರು ಸಹ ಕಾಯ್ದೆಯಂತೆ ನಡೆದುಕೊಳ್ಳುತ್ತೇವೆ ಅಂದಿದ್ದಾರೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಚುನಾವಣೆ ಮುಂದೂಡಲು ಬರುವುದಿಲ್ಲ. ಇವರು ಕ್ಯಾಬಿನೆಟ್​ನಲ್ಲಿ ನಿರ್ಧಾರ ಮಾಡಿದ್ದಾರೆ. ಚುನಾವಣೆ ಮುಂದೂಡೋಕೆ ಪ್ರಯತ್ನ ನಡೆಸಿದ್ದಾರೆ. ಡಿಸಿಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯದಂತೆ ಸೂಚಿಸಿದ್ದಾರೆ. ಕೋವಿಡ್-19 ಕಡೆ ಗಮನಕೊಡುವಂತೆ ಅವರಿಗೆ ತಿಳಿಸಿದ್ದಾರೆ ಎಂದರು.

ಸದ್ಯ ಇವರ ಕಾರ್ಯಕರ್ತರನ್ನು ನಾಮ ನಿರ್ದೇಶನ ಮಾಡೋಕೆ ಹೊರಟಿದ್ದಾರೆ. ಏನಾದರೂ ಚುನಾವಣೆ ಮುಂದೂಡಿದರೆ ಸುಮ್ಮನಿರಲ್ಲ, ನಾವು ಹೇಗೆ ಹೋರಾಟ ಮಾಡುತ್ತೇವೆ ಅನ್ನೋದನ್ನು ಹೇಳಲ್ಲ, ನಾವು ಈ ಪೀಠಕ್ಕೆ ಬೆಲೆ ಕೊಡುತ್ತೇವೆ. ಪೀಠ ಹೇಗೆ ಬೆಲೆ ಕೊಡುತ್ತೆ ನೋಡುತ್ತೇವೆ. ಬಳಿಕ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

Next Story

RELATED STORIES