‘ನಾವು ಕುಮಾರಸ್ವಾಮಿ ಸಿಎಂ ಮಾಡಿದ್ದೇವೆ ಈಗ ಅವರು ಡಿ.ಕೆ ಶಿವಕುಮಾರ್​​ ಸಿಎಂ ಮಾಡಲಿ’

ರಾಮನಗರ: ಡಿ.ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಬಹಳ ಕಷ್ಟಪಟ್ಟಿದ್ದರು ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ಹೇಳಿದರು.

ಬುಧವಾರ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಎಲ್ಲಾ ಪಕ್ಷದ ಶಾಸಕರನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡಿದ್ದರು. ತಮ್ಮ ಹಳೇ ವೈರತ್ವವನ್ನು ಮರೆತು ಕುಮಾರಸ್ವಾಮಿಗೆ ಸಪೋರ್ಟ್ ಮಾಡಿದ್ದರು ಎಂದರು.

ಸದ್ಯ ಈಗ ಕುಮಾರಸ್ವಾಮಿ ಅವರ ಮೇಲೆ ಆ ಋಣವಿದೆ. ಆ ಋಣ ತೀರಿಸುವ ಕೆಲಸವನ್ನು ಕುಮಾರಸ್ವಾಮಿಯವರು ಮಾಡಬೇಕು. ಎಂತಹ ಸಂದರ್ಭದಲ್ಲಿಯೂ ಕೂಡ ಡಿ.ಕೆ.ಶಿವಕುಮಾರ್ ಕೈ ಬಿಡಬಾರದು ಅವರನ್ನು ಸಿಎಂ ಮಾಡಲು ಕುಮಾರಸ್ವಾಮಿ ಕೈ ಜೋಡಿಸಬೇಕು ಎಂದು ಅವರು ಡಿಕೆಶಿ ಪರ ಬ್ಯಾಟಿಂಗ್​ ಮಾಡಿದ್ದಾರೆ.

ಇನ್ನು ಸ್ಥಳೀಯವಾಗಿ ನಮ್ಮಲ್ಲಿ ಕೆಲ ಹಗ್ಗಜಗ್ಗಾಟ ಇರಲಿದೆ ಅಷ್ಟೇ. ಆದರೆ, ಮೇಲ್ಮಟ್ಟದಲ್ಲಿ ಜೆಡಿಎಸ್ – ಕಾಂಗ್ರೆಸ್ ಒಂದೇ. ನಾವು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೇವೆ. ಈಗ ಅವರು ಡಿ.ಕೆ ಶಿವಕುಮಾರ್​ ಅವರನ್ನು ಸಿಎಂ ಮಾಡಲಿ ಎಂದು ಹೆಚ್.ಸಿ ಬಾಲಕೃಷ್ಣ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *