‘ಆಟೋ ಮತ್ತು ಕ್ಯಾಬ್​ ಚಾಲಕರಿಗೆ ದಿನಸಿ ಕಿಟ್​ ವಿತರಣೆ ‘

ಬೆಂಗಳೂರು: ಆಟೋ/ಕ್ಯಾಬ್ ಚಾಲಕರಿಗೆ ಒನ್ ಟೈಂ 5 ಸಾವಿರ ರೂ.ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಅವರು ಪ್ರತಿಕ್ರಿಯಿಸಿದ್ದು, ಪರಿಹಾರ ಪಡೆಯಲು ಸಾಫ್ಟ್​​ವೇರ್ ಅಪ್ಡೇಟ್ ಆಗಲು ಮಂಗಳವಾರದ ವರೆಗೂ ಕಾಯಬೇಕು ಎಂದು ಅವರು ತಿಳಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್​ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 5 ಸಾವಿರ ಆಟೋ ಚಾಲಕರಿಗೆ ಆಹಾರ ಕಿಟ್​ ವಿತರಣೆ ಬೃಹತ್​ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ಮುಂದಿನ ಮಂಗಳವಾರದ ಹೊತ್ತಿಗೆ ಸಾಫ್ಟ್ವೇರ್ ಸಿದ್ಧವಾಗಲಿದೆ ಬಳಿಕ ನಿಗದಿತ ಅರ್ಜಿ ಭರ್ತಿ ಮಾಡಲು ಚಾಲಕರಿಗೆ ಅವಕಾಶವಿದೆ ಎಂದರು.

ಇನ್ನು ಸರ್ಕಾರ ಚಾಲಕರಿಗೆ ಪರಿಹಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೀತಿವೆ. ಮುಂದಿನ ಮಂಗಳವಾರದಿಂದ ಚಾಲಕರಿಗೆ ಪರಿಹಾರ ಸಿಗಲಿದೆ ಎಂದು ಅವರು ನುಡಿದರು.

ಈ ಕಾರ್ಯಕ್ರಮದಲ್ಲಿ ಸಚಿವ ಕೆ.ಗೋಪಾಲಯ್ಯ ಜೊತೆಗೆ ಕಂದಾಯ ಸಚಿವ ಆರ್​ ಅಶೋಕ್ ಅವರು ಪಾಲ್ಗೊಂಡು ಚಾಲಕರಿಗೆ ಆಹಾರ ಕಿಟ್​ ವಿತರಣೆ ಮಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *