ರೋಗ ನಿರೋಧಕ ಶಕ್ತಿ ನೈಸರ್ಗಿಕವಾಗಿ ಬಲಪಡಿಸಲು 11 ಸಲಹೆಗಳು ಇಲ್ಲಿವೆ

ರೋಗವನ್ನು ಪ್ರತಿರೋಧಿಸುವ ಸಾಮರ್ಥ್ಯವನ್ನು ರೋಗ ನಿರೋಧಕ ಶಕ್ತಿ ಎನ್ನುತ್ತೇವೆ. ವೈರಸ್ ಗಳಿಂದ ಮತ್ತು ವಿವಿಧ ರೀತಿಯ ಸೋಂಕಿನಿಂದ ರಕ್ಷಣೆಗೆ ಪ್ರತಿರೋಧಕ ಶಕ್ತಿ ಅತ್ಯಗತ್ಯ.ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವುದು ಜೀವಮಾನದ ಪ್ರಕ್ರಿಯೆಯಾಗಿದೆ. ಈ ಶಕ್ತಿಯನ್ನು ವೃದ್ಧಿಸಿಕೊಳ್ಳಲು 11 ಪ್ರಮುಖ ಸಲಹೆಗಳು ಈ ಕೆಳಕಂಡತಿವೆ.

1. ಬೆಳಗ್ಗೆ ಎದ್ದಕೂಡಲೇ ಮೊಟ್ಟ ಮೊದಲನೆಯದಾಗಿ 10 ಗ್ರಾಂ ಚ್ಯವನಪ್ರಾಶವನ್ನು ಸೇವಿಸಬೇಕು. ಮಧುಮೇಹದ ಕಾಯಿಲೆ ಇರುವವರು ಸಕ್ಕರೆರಹಿತ ಚ್ಯವನಪ್ರಾಶವನ್ನು ಬಳಸಬೇಕು.

2. ಗಿಡಮೂಲಿಕೆಗಳ ಕಷಾಯವನ್ನು ದಿನಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿಕೊಂಡು ಕುಡಿಯಬೇಕು: ತುಳಸಿ, ದಾಲ್ಚಿನ್ನಿ, ಕರಿಮೆಣಸು, ಒಣಶುಂಠಿ ಮತ್ತು ಒಣದ್ರಾಕ್ಷಿಯನ್ನು ನೀರಿನಲ್ಲಿಹಾಕಿ ಚೆನ್ನಾಗಿ ಕುದಿಸಿ, ಶೋಧಿಸಿ ಕುಡಿಯಬೇಕು. ಬೇಕಾದರೆ ಬೆಲ್ಲವನ್ನಾಗಲೀ ಅಥವಾ ನಿಂಬೆಹಣ್ಣಿನರಸವನ್ನಾಗಲೀ ಇದರ ಜೊತೆಗೆ ಹಾಕಿ ಕಷಾಯ ಮಾಡಿಕೊಂಡು ಕುಡಿಯಬೇಕು.

3. ಆರೋಗ್ಯಕರ ಪಾನೀಯಗಳಾದ ನಿಂಬೆ ಹಣ್ಣಿನ ನೀರು, ಶುಂಠಿಯ ನೀರು, ತುಳಸಿಯ ನೀರು, ಮತ್ತು ಪುದೀನಾ ನೀರು ಕುಡಿಯಬೇಕು. ನೀರಿಗೆ ಮೇಲೆ ಹೇಳಿದ ಯಾವುದಾದರೊಂದು ಅಥವಾ ಬೇರೆ ಬೇರೆ ಪಾತ್ರೆಗಳಲ್ಲಿಬೇರೆ ಬೇರೆ ಪದಾರ್ಥಗಳನ್ನು ಹಾಕಿ ಮುಚ್ಚಿಟ್ಟುಬಿಡಬೇಕು. ನಂತರ ಸ್ವಲ್ಪ ಸ್ವಲ್ಪ ನೀರನ್ನು ಆಗಾಗ ಬಿಸಿ ಮಾಡಿಕೊಂಡು ಕುಡಿಯುತ್ತಿರಬೇಕು.

4. ಕಫ ಅಂಶವನ್ನು ಹೆಚ್ಚಿಸುವ ಪದಾರ್ಥಗಳನ್ನು ತ್ಯಜಿಸಬೇಕು. ಸೀಬೆ ಹಣ್ಣು, ತುಂಬಾ ತಣ್ಣಗಿರುವ ಹಾಲು, ಮೊಸರು, ಮಜ್ಜಿಗೆ, ಐಸ್‌ಕ್ರೀಮ್‌, ತಂಪಾದ ಪಾನೀಯಗಳು, ಕೇಕುಗಳು ಬೇಡ.

5. ಮನೆಯಲ್ಲೇ ತಯಾರಿಸಿದ ಚೆನ್ನಾಗಿ ಬೆಂದ, ಬೆಚ್ಚಗಿರುವ ಆಹಾರವನ್ನೇ ಸೇವಿಸುವುದು ಒಳ್ಳೆಯದು.

6. ಹಸಿಯ ತರಕಾರಿಗಳ ಸೇವನೆಯನ್ನು ಮಾಡಬಾರದು. ಏಕೆಂದರೆ ಹಸಿಯ ತರಕಾರಿಗಳು ನಮ್ಮ ಕೈ ಸೇರುವ ಮುನ್ನ ಸಾಗಾಣಿಕೆ ಮತ್ತು ಶೈತ್ಯಾಗಾರದಲ್ಲಿಸೋಂಕಿನಿಂದ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

7. ತರಕಾರಿಗಳನ್ನು ಮತ್ತು ಧಾನ್ಯಗಳನ್ನು ಬೇಯಿಸುವುದರಿಂದ ಕಲುಷಿತಗೊಂಡಿರುವುದನ್ನು ಕಡಿಮೆ ಮಾಡಬಹುದಾಗಿದೆ. ಏಕೆಂದರೆ ಬಿಸಿಯ ವಾತಾವರಣದಲ್ಲಿವೈರಸ್‌ ಉಳಿಯಲಾಗುವುದಿಲ್ಲ.

8. ರೋಗ ನಿರೋಧಕ ಶಕ್ತಿಯನ್ನು ಬೆಳೆಸುವ ತುಳಸಿ, ಅರಿಶಿನ, ಅಶ್ವಗಂಧ, ನೀರು, ದಾಳಿಂಬೆ, ಶುಂಠಿ, ಮತ್ತು ಬೆಲ್ಲಸೇವಿಸಬೇಕು.

9. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿದಿನ ರಾತ್ರಿ ಈ ಪಾನೀಯವನ್ನು ಮಾಡಿಕೊಂಡು ಬೆಚ್ಚಗಿರುವಾಗಲೇ ಕುಡಿಯಬೇಕು: 5 ಗ್ರಾಂ ತಾಜಾ ಅರಿಶಿನಕ್ಕೆ 5 ಗ್ರಾಂ ತುರಿದ ಶುಂಠಿಯನ್ನು ಕುದಿಯುವ ನೀರಿಗೆ ಹಾಕಿ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ನಂತರ ಶೋಧಿಸಿ, ಇದಕ್ಕೆ ಒಂದು ಚಿಟಿಕೆ ಉಪ್ಪನ್ನು ಹಾಕಿ ಮಲಗುವ ಮುನ್ನ ದಿನಾಲೂ ಗಂಟಲಿಗೆ ಹಿತವಾಗುವಷ್ಟು ಬೆಚ್ಚಗಿರುವಾಗಲೇ ಕುಡಿಯಬೇಕು.

10. ನಮ್ಮದೇಹದ ಸಸಾರಜನಕ ಆಹಾರ ಪದಾರ್ಥಗಳ ಅವಶ್ಯಕತೆಗಾಗಿ ದಿನಾಲೂ 25 ಗ್ರಾಂ ಬಾದಾಮಿಯಂತಹ ಬೀಜಗಳನ್ನು ಸೇವಿಸಬೇಕು. ಅಥವಾ ಹೆಸರುಕಾಳು ಇಲ್ಲವೇ ಕಡಲೇಕಾಯಿ ಬೀಜವನ್ನು ಬೇಯಿಸಿ ತಿನ್ನಬೇಕು.

11. ಬೆಚ್ಚಗಿನ ನೀರಿಗೆ ನಿಂಬೆಹಣ್ಣಿನರಸವನ್ನು ಬೆರೆಸಿ ದಿನವೂಕುಡಿಯಬೇಕು.

Recommended For You

About the Author: user

Leave a Reply

Your email address will not be published. Required fields are marked *